ಕರ್ನಾಟಕ

karnataka

ETV Bharat / state

ಕುಂಭಮೇಳದಲ್ಲಿ ಮಿಂದೇಳಲು ಸಿದ್ಧವಾಗಿದೆ ತೇಲುವ ಸೇತುವೆ

ಪ್ರಸಿದ್ಧ 11ನೇ ಕುಂಭಮೇಳಕ್ಕೆ ಟಿ.ನರಸೀಪುರದ ತಿರುಮಲಕೂಡಲಿನ ತ್ರಿವೇಣಿ ಸಂಗಮದಲ್ಲಿ ಭಾರತೀಯ ಸೇನೆ ತಾತ್ಕಾಲಿಕ ತೇಲುವ ಸೇತುವೆ ನಿರ್ಮಾಣ ಮಾಡಿದೆ. ಇದರಿಂದ ಸಂಗಮದ ಮಧ್ಯಭಾಗಕ್ಕೆ ತೆರಳಿ ಪುಣ್ಯ ಸ್ನಾನ ಮಾಡಲು ಭಕ್ತರಿಗೆ ಅನುಕೂಲವಾಗಲಿದೆ

By

Published : Feb 15, 2019, 6:03 PM IST

ಮೈಸೂರು: ಟಿ.ನರಸೀಪುರದ ತಿರುಮಲಕೂಡಲಿನ ತ್ರಿವೇಣಿ ಸಂಗಮದಲ್ಲಿ ನಡೆಯಲಿರುವ ಪ್ರಸಿದ್ಧ 11ನೇ ಕುಂಭಮೇಳಕ್ಕೆ ತೇಲುವ ಸೇತುವೆ ನಿರ್ಮಾಣವಾಗಿದ್ದು, ಸೇನೆ ನಿರ್ಮಿಸಿದ ಈ ತೇಲುವ ಸೇತುವೆ ಹಲವು ವಿಶಿಷ್ಟತೆಗಳಿಂದ ಕೂಡಿದೆ.

ಇದೇ ತಿಂಗಳ 17 ರಿಂದ ಮೂರು ದಿನಗಳ ಕಾಲ‌ ಟಿ.ನರಸೀಪುರದ ತಿರುಮಲಕೂಡಿನಲ್ಲಿ ನಡೆಯಲಿರುವ 11ನೇ ಕುಂಭಮೇಳಕ್ಕೆ ಸೇನೆ ನಿರ್ಮಿಸಿರುವ ತೇಲುವ ಸೇತುವೆ ಗುಂಜನರಸಿಂಹಸ್ವಾಮಿ ದೇವಲಯ ಭಾಗದಿಂದ ನದಿಯ ಮಧ್ಯಭಾಗದಲ್ಲಿ ನಿರ್ಮಾಣವಾಗಿರುವ ಸಭಾ ಮಂಟಪ ಸೇರಿದಂತೆ ಇತರ ವೇದಿಕೆಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಜೊತೆಗೆ ಅಗಸ್ತ್ಯತ್ವೇಶ್ವರ ದೇವಲಯಕ್ಕೂ, ಸಂಗಮದ ಮಧ್ಯಭಾಗಕ್ಕೆ ತೆರಳಿ ಪುಣ್ಯ ಸ್ನಾನ ಮಾಡಲು ಭಕ್ತರಿಗೆ ಸೇತುವೆಯಿಂದ ಅನುಕೂಲವಾಗಿದೆ.

ಭಾರತೀಯ ಸೇನೆಯ 140 ಮಂದಿ ಯೋಧರು 160 ಮೀಟರ್ ಉದ್ದದ 3 ಮೀಟರ್ ಅಗಲದ ಈ ತೇಲುವ ಸೇತುವೆಯನ್ನ 3 ದಿನ ಹಗಲು ರಾತ್ರಿ ಕೆಲಸ ಮಾಡಿ ನಿರ್ಮಿಸಿದ್ದಾರೆ.

ABOUT THE AUTHOR

...view details