ಮೈಸೂರು:ರಾಜ್ಯದ ಎಲ್ಲ ಸಂಸದರು ಕಾವೇರಿ ಜಲಾನಯನ ಪ್ರದೇಶದಿಂದ ತಮಿಳುನಾಡಿಗೆ ನೀರು ಬಿಡದಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕಿದೆ ಎಂದು ಕಾವೇರಿ ತಾಂತ್ರಿಕ ಸಲಹಾ ಸಮಿತಿ ಮನವಿ ಮಾಡಿದೆ.
ತಮಿಳುನಾಡಿಗೆ ನೀರು ಬಿಡದಂತೆ ಕಾವೇರಿ ತಾಂತ್ರಿಕ ಸಲಹಾ ಸಮಿತಿ ಮನವಿ
ರಾಜ್ಯದ ಎಲ್ಲ ಸಂಸದರು ಕಾವೇರಿ ಜಲಾನಯನ ಪ್ರದೇಶದಿಂದ ತಮಿಳುನಾಡಿಗೆ ನೀರು ಬಿಡದಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕಿದೆ ಎಂದು ಕಾವೇರಿ ತಾಂತ್ರಿಕ ಸಲಹಾ ಸಮಿತಿ ಮನವಿ ಮಾಡಿದೆ.
ನಗರದ ದಿ ಇನ್‌ಸ್ಟಿಟ್ಯೂಟ್ ಆಫ್ ಎಂಜಿನಿಯರಿಂಗ್ ಸಂಸ್ಥೆಯಲ್ಲಿ ನಡೆದ ಕಾವೇರಿ ತಾಂತ್ರಿಕ ಸಲಹಾ ಸಮಿತಿ ಸಭೆಯಲ್ಲಿ ಪ್ರಮುಖ ಎಂಜಿನಿಯರುಗಳು ಈ ಕುರಿತು ಚರ್ಚಿಸಿದ್ದು, ಮುಂದಿನ ಮೂರು ದಿನಗಳೊಳಗೆ ಕರಡು ತಯಾರಿಸಿ ರಾಜ್ಯ ಸರ್ಕಾರಕ್ಕೆ ಸಲ್ಲಿಸುವುದು ಮತ್ತು ರಾಜ್ಯದ 28 ಸಂಸದರಿಗೂ ಕರಡು ಕಳುಹಿಸುವುದರ ಬಗ್ಗೆಯೂ ನಿರ್ಣಯ ತೆಗೆದುಕೊಳ್ಳಲಾಯಿತು. ಕಳೆದ ತಿಂಗಳೂ ಸಭೆ ನಡೆಸಿದಾಗ ಕರ್ನಾಟಕ ಸರ್ಕಾರ ಮೇಲ್ಮನವಿ ಸಲ್ಲಿಸಿ ಮಳೆ ಆರಂಭವಾಗದಿದ್ದರಿಂದ ಜಲಾಶಯದಲ್ಲಿನ ನೀರಿನ ಪ್ರಮಾಣ ಕುಡಿಯುವ ನೀರಿಗೆ ಬೇಕು. ಮಳೆ ಶುರುವಾದ ಮೇಲೆ ಎಲ್ಲಾ ಜಲಾಶಯಗಳಿಗೆ ಒಳ ಹರಿವು ಜಾಸ್ತಿ ಆದರೆ ನೀರು ಬಿಡುತ್ತೇವೆ ಎಂದಿತ್ತು ಎಂದರು.
ಭಾರತೀಯ ಹವಮಾನ ಇಲಾಖೆಯವರ ಅಭಿಪ್ರಾಯ ಪಡೆದು ಕಾವೇರಿ ಜಲಾನಯನ ಪ್ರದೇಶದ ಎಲ್ಲಾ ಜಲಾಶಯಗಳಿಗೆ ಒಳ