ಮೈಸೂರು: ಮೈಸೂರಿನ ಟಾಸ್ಕ್ ಫೋಸ್೯ ಅಧ್ಯಕ್ಷರಾಗಿ ಸಂಸದ ಪ್ರತಾಪಸಿಂಹ ಅವರನ್ನು ನೇಮಕ ಮಾಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಘೋಷಣೆ ಮಾಡಿದರು.
ಸರ್ಕಾರಿ ಅತಿಥಿಗೃಹದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಆಕ್ಸಿಜನ್ ಹಾಗೂ ರೆಮ್ಡಿಸಿವಿಯರ್ ಇಂಜೆಕ್ಷನ್ ನೋಡಿ ಕೊಳ್ಳುವುದಕ್ಕಾಗಿ ಟಾಸ್ಕ್ ಪೋಸ್೯ ಕಮಿಟಿ ರಚನೆ ಮಾಡಲಾಗಿದೆ.
ಇದಕ್ಕೆ ಸಂಸದ ಪ್ರತಾಪಸಿಂಹರನ್ನ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಅಧಿಕಾರಿಗಳು ಹಾಗೂ ಸಂಸದರು ಕೊರೊನಾ ವಿಚಾರವಾಗಿ ಉತ್ತಮ ಕೆಲಸ ಮಾಡಲಿ ಎಂಬ ಉದ್ದೇಶವಿದೆ ಎಂದರು.
ಚಾಮರಾಜನಗರದಲ್ಲಿ ಉಂಟಾದ ಸಮಸ್ಯೆ ಮೈಸೂರಿನಲ್ಲಿ ಉಂಟಾಗಬಾರದೆಂದು ವ್ಯವಸ್ಥಿತವಾಗಿ ನಿರ್ವಹಣೆ ಮಾಡುತ್ತಿದ್ದೀವಿ. ವಾರ್ ರೂಮ್‌ಗೆ ಉಸ್ತುವಾರಿಗೆ ಕೆಎಎಸ್ ಅಧಿಕಾರಿಯನ್ನ ನೇಮಕ ಮಾಡುತ್ತೀವಿ.
ಕೊರೊನಾ ಸೋಂಕಿತರಿಗೆ ಯಾವುದೇ ಅವ್ಯವಸ್ಥೆಗಳು ಉಂಟಾಗದಂತೆ ಎಚ್ಚರಿಕೆಯಿಂದ ಕೆಲಸ ಮಾಡಲು ಯೋಜನೆ ರೂಪಿಸಿದ್ದೀವಿ ಎಂದು ತಿಳಿಸಿದರು.
ಸಂಸದ ಪ್ರತಾಪ ಸಿಂಹ ಮಾತನಾಡಿ, ರೆಮ್ಡಿಸಿವಿಯರ್ ಹಾಗೂ ಆಕ್ಸಿಜನ್ ವಿಚಾರದಲ್ಲಿ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಗೊಂದಲ ಉಂಟಾಗಬಾರದು ಎಂಬ ಉದ್ದೇಶದಿಂದ ಟಾಸ್ಕ್ ಪೋಸ್೯ ರಚನೆ ಮಾಡಿ, ಅಧ್ಯಕ್ಷರನ್ನಾಗಿ ನನ್ನನ್ನ ಸಚಿವರು ನೇಮಕ ಮಾಡಿದ್ದಾರೆ ಎಂದರು.