ಕರ್ನಾಟಕ

karnataka

ETV Bharat / state

ಮೈಸೂರು ನಗರದಲ್ಲಿ ಕೆಎಸ್​ಆರ್​ಟಿಸಿ ಬಸ್​ಗಳ ವೇಗದಿಂದ ಅಪಘಾತ ಹೆಚ್ಚಳ - road accidents

ಮೈಸೂರು ನಗರದಲ್ಲಿ 2020ರಲ್ಲಿ 115 ಅಪಘಾತ ಪ್ರಕರಣ ಸಂಭವಿಸಿದ್ದು, ಇದರಲ್ಲಿ 122 ಜನ ಮರಣ ಹೊಂದಿದ್ದಾರೆ. 633 ಜನ ಗಾಯಗೊಂಡಿರುವುದಾಗಿ ಡಿಸಿಪಿ ಗೀತಾ ಪ್ರಸನ್ನ ತಿಳಿಸಿದ್ದಾರೆ.

Geetha prasanna
ಡಿಸಿಪಿ ಗೀತಾ ಪ್ರಸನ್ನ

By

Published : Feb 10, 2021, 5:48 PM IST

ಮೈಸೂರು:ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ ಮೈಸೂರು ಸಹ ಒಂದಾಗಿದ್ದು, ಇಲ್ಲಿ ಕೆಎಸ್​ಆರ್​ಟಿಸಿ ಬಸ್​ಗಳು​ ವೇಗದಿಂದ ಸಂಚರಿಸುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಪಾದಚಾರಿಗಳ ಸಾವು ಸಂಭವಿಸಿದೆ ಎಂದು ಡಿಸಿಪಿ ಗೀತಾ ಪ್ರಸನ್ನ ತಿಳಿಸಿದ್ದಾರೆ.

ಡಿಸಿಪಿ ಗೀತಾ ಪ್ರಸನ್ನ

ಈಟಿವಿ ಭಾರತ್ ಜೊತೆ ಮಾತನಾಡಿದ ಅಪರಾಧ ಹಾಗೂ ಸಂಚಾರಿ ನಿಗಮದ ಡಿಸಿಪಿ ಗೀತಾ ಪ್ರಸನ್ನ, ಪ್ರತಿ ವರ್ಷವೂ ನಗರದಲ್ಲಿ ಅಪಘಾತ ಪ್ರಕರಣಗಳು ಹೆಚ್ಚಾಗುತ್ತಿವೆ. 2018ರಲ್ಲಿ 148 ಅಪಘಾತ ಪ್ರಕರಣಗಳಲ್ಲಿ 159 ಜನರು ಸಾವನ್ನಪ್ಪಿದ್ದು, 880 ಜನ ಗಾಯಗೊಂಡಿರುವುದಾಗಿ ತಿಳಿಸಿದರು.

2019ರಲ್ಲಿ 146 ಅಪಘಾತ ಪ್ರಕರಣಗಳಲ್ಲಿ 148 ಜನರು ಮರಣ ಹೊಂದಿದ್ದು, 866 ಗಾಯಾಳುಗಳಾಗಿದ್ದಾರೆ. 2020ರಲ್ಲಿ 115 ಪ್ರಕರಣಗಳಲ್ಲಿ 122 ಜನ ಮರಣ ಹೊಂದಿದ್ದು, 633 ಜನ ಅಪಘಾತದಲ್ಲಿ ಗಾಯಗೊಂಡಿದ್ದಾರೆ. ಹೆಚ್ಚಾಗಿ ನಗರದ ರಿಂಗ್ ರಸ್ತೆಯಲ್ಲಿ ಅಪಘಾತ ಪ್ರಕರಣ ಹೆಚ್ಚಾಗಿವೆ. ಅಲ್ಲದೇ ನಗರದಲ್ಲಿ ಕೆಎಸ್​ಆರ್​ಟಿಸಿ ಬಸ್​ಗಳು ವೇಗವಾಗಿ ಚಲಿಸುವುದರಿಂದ ಪಾದಚಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಡಿಸಿಪಿ ತಿಳಿಸಿದ್ದಾರೆ.

ABOUT THE AUTHOR

...view details