ಕರ್ನಾಟಕ

karnataka

ETV Bharat / state

ಹೆಚ್ ​​ಸಿ ಮಹಾದೇವಪ್ಪ, ತನ್ವೀರ್ ಸೇಠ್​ಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡುವಂತೆ ಒತ್ತಾಯ - ಈಟಿವಿ ಭಾರತ ಕನ್ನಡ

ಕಾಂಗ್ರೆಸ್​ ದಲಿತ ನಾಯಕ ಹೆಚ್ ​​ಸಿ ಮಹಾದೇವಪ್ಪ ಹಾಗೂ ಶಾಸಕ ತನ್ವೀರ್ ಸೇಠ್​ಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡುವಂತೆ ಬೆಂಬಲಿಗರು ಒತ್ತಾಯಿಸಿದ್ದಾರೆ.

supporters-urge-to-give-dcm-to-hc-mahadevaswamy-tanveer-seth
ಹೆಚ್ ​​ಸಿ ಮಹಾದೇವಪ್ಪ, ತನ್ವೀರ್ ಸೇಠ್​ಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡುವಂತೆ ಒತ್ತಾಯ

By

Published : May 16, 2023, 10:08 PM IST

ಕಾಂಗ್ರೆಸ್​ ನಾಯಕ ಹೆಚ್ ​​ಸಿ ಮಹಾದೇವಪ್ಪ ಅವರಿಗೆ ಡಿಸಿಎಂ ಹುದ್ದೆ ನೀಡುವಂತೆ ಅಭಿಮಾನಿಗಳ ಒತ್ತಾಯ

ಮೈಸೂರು/ ಶಿವಮೊಗ್ಗ :ಶಾಸಕ ತನ್ವೀರ್​ ಸೇಠ್​ ಮತ್ತು ಕಾಂಗ್ರೆಸ್​ ಹಿರಿಯ ನಾಯಕ ಹೆಚ್​ ಸಿ ಮಹಾದೇವಪ್ಪ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡುವಂತೆ ಬೆಂಬಲಿಗರು ಒತ್ತಾಯಿಸಿದ್ದಾರೆ. ನರಸಿಂಹರಾಜ ಕ್ಷೇತ್ರ ಶಾಸಕರಾದ ತನ್ವೀರ್ ಸೇಠ್ ಅವರಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡುವಂತೆ ಕೆಪಿಸಿಸಿ ಕಾರ್ಯದರ್ಶಿ ಕೆ.ಎಂ. ಅಕ್ಬರ್​ ಅಲೀಂ ಒತ್ತಾಯಿಸಿದರು. ನಗರದ ಖಾಸಗಿ ಹೋಟೆಲ್ ನಲ್ಲಿ ನಡೆದ ಮಾಧ್ಯಮ ಮಾತನಾಡಿದ ಅವರು, ನಂಜನಗೂಡು, ಹೆಚ್.ಡಿ. ಕೋಟೆ, ಚಾಮರಾಜನಗರ, ಪಿರಿಯಾಪಟ್ಟಣ, ಕೊಳ್ಳೇಗಾಲದ ಬ್ಲಾಕ್ ಕಾಂಗ್ರೆಸ್‌ ಅಧ್ಯಕ್ಷರು ತನ್ವೀರ್ ಸೇಠ್ ಅವರನ್ನು ನೂತನ ಸಂಪುಟದಲ್ಲಿ ಅಲ್ಪಸಂಖ್ಯಾತರ ಕೋಟದಲ್ಲಿ ಉಪಮುಖ್ಯಮಂತ್ರಿಯಾಗಿ ಸೇರ್ಪಡೆ ಮಾಡಬೇಕೆಂದು ಮನವಿ ಮಾಡಿದ್ದಾರೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಎಜಾಜ್​​ ಪಾಷಾ, ರೆಹಮತ್ ಜಾನ್ ಬಾಬು, ಖಲೀಂ ವುಲ್ಲಾ , ನಿಜಾಮುದ್ದೀನ್ , ಸಿದ್ದೀಕ್ ಅಹಮದ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಮಹಾದೇವಪ್ಪನವರಿಗೆ ಡಿಸಿಎಂ ಸ್ಥಾನ ನೀಡುವಂತೆ ಅಭಿಮಾನಿಗಳ ಒತ್ತಾಯ :ಶಿವಮೊಗ್ಗದಲ್ಲಿ ಕಾಂಗ್ರೆಸ್ ಹಿರಿಯ ದಲಿತ ನಾಯಕ ಡಾ. ಹೆಚ್ ಸಿ ಮಹಾದೇವಪ್ಪನವರಿಗೆ ನೂತನ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿ ಸ್ಥಾನ ನೀಡಬೇಕೆಂದು ಡಾ. ಹೆಚ್ ಸಿ ಮಹಾದೇವಪ್ಪ ಅಭಿಮಾನಿ ಬಳಗ ಒತ್ತಾಯಿಸಿದ್ದಾರೆ. ಮಹಾದೇವಪ್ಪ ಅವರ ಅಭಿಮಾನಿ ಬಳಗವು ನಗರದ ಮಹಾನಗರ ಪಾಲಿಕೆ ಮುಂಭಾಗದಲ್ಲಿರುವ ಡಾ. ಬಿ ಆರ್ ಅಂಬೇಡ್ಕರ್ ಪುತ್ಥಳಿ ಬಳಿ ಮಹಾದೇವಪ್ಪ ಅವರಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡುವಂತೆ ಒತ್ತಾಯಿಸಿದರು.

ರಾಜ್ಯದಲ್ಲಿ ಈ ಬಾರಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲು ದಲಿತರು ಅತಿ‌ ಹೆಚ್ಚು ಸಂಖ್ಯೆಯಲ್ಲಿ‌ ಮತ ಹಾಕುವ ಮೂಲಕ ಸಹಕರಿಸಿದ್ದಾರೆ. ರಾಜ್ಯದಲ್ಲಿ ದಲಿತ ಮತಗಳನ್ನು ಕ್ರೋಢಿಕರಿಸಲು ದಲಿತ ನಾಯಕರಾದ ಹೆಚ್ ಸಿ ಮಹಾದೇವಪ್ಪ ಅವರು ಪ್ರಮುಖ ಕಾರಣಕರ್ತರು. ಇದರಿಂದ ಮಹಾದೇವಪ್ಪ ಅವರಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡಬೇಕು. ಕಾಂಗ್ರೆಸ್ ಸರ್ಕಾರ ರಚನೆಯಾದ ಕೂಡಲೇ ದಲಿತ ನಾಯಕರಾದ ಮಹಾದೇವಪ್ಪ ಅವರನ್ನು ಉಪ ಮುಖ್ಯಮಂತ್ರಿಯನ್ನಾಗಿ ಮಾಡಿದರೆ, ದಲಿತರಿಗೆ ಕಾಂಗ್ರೆಸ್ ಸರ್ಕಾರ ಗೌರವ ನೀಡಿದಂತಾಗುತ್ತದೆ ಎಂದು ಹೇಳಿದರು. ಈ ವೇಳೆ ಕಾಂಗ್ರೆಸ್ ಮುಖಂಡರಾದ ಎಸ್ ಗಿರೀಶ್, ಜಗದೀಶ್,‌ ಶಶಿಧರ್ ಮತ್ತಿತರರು ಉಪಸ್ಥಿತರಿದ್ದರು.

ಪಂಚಮಸಾಲಿ ಸಮಾಜಕ್ಕೆ ಡಿಸಿಎಂ ಸ್ಥಾನ ನೀಡಿ :ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಲಿಂಗಾಯತ ಪಂಚಮಸಾಲಿ ಸಮಾಜ ಸಂಪೂರ್ಣ ಬೆಂಬಲ ನೀಡಿದೆ. ಆದ್ದರಿಂದ ನಮ್ಮ ಸಮಾಜಕ್ಕೂ ಉಪ ಮುಖ್ಯಮಂತ್ರಿ ಸ್ಥಾನ ನೀಡುವಂತೆ ಮಾಜಿ ಸಚಿವ ಶಶಿಕಾಂತ ನಾಯಿಕ ಕಾಂಗ್ರೆಸ್​ ನಾಯಕರಲ್ಲಿ ಒತ್ತಾಯಿಸಿದ್ದಾರೆ.

ಬೆಳಗಾವಿ ನಗರದಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ಮಾಜಿ ಸಿಎಂ ಜಗದೀಶ್​ ಶೆಟ್ಟರ್ ಕಾಂಗ್ರೆಸ್​ ಸೇರಿದ್ದಾರೆ. ಇವರ ಜೊತೆಗೆ ಅನೇಕ ನಾಯಕರು ಬಿಜೆಪಿ ಪಕ್ಷ ತೊರೆದಿದ್ದರಿಂದ ಬದಲಾವಣೆ ಸಾಧ್ಯವಾಗಿದೆ. ಇದರ ಪರಿಣಾಮ ಕಾಂಗ್ರೆಸ್​ನಿಂದ 39 ಲಿಂಗಾಯತ ಶಾಸಕರು ಗೆದ್ದಿದ್ದಾರೆ. ಇದರಲ್ಲಿ 12 ಪಂಚಮಸಾಲಿ ಘಟಾನುಘಟಿ ನಾಯಕರು ಗೆದ್ದಿದ್ದು, ನಮ್ಮ ಪಂಚಮಸಾಲಿ ಸಮಾಜದಿಂದ ಒಬ್ಬರನ್ನು ಉಪಮುಖ್ಯಮಂತ್ರಿ ಮಾಡಬೇಕೆಂದು ಆಗ್ರಹಿಸಿದರು.

ಇದನ್ನೂ ಓದಿ :ಪಂಚಮಸಾಲಿ ಸಮಾಜಕ್ಕೆ ಡಿಸಿಎಂ ಸ್ಥಾನ ನೀಡಿ : ಮಾಜಿ ಸಚಿವ ಶಶಿಕಾಂತ ನಾಯಿಕ ಆಗ್ರಹ

ABOUT THE AUTHOR

...view details