ಮೈಸೂರು: ಜಿಲ್ಲೆಯ ಅಧಿಕಾರಿಗಳ ಸಂಘರ್ಷದಿಂದ ನನ್ನ ಮನಸ್ಸಿಗೆ ಬಹಳ ನೋವಾಗಿದೆ. ಈ ಗಲಾಟೆ ಎಲ್ಲರ ಗಮನಕ್ಕೆ ಬಂದಿದೆ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರು.
ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿ ಮಾಧ್ಯಮಗಳ ಜೊತೆ ಸಚಿವರು ಮಾತನಾಡಿದರು.

ಮೈಸೂರು ಜಿಲ್ಲೆಯನ್ನು ಕೊರೊನಾ ಮುಕ್ತ ಮಾಡುವಲ್ಲಿ ಒಳ್ಳೆಯ ಕೆಲಸ ಮಾಡುತ್ತಿದ್ದು, ಈ ನಡುವೆ ಈ ರೀತಿಯ ಘಟನೆ ನಡೆದಿದೆ. ಈ ವಿಚಾರವನ್ನು ಮುಖ್ಯಮಂತ್ರಿಗಳು ಹಾಗೂ ಮುಖ್ಯ ಕಾರ್ಯದರ್ಶಿ ಅವರ ಗಮನಕ್ಕೆ ತಂದಿರುವುದಾಗಿ ತಿಳಿಸಿದರು.
ಇದನ್ನೂ ಓದಿ:ನಮ್ಮ ಫೈಟ್ ಕೊರೊನಾ ವಿರುದ್ಧ: ರೋಹಿಣಿ ಸಿಂಧೂರಿ
ಜಿಲ್ಲೆಯನ್ನು ಕೊರೊನಾ ಮುಕ್ತ ಮಾಡಬೇಕು. ಬೇರೆ ವಿಚಾರಕ್ಕೆ ನಾನು ಗಮನ ಕೊಡುವುದಿಲ್ಲ. ಅಧಿಕಾರಿಗಳ ಸಂಘರ್ಷ ಇನ್ನೂ ಎರಡು ದಿನಗಳಲ್ಲಿ ಏನಾಗುತ್ತದೆ ಎಂಬುದನ್ನು ಕಾದು ನೋಡಿ. ಇದು ನನ್ನ ಉಸ್ತುವಾರಿಗೂ ಮೀರಿದೆ ಎಂದರು.