ಕರ್ನಾಟಕ

karnataka

ETV Bharat / state

ಅರ್ಜುನನ್ನು ಇನ್ಮುಂದೆ ಟಚ್​ ಮಾಡೋರೆ ಇಲ್ಲ... ಕಾಡಾನೆಗಳ ಕೀಟಲೆಯಿಂದ ಸೇಫ್​ ಮಾಡಿದ ಸಿಬ್ಬಂದಿ

ಗಜಪಡೆ‌ಯ ಕ್ಯಾಪ್ಟನ್ ಎನಿಸಿಕೊಂಡಿರುವ ಆನೆ ಅರ್ಜುನನ ಭದ್ರತೆಗಾಗಿ ಕ್ಯಾಂಪ್ ಸುತ್ತ ಟ್ರಂಚ್ ಹೊಡೆದಿರುವ ಸಿಬ್ಬಂದಿ, ಕಾಡಾನೆಗಳ ಕಾಟದಿಂದ ತಪ್ಪಿಸಿದ್ದಾರೆ.

By

Published : Jul 17, 2019, 3:15 AM IST

ಅರ್ಜುನನ ಭದ್ರತೆಗೆ ಟ್ರಂಚ್​

ಮೈಸೂರು: ಕಾಡಾನೆಗಳ ಕಿಟಾಲೆ ತಪ್ಪಿಸಲು ಗಜಪಡೆ ಕ್ಯಾಪ್ಟನ್ ಅರ್ಜುನನಿರುವ ಕ್ಯಾಂಪ್ ಸುತ್ತ, ಟ್ರಂಚ್ ಹೊಡೆದು ಸೇಫ್ ಮಾಡಲಾಗಿದೆ.

ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿರುವ ಬಳ್ಳೆ ಶಿಬಿರದಲ್ಲಿ ದಸರಾ ಆನೆ ಅರ್ಜುನ ಹಾಗೂ ಕುಮಾರಸ್ವಾಮಿ ಎಂಬ ಎರಡು ಆನೆಗಳಿವೆ. ಕಾಡಿನಲ್ಲಿರುವ ಬಳ್ಳೆ ಶಿಬಿರಕ್ಕೆ ಸಾಕಾನೆಗಳ‌ ಮೇಲೆ ಕಾಡಾನೆಗಳು ಆಗಾಗ ಕಿಟಾಲೆ ಮಾಡಿ ದಾಳಿ ಮಾಡುತ್ತವೆ. ಹೀಗಾಗಿ ಒಂದು ತಿಂಗಳ ಹಿಂದೆ ಆನೆ ಶಿಬಿರದ ಸುತ್ತ ಅರಣ್ಯ ಸಿಬ್ಬಂದಿ ಟ್ರಂಚ್ ಹೊಡೆದಿರುವುದರಿಂದ ಕಾಡಾನೆಗಳ ಕಾಟ ತಪ್ಪಿದೆಯಂತೆ.

ಆನೆ ಅರ್ಜುನನ ಭದ್ರತೆಗಾಗಿ ಕ್ಯಾಂಪ್ ಸುತ್ತ ಟ್ರಂಚ್

ಶಿಬಿರದೊಳಕ್ಕೆ ಅರ್ಜುನ ಹಾಗೂ ಕುಮಾರಸ್ವಾಮಿ ಸಾಕಾನೆಗಳಿಗೆ ಮಾರ್ಗ ತೋರಿಸಿರುವುದರಿಂದ ಮಾವುತರಿಲ್ಲದಿದ್ದರೂ, ಕಾಡಿನಲ್ಲಿ ಆಹಾರ ತಿಂದು ತಮ್ಮ ಶಿಬಿರಕ್ಕೆ ಹೋಗುತ್ತವೆ. ಇನ್ನು ಇತರೆ ಆನೆಗಳು ಈ ಪ್ರದೇಶಕ್ಕೆ ಯಾವುದೇ ಕಾರಣಕ್ಕೂ ಬರಲಾಗುವುದಿಲ್ಲ. ಶಿಬಿರದ ಒಳಗಿರುವ ಈ ಎರಡು ಆನೆಗಳು ಯಾವುದೇ ತೊಂದರೆ ಇಲ್ಲದೆ ಇರಲು ಅರಣ್ಯ ಇಲಾಖೆ ಈ ಕೆಲಸ ಮಾಡಿದೆ.

For All Latest Updates

TAGGED:

ABOUT THE AUTHOR

...view details