ಕರ್ನಾಟಕ

karnataka

ETV Bharat / state

ಷಬ್-ಎ-ಬರಾತ್ ಅದ್ದೂರಿ ಆಚರಣೆಗೆ ಅವಕಾಶವಿಲ್ಲ.. ಡಿಸಿ ಅಭಿರಾಮ್ ಜಿ.ಶಂಕರ್ - ಮೈಸೂರಿನಲ್ಲಿ ಷಬ್-ಎ-ಬರಾತ್ ಅದ್ದೂರಿ ಆಚರಣೆಗೆ ಅವಕಾಶವಿಲ್ಲ

ಅಂದು ದರ್ಗಾ ಮತ್ತು ಮಸೀದಿಗಳ ಬಾಗಿಲನ್ನು ಮುಚ್ಚಬೇಕೆಂದು ವಕ್ಫ್‌ ಮಂಡಳಿ ಆದೇಶ ಹೊರಡಿಸಿದೆ ಎಂದು ತಿಳಿಸಿದರು.

DC Abhiram G. Shankar
ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್

By

Published : Apr 7, 2020, 5:08 PM IST

ಮೈಸೂರು: ಜಿಲ್ಲೆಯಲ್ಲಿ ಏಪ್ರಿಲ್‌ 9ರಂದು ಸಾರ್ವಜನಿಕವಾಗಿ ಷಬ್-ಎ-ಬರಾತ್‌ನ ಅದ್ದೂರಿಯಾಗಿ ಆಚರಣೆ ಮಾಡಲು ಅವಕಾಶವಿಲ್ಲ. ಮನೆಯಲ್ಲಿಯೇ ಪ್ರಾರ್ಥನೆ ಮಾಡಿಕೊಳ್ಳಿ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ ಶಂಕರ್ ಹೇಳಿದ್ದಾರೆ.

ಜಿಲ್ಲಾಧಿಕಾರಿ ಅಭಿರಾಮ್ ಜಿ ಶಂಕರ್..

ನಾಡಿದ್ದು ನಡೆಯುವ ಷಬ್-ಎ-ಬರಾತ್ ಅದ್ದೂರಿಯಾಗಿ ಆಚರಣೆ ಆಗುವುದಿಲ್ಲ. ಈ ಬಾರಿ ಲಾಕ್‌ಡೌನ್‌ನಿಂದಾಗಿ ಸಾರ್ವಜನಿಕರು ಸೇರಬಾರದು ಎಂಬ ಉದ್ದೇಶದಿಂದ ಮಸೀದಿಗಳು ಮತ್ತು ದರ್ಗಾಗಳಲ್ಲಿ ಧಾರ್ಮಿಕ ಕಾರ್ಯಕ್ರಮ, ಪ್ರಾರ್ಥನೆ ಮಾಡಬಾರದು. ಅಂದು ದರ್ಗಾ ಮತ್ತು ಮಸೀದಿಗಳ ಬಾಗಿಲನ್ನು ಮುಚ್ಚಬೇಕೆಂದು ವಕ್ಫ್‌ ಮಂಡಳಿ ಆದೇಶ ಹೊರಡಿಸಿದೆ ಎಂದು ತಿಳಿಸಿದರು.

ಅಲ್ಲದೇ ಆ ಆದೇಶದ ಪ್ರತಿ ನಮಗೂ ಸಹ ಸಿಕ್ಕಿದ್ದು, ಅದರಂತೆ ಮೈಸೂರಿನಲ್ಲಿ ಅಂದು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಮುಸ್ಲಿಂ ಬಾಂಧವರು ಒಟ್ಟಾಗಿ ಸೇರಿಕೊಳ್ಳದೆ ಮನೆಯಲ್ಲೇ ಕುಳಿತು ಪ್ರಾರ್ಥನೆ ಮಾಡಿಕೊಳ್ಳಿ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

ABOUT THE AUTHOR

...view details