ಮೈಸೂರು:ಕಪಿಲಾ ನದಿ ತೀರದಲ್ಲಿರುವ ನಂಜನಗೂಡಿನ ಶ್ರೀನಂಜುಂಡೇಶ್ವರ ಸ್ವಾಮಿಯ ಪಂಚರಥೋತ್ಸವ ಅಂಗವಾಗಿ ಏರ್ಪಡಿಸಿದ್ದ ತೆಪ್ಪೋತ್ಸವಕ್ಕೆ ಸಾವಿರಾರು ಭಕ್ತರು ಸಾಕ್ಷಿಯಾದರು.
ವಿಜೃಂಭಣೆಯಿಂದ ನೆರವೇರಿದ ನಂಜುಂಡೇಶ್ವರನ ತೆಪ್ಪೋತ್ಸವ - undefined
ಪಂಚರಥೋತ್ಸವ ಅಂಗವಾಗಿ ಏರ್ಪಡಿಸಿದ್ದ ನಂಜನಗೂಡು ನಂಜುಂಡೇಶ್ವರ ಸ್ವಾಮಿಯ ತೆಪ್ಪೋತ್ಸವ ಅದ್ಧೂರಿಯಾಗಿ ನೆರವೇರಿತು.
ನಂಜನಗೂಡು ನಂಜುಂಡೇಶ್ವರ ಸ್ವಾಮಿಯ ತೆಪ್ಪೋತ್ಸವ
ಸಂಜೆ 7.20ರ ಸಮಯದಲ್ಲಿ ಶ್ರೀನಂಜುಂಡೇಶ್ವರ ದೇವಾಲಯದಿಂದ ಪಾರ್ವತಿ ಅಮ್ಮನವರ ಸಮೇತ ಶ್ರೀಕಂಠೇಶ್ವರ ಉತ್ಸವ ಮೂರ್ತಿಯನ್ನು ಕಪಿಲಾ ನದಿಯವರೆಗೆ ಹೊತ್ತು ತರಲಾಯಿತು. ನದಿಯ ದಡದಲ್ಲಿರುವ ಉತ್ಸವ ಮಂಟಪದಲ್ಲಿ ದೇವಸ್ಥಾನದ ಪುರೋಹಿತರು ಧಾರ್ಮಿಕ ವಿಧಿ ವಿಧಾನಗಳನ್ನು ಪೂರೈಸಿ ವಿಶೇಷ ಪೂಜೆ ಸಲ್ಲಿಸಿದರು. ನದಿಯಲ್ಲಿ ಪೂರ್ವ ಪಶ್ಚಿಮವಾಗಿ ತೇಲುವ ದೋಣಿಯನ್ನು ಪ್ರದಕ್ಷಿಣೆ ಹಾಕಿಸುವ ಮೂಲಕ ತೆಪ್ಪೋತ್ಸವಕ್ಕೆ ಭಕ್ತಿಯ ಮೆರಗನ್ನು ನೀಡಲಾಯಿತು. ತೆಪ್ಪೋತ್ಸವವನ್ನು ನೋಡಿದ ಭಕ್ತರು ನಂಜುಂಡೇಶ್ವರನಿಗೆ ಜಯಘೋಷಣೆ ಕೂಗಿದರು.