ಮೈಸೂರು:ಪ್ರಧಾನಿ ಮೋದಿ ಅವರು ಭಾನುವಾರ ಏ.9 ರಂದು ಮೈಸೂರು ನಗರಕ್ಕೆ ಭೇಟಿ ನೀಡಲಿದ್ದಾರೆ. ವಾಹನ ಸುಗಮ ಸಂಚಾರ, ಭದ್ರತೆಗಾಗಿ ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ಪ್ರಧಾನ ಮಂತ್ರಿಗಳು ಸಂಚರಿಸುವ ಮಾರ್ಗಗಳಲ್ಲಿ ಗಣ್ಯರ ವಾಹನಗಳ ಸಂಚಾರವನ್ನು ಹೊರತುಪಡಿಸಿ ಇತರೆ ಎಲ್ಲಾ ಮಾದರಿಯ ವಾಹನಗಳ ಸಂಚಾರವನ್ನು ನಿರ್ಭಂಧಿಸಲಾಗಿದೆ. ಕೆಎಸ್ಆರ್ಟಿಸಿ ಬಸ್‌ಗಳಿಗೆ ಪರ್ಯಾಯ ಮಾರ್ಗ ಕಲ್ಪಿಸಲಾಗಿದೆ.
ನಿರ್ಬಂಧಿತ ರಸ್ತೆಗಳು- ಬದಲಿ ಮಾರ್ಗಗಳ ವಿವರ:ಏ.9ರಂದು ಬೆಳಗ್ಗೆ 3ಗಂಟೆಯಿಂದ ಬೆಳಗ್ಗೆ 7 ಗಂಟೆಯವರೆಗೆ ನಂಜನಗೂಡು ರಿಂಗ್ ರಸ್ತೆ ಜಂಕ್ಷನ್‌ನಿಂದ ಎಲೆತೋಟ ಜಂಕ್ಷನ್ ರಾಜಹಂಸ ಜಂಕ್ಷನ್ ಗನ್ ಹೌಸ್ ಜಂಕ್ಷನ್‌ವರೆಗೆ, ರಾಜಹಂಸ ಜಂಕ್ಷನ್‌ನಿಂದ ಮಹಾರಾಣಾ ಪ್ರತಾಪಸಿಂಹ ವೃತದವರೆಗೆ ಎಲ್ಲಾ ಮಾದರಿಯ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ. ಪರ್ಯಾಯ ಮಾರ್ಗವಾಗಿ ನಂಜನಗೂಡು ರಸ್ತೆ ಮೂಲಕ ಸಂಚರಿಸುವ ವಾಹನಗಳು ಕಡಕೊಳ- ದಡದಬಹಳ್ಳಿ- ರಮಾಬಾಯಿನಗರ- ರಾಂಪುರ ರಿಂಗ್ ಮೂಲಕ ಹಾಗೂ ಟಿ. ನರಸೀಪುರ ರಸ್ತೆಯಲ್ಲಿ ಸಂಚರಿಸುವ ವಾಹನಗಳು ಸಂಗೊಳ್ಳಿ ರಾಯಣ್ಣ ವೃತದ ಬಳಿ ಬಲ ತಿರುವು ಪಡೆದು ವಾಯು ವಿಹಾರ ಮಾರ್ಗದಲ್ಲಿ ಸಂಚರಿಸಲು ಅವಕಾಶವನ್ನು ಕಲ್ಪಿಸಲಾಗಿದೆ.
