ಮೈಸೂರು:17ನೇ ವರ್ಲ್ಡ್ 'ಜಾವಾ ಡೇ' ಪ್ರಯುಕ್ತ ವಿವಿಧ ರೀತಿಯ ಹಳೆಯ ಜಾವಾ ಬೈಕುಗಳು ಇಲ್ಲಿನ ರಸ್ತೆಗಳಲ್ಲಿ ಸಂಚರಿಸಿ ಗಮನ ಸೆಳೆದವು.
ಮೈಸೂರಲ್ಲಿ 17ನೇ ವರ್ಲ್ಡ್ 'ಜಾವಾ ಡೇ' ಸಂಭ್ರಮ,ರಸ್ತೆಗಿಳಿದ ಹಳೆಯ ಬೈಕುಗಳು - undefined
ಜಾವಾ ಬೈಕ್‌ನ ಹುಟ್ಟೂರಾದ ಮೈಸೂರಿನಲ್ಲಿ ಪ್ರತಿ ವರ್ಷ ಜುಲೈ 2ನೇ ವಾರದ ಭಾನುವಾರದಂದು 'ವರ್ಲ್ಡ್ ಜಾವಾ ಡೇ' ಆಚರಿಸಲಾಗುತ್ತಿದೆ.

ಪಾರಂಪರಿಕ ನಗರ ಮೈಸೂರು ಜಾವಾ ಬೈಕುಗಳ ಹುಟ್ಟೂರಾಗಿದೆ. ಇಲ್ಲಿ ವಿವಿಧ ರೀತಿಯ ಹಳೆಯ ಜಾವಾ ಬೈಕುಗಳಿದ್ದು ಪ್ರತಿ ವರ್ಷ ಜುಲೈ 2ನೇ ವಾರದ ಭಾನುವಾರದಂದು ವರ್ಲ್ಡ್ ಜಾವಾ ಡೇ ಆಚರಿಸಲಾಗುತ್ತದೆ. ಮೊದಲ ಬಾರಿಗೆ ಹೊಸ ರೂಪದಲ್ಲಿ ಮಾರುಕಟ್ಟೆಗೆ ಬಂದಿರುವ ಜಾವಾ ಬೈಕ್‌ನ ಶೋರೂಂ ಮುಂಭಾಗದಿಂದ ಇಂದು 17ನೇ 'ವರ್ಲ್ಡ್ ಜಾವಾ ಡೇ'ಗೆ ಚಾಲನೆ ನೀಡಲಾಯಿತು. ಈ ಹೆರಿಟೇಜ್ ಜಾವಾರ‍್ಯಾಲಿಯಲ್ಲಿ ಸುಮಾರು 300 ಕ್ಕೂ ಹೆಚ್ಚು ವಿವಿಧ ಬಗೆಯ ಬೈಕುಗಳು ಪಾಲ್ಗೊಂಡಿದ್ದವು.
ಬೈಕ್ರ‍್ಯಾಲಿಕುಕ್ಕರಹಳ್ಳಿ ಸರ್ಕಲ್, ಮೈಸೂರು ವಿವಿ ಕ್ಯಾಂಪಸ್, ಸೆೇಂಟ್ ಜೋಸೆಫ್ ವೃತ್ತ, ವಿವಿ ಪುರಂ ಸರ್ಕಲ್ ಮಾರ್ಗವಾಗಿ ಹಳೆಯ ಜಾವಾ ಫ್ಯಾಕ್ಟರಿ ಬಳಿರ‍್ಯಾಲಿ ಕೊನೆಗೊಳ್ಳಲಿದೆ.