ಕರ್ನಾಟಕ

karnataka

ETV Bharat / state

ಜುಬಿಲಂಟ್ ವಿಚಾರದಲ್ಲಿ ಶಾಸಕ ಹರ್ಷವರ್ಧನ್ ಯೂ ಟರ್ನ್! - ಜುಬಿಲಿಯೆಂಟ್ ಕಾರ್ಖಾನೆ

ಅಂದು ನಂಜನಗೂಡಿನ‌ ಜುಬಿಲಂಟ್ ಕಾರ್ಖಾನೆ ವಿರುದ್ಧ ತೀವ್ರ ಅಸಮಾಧಾನ ಹೊರ ಹಾಕಿದ್ದ ಶಾಸಕ ಹರ್ಷವರ್ಧನ್, ಇದೀಗ ಕಾರ್ಖಾನೆ ಬಗ್ಗೆ ಮೃದು ಧೋರಣೆಯ ಮಾತಗಳನ್ನಾಡಿದ್ದಾರೆ.

mla
mla

By

Published : May 18, 2020, 10:32 AM IST

ಮೈಸೂರು: ನಂಜನಗೂಡಿನ‌ ಜುಬಿಲಂಟ್ ಕಾರ್ಖಾನೆ ವಿಚಾರದಲ್ಲಿ ಶಾಸಕ ಹರ್ಷವರ್ಧನ್ ಯೂ ಟರ್ನ್ ತೆಗೆದುಕೊಂಡಿದ್ದಾರೆ. ಕಾರ್ಖಾನೆ ನೌಕರನಿಂದ‌ ಸೋಂಕು ಹರಡಿದ್ದರಿಂದ ತೀವ್ರ ಅಸಮಾಧಾನ ಹೊರ ಹಾಕಿದ್ದ ಶಾಸಕರು, ನಂಜನಗೂಡಿನಲ್ಲಿ ಕೊರೊನಾ ವ್ಯಾಪಕವಾಗಿ ಹರಡಲು ಕಾರಣವಾದ ಜುಬಿಲಂಟ್ ವಿರುದ್ಧ ಸಿಡಿದೆದ್ದಿದ್ದರು.

ಆದರೆ, ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜುಬಿಲಂಟ್ ಕಾರ್ಖಾನೆ ಬಗ್ಗೆ ಮೃದು ಧೋರಣೆಯ ಮಾತುಗಳನ್ನಾಡಿದ್ದಾರೆ. 50 ಸಾವಿರ ಕಿಟ್ ನೀಡುವಂತೆ ಸಂಧಾನ ಮಾಡಿಕೊಂಡು, ಜೊತೆಗೆ ಸುತ್ತಮುತ್ತಲಿನ ಹತ್ತು ಗ್ರಾಮಗಳನ್ನ ದತ್ತು ಪಡೆಯುವಂತೆ ಸೂಚನೆ ನೀಡಿದ್ದಾರೆ.

ಜುಬಿಲಂಟ್ ವಿಚಾರದಲ್ಲಿ ಶಾಸಕ ಹರ್ಷವರ್ಧನ್ ಮೃದು ಧೋರಣೆ

ಜುಬಿಲಂಟ್ ಕಂಪನಿಯ ಮೊದಲ ಕೊರೊನಾ ಸೋಂಕಿತನಿಂದ (ರೋಗಿ ಸಂಖ್ಯೆ 52 ಈಗ ಸಂಪೂರ್ಣ ಗುಣಮುಖರಾಗಿದ್ದಾರೆ) ನೌಕರರಿಗೆ ಕೊರೊನಾ ಸೋಂಕು ಹರಡಿದ್ದರಿಂದ ಇದರ ಬಗ್ಗೆ ತನಿಖೆ ಮಾಡುವಂತೆ ಹಾಗೂ ಈತನನ್ನು ಸಸ್ಪೆಂಡ್ ಮಾಡುವಂತೆ ಪಟ್ಟು ಹಿಡಿದಿದ್ದರು. ಇದೀಗ ಈ ವಿಚಾರದಲ್ಲೂ ಮೃದು ಧೋರಣೆ ತೋರಿ, ಕಾರ್ಖಾನೆ ಆಡಳಿತ ಮಂಡಳಿ ಹಾಗೂ ಜಿಲ್ಲಾಧಿಕಾರಿ ಮನವಿಗೆ ಸ್ಪಂದಿಸಿರುವುದಾಗಿ ಹೇಳಿದ್ದಾರೆ.

ಕೊರೊನಾ ಸೋಂಕಿನಿಂದ ಸಂಪೂರ್ಣ ಗುಣಮುಖನಾಗಿರುವ ಈತ (ರೋಗಿ ಸಂಖ್ಯೆ 52) ಡಿಪ್ರೆಷನ್​ಗೆ ಹೋಗಿರುವ ಬಡ ಕಾರ್ಮಿಕ, ಏನಾದರೂ ಹೆಚ್ಚು ಕಡಿಮೆ ಮಾಡಿಕೊಂಡರೆ ಕಷ್ಟವೆಂದು ಜಿಲ್ಲಾಧಿಕಾರಿಗಳು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದರು.

ನಂಜನಗೂಡು ಶಾಸಕ ಹರ್ಷವರ್ಧನ್ ಅವರ ಇಂದಿನ ಹೇಳಿಕೆ ಗಮನಿಸಿದ್ರೆ, ಜುಬಿಲಂಟ್ ಕಾರ್ಖಾನೆ ವಿರುದ್ಧ ಆದೇಶಿಸಿದ ತನಿಖೆ ಹಳ್ಳ ಹಿಡಿದಂತೆ ಹಾಗೂ ಸೋಂಕು ಕಾಣಿಸಿಕೊಳ್ಳಲು ಕಾರಣ ಪತ್ತೆ ಮಾಡುವ ವಿಚಾರಕ್ಕೂ ಫುಲ್ ಸ್ಟಾಪ್ ಬೀಳಬಹುದು ಎನ್ನಲಾಗ್ತಿದೆ.

ABOUT THE AUTHOR

...view details