ಏ.9 ರಂದು ಬೆಳಗ್ಗೆ 6ಗಂಟೆಯಿಂದ ಮಧ್ಯಾಹ್ನ 1ರವರೆಗೆ ಹುಣಸೂರು ರಸ್ತೆಯಲ್ಲಿನ ಅಟಲ್ ಬಿಹಾರಿ ವಾಜಪೇಯಿ ವೃತ್ತದಿಂದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದವರೆಗೆ, ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದಿಂದ ರಾಮಸ್ವಾಮಿ ವೃತ್ತದವರೆಗೆ, ಕೆ.ಆರ್.ಬಿ ರಸ್ತೆಯಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಆರ್ಚ್ ಗೇಟ್ ಜಂಕ್ಷನ್ ನಿಂದ ಏಕಲವ್ಯ ವೃತ್ತದವರೆಗೆ, ರಾಧಾಕೃಷ್ಣ ಮಾರ್ಗದಲ್ಲಿ ಕೌಟಿಲ್ಯ ವೃತ್ತದಿಂದ ಮೂಡಾ ಜಂಕ್ಷನ್‌ವರೆಗೆ ಎಲ್ಲ ಮಾದರಿಯ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ. ಕರ್ನಾಟಕ ಮುಕ್ತ ವಿಶ್ವ ವಿದ್ಯಾಲಯದ ಘಟಿಕೋತ್ಸವ ಭವನದ ಮುಖ್ಯ ದ್ವಾರದಿಂದ ವೆಂಕಟರಮಣಯ್ಯ ವೃತ್ತದವರೆಗೆ ಗಣ್ಯರ ಭದ್ರತಾ ಹಿತದೃಷ್ಟಿಯಿಂದ ಗಣ್ಯರ ವಾಹನವು ವಿರುದ್ಧ ದಿಕ್ಕಿನಲ್ಲಿ ಸಂಚರಿಸಲಿದೆ ಎಂದು ತಿಳಿಸಿದ್ದಾರೆ. ಬದಲಿ ಮಾರ್ಗವಾಗಿ ಹುಣಸೂರು ರಸ್ತೆಯಲ್ಲಿ ಸಂಚರಿಸುವ ವಾಹನಗಳು ವಾಜಪೇಯಿ ಜಂಕ್ಷನ್ ಬಳಿ ಬಲ ಅಥವಾ ಎಡ ತಿರುವು ಪಡೆದು ರಿಂಗ್ ರಸ್ತೆಯಲ್ಲಿ ಸಂಚರಿಸುವುದು. ಕೆ.ಆರ್.ಎಸ್ ರಸ್ತೆಯಲ್ಲಿ ಸಂಚರಿಸುವ ವಾಹನಗಳು ದಾಸಪ್ಪ ವೃತ್ತದ ಬಳಿ ಎಡ ತಿರುವು ಪಡೆದು ರೈಲ್ವೆ ನಿಲ್ದಾಣ ವೃತ್ತ, ಇರ್ವಿನ್ ರಸ್ತೆ ಮೂಲಕ ಹಾಗೂ ಬೋಗಾದಿ ರಸ್ತೆಯಲ್ಲಿ ಸಂಚರಿಸುವ ವಾಹನಗಳು ಡಾ.ಪದ್ಮ ವೃತ್ತದಲ್ಲಿ ಬಲ ತಿರುವು ಪಡೆದು ಕಾಂತರಾಜ ಅರಸ್ ರಸ್ತೆಯಲ್ಲಿ ಸಂಚರಿಸಲು ವ್ಯವಸ್ಥೆ ಕಲ್ಪಿಸಲಾಗಿದೆ.
ನಗರ ಪೊಲೀಸ್ ಆಯುಕ್ತ ಬಿ ರಮೇಶ್ ಮಾಹಿತಿ:ಕೆ.ಎಸ್.ಆರ್.ಟಿ.ಸಿ ಗ್ರಾಮಾಂತರ ಸಾರಿಗೆ ಬಸ್ಸುಗಳ ಮಾರ್ಗ ಬದಲಾವಣೆಗೆ ಸಂಬಂಧಿಸಿದಂತೆ ನಗರದ ಹೊರ ಭಾಗಗಳಿಂದ ಬರುವ ಹಾಗೂ ನಗರದಿಂದ ಹೊರ ಹೋಗುವ ಕೆ.ಎಸ್.ಆರ್.ಟಿ.ಸಿ ಗ್ರಾಮಾಂತರ ಸಾರಿಗೆ ಬಸ್ಸುಗಳು ಏ.8ರಂದು ಮದ್ಯಾಹ್ನ 03 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಮತ್ತು ಏಪ್ರಿಲ್ 9ರಂದು ಬೆಳಿಗ್ಗೆ 3ರಿಂದ ಬೆಳಿಗ್ಗೆ 7 ಗಂಟೆಯವರೆಗೆ ಮೈಸೂರು- ನಂಜನಗೂಡು ರಸ್ತೆಮೂಲಕ ನಗರಕ್ಕೆ ಆಗಮಿಸುವ ಮತ್ತು ನಿರ್ಗಮಿಸುವ ಬಸ್ಸುಗಳು ನಂಜನಗೂಡು ರಸ್ತೆ- ಕಡಕೊಳ- ಬ್ಯಾತಹಳ್ಳಿ- ದಡದಹಳ್ಳಿ- ರಮಾಬಾಯಿನಗರ ಜಂಕ್ಷನ್- ರಿಂಗ್ ರಸ್ತೆ- ಶ್ರೀರಾಂಪುರ ರಿಂಗ್ ರಸ್ತೆ ಜಂಕ್ಷನ್ ಬಲ ತಿರುವು- ಮಾನಂದವಾಡಿ ರಸ್ತೆ ಶ್ರೀನಿವಾಸ ವೃತ್ತ- ಎಡ ತಿರುವು- ಜೆ.ಎಲ್.ಬಿ ರಸ್ತೆ- ರಾಮಸ್ವಾಮಿ ವೃತ್ತ ಚಾಮರಾಜ ಜೋಡಿ ರಸ್ತೆ- ಬಸವೇಶ್ವರ ವೃತ್ತ- ಗನ್ ಹೌಸ್ ಜಂಕ್ಷನ್- ಹಾಡಿರ್ಂಜ್ ವೃತ್ತ ಬಿಎನ್ ರಸ್ತೆಯ ಮೂಲಕ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ ತಲುಪುವುದು ಹಾಗೂ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಿಂದ ಬಿ.ಎನ್.ರಸ್ತೆ- ಹಾಡಿರ್ಂಜ್ ವೃತ್ತ- ಗನ್ ಹೌಸ್ ಜಂಕ್ಷನ್ ಚಾಮರಾಜ ಜೋಡಿ ರಸ್ತೆ- ರಾಮಸ್ವಾಮಿ ವೃತ್ತ-ಎಡ ತಿರುವು- ಜೆ.ಎಲ್.ಬಿ ರಸ್ತೆ ಶ್ರೀನಿವಾಸ ವೃತ್ತ- ಬಲ ತಿರುವು- ಮಾನಂದವಾಡಿ ರಸ್ತೆ- ಶ್ರೀರಾಂಪುರ ಜಂಕ್ಷನ್ ರಿಂಗ್ ರಸ್ತೆ- ರಮಾಬಾಯಿ ನಗರ ಜಂಕ್ಷನ್- ಬಲ ತಿರುವು- ದಡದಹಳ್ಳಿ- ಬ್ಯಾತಹಳ್ಳಿ- ಕಡಕೊಳ ನಂಜನಗೂಡು ರಸ್ತೆ ಮೂಲಕ ನಿರ್ಗಮಿಸುವಂತೆ ವ್ಯವಸ್ಥೆ ಕಲ್ಪಿಸಲಾಗಿದೆ.
ಏ.9ರಂದು ಬೆಳಿಗ್ಗೆ 6ರಿಂದ ಮಧ್ಯಾಹ್ನ1ರವರೆಗೆ ಮಡಿಕೇರಿ, ಹಾಸನ ಕಡೆಯಿಂದ ಹುಣಸೂರು ರಸ್ತೆ ಮೂಲಕ ಮೈಸೂರು ನಗರಕ್ಕೆ ಆಗಮಿಸುವ ಬಸ್ಸುಗಳು ಹುಣಸೂರು ರಸ್ತೆ- ಅಟಲ್ ಬಿಹಾರಿ ವಾಜಪೇಯಿ ವೃತ್ತ- ಎಡ ತಿರುವು- ರಿಂಗ್ ರಸ್ತೆ - ರಾಯಲ್ ಇನ್ ಜಂಕ್ಷನ್- ನಾಡಪ್ರಭು ಕೆಂಪೇಗೌಡ ಜಂಕ್ಷನ್-ಬಲ ತಿರುವು-ಟಿಪ್ಪು ವೃತ್ತ-ಫೌಂಟೆನ್ ವೃತ್ತ-ಸರ್ಕಾರಿ ಭವನದ ಉತ್ತರ ದ್ವಾರದ ಜಂಕ್ಷನ್- ಬಿ.ಎನ್.ರಸ್ತೆ ಮೂಲಕ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ ತಲುಪುವುದು. ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಿಂದ ಇರ್ವಿನ್ ರಸ್ತೆ- ನೆಹರು ವೃತ್ತ- ಆಯುರ್ವೇದಿಕ್ ವೃತ್ತ- ಜೆ.ಕೆ.ಗೌಂಡ್ ಜಂಕ್ಷನ್- ರೈಲ್ವೇ ನಿಲ್ದಾಣ ವೃತ್ತ - ದಾಸಪ್ಪ ವೃತ್ತ - ಬಲ ತಿರುವು - ಕೆ.ಆರ್.ಎಸ್ ರಸ್ತೆ - ವಿ.ವಿ.ಪುರಂ ಜಂಕ್ಷನ್- ರಾಯಲ್ ಇನ್ ಜಂಕ್ಷನ್- ಎಡ ತಿರುವು- ರಿಂಗ್ ರಸ್ತೆ- ಅಟಲ್ ಬಿಹಾರಿ ವಾಜಪೇಯಿ ವೃತ್ತ- ಬಲ ತಿರುವು- ಹುಣಸೂರು ರಸ್ತೆ ಮೂಲಕ ನಿರ್ಗಮಿಸುವಂತೆ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಮೈಸೂರು ನಗರ ಪೋಲಿಸ್ ಆಯುಕ್ತರಾದ ಬಿ ರಮೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ:ಬಂಡೀಪುರ, ನಾಗರಹೊಳೆ ಸಫಾರಿಯಲ್ಲಿ ಬಾರ್ಡರ್, ನಾಜೀರ್ ಕಟ್ಟೆ ಘರ್ಜನೆ.. ಈ ಹೆಸರಿನಿಂದಲೇ ಹುಲಿಗಳು ಪ್ರಸಿದ್ಧಿ