ಮೈಸೂರು: ಪೋಷಕರಿಗೆ ಹೆದರಿದ ಪ್ರೇಮಿಗಳು ಕಾವೇರಿ ನದಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಇದಕ್ಕೂ ಮೊದಲು ಆತ್ಮಹತ್ಯೆಗೆ ಕಾರಣ ತಿಳಿಸಿ ವಿಡಿಯೋ ಮಾಡಲಾಗಿದೆ.
ಕಾವೇರಿ ನದಿಗೆ ಹಾರಿ ಪ್ರೇಮಿಗಳು ಆತ್ಮಹತ್ಯೆ: ಸಾಯುವ ಮುನ್ನ ವಿಡಿಯೋ ಮಾಡಿದ ಯುವಕ! - carvery river news
ಹೆಮ್ಮಿಗೆ ಸೇತುವೆ ಬಳಿಗೆ ದ್ವಿಚಕ್ರ ವಾಹನದಲ್ಲಿ ಬಂದು ಸೇತುವೆಯ ಬಳಿ ತನ್ನ ಮೊಬೈಲ್ನಲ್ಲಿ ವಿಡಿಯೋ ಮಾಡಿ ನಂತರ ಇಬ್ಬರೂ ಒಟ್ಟಿಗೆ ನೀರಿಗೆ ಹಾರಿದ್ದಾರೆ.
ಕಾವೇರಿ ನದಿಗೆ ಹಾರಿ ಆತ್ಮಹತ್ಯೆ
ಟಿ. ನರಸೀಪುರ ಬಳಿಯ ಹೆಮ್ಮಿಗೆ ಸೇತುವೆ ಬಳಿ ಈ ದುರ್ಘಟನೆ ನಡೆದಿದೆ. 21 ವರ್ಷದ ಮನು ಹಾಗೂ 16 ವರ್ಷದ ಬಾಲಕಿ ಆತ್ಮಹತ್ಯೆಗೆ ಶರಣಾದವರು. ಹೆಮ್ಮಿಗೆ ಸೇತುವೆ ಬಳಿಗೆ ದ್ವಿಚಕ್ರ ವಾಹನದಲ್ಲಿ ಬಂದು ಸೇತುವೆಯ ಬಳಿ ತಮ್ಮ ಮೊಬೈಲ್ನಲ್ಲಿ ವಿಡಿಯೋ ಮಾಡಿ ನಂತರ ಇಬ್ಬರೂ ಒಟ್ಟಿಗೆ ನೀರಿಗೆ ಹಾರಿದ್ದಾರೆ.
ಬಾಲಕಿ ಶವ ಸಿಕ್ಕಿದ್ದು, ಯುವಕ ಮನು ಮೃತದೇಹಕ್ಕಾಗಿ ಹುಡುಕಾಟ ನಡೆಸಲಾಗಿದೆ. ಘಟನೆ ಸಂಬಂಧ ತಲಕಾಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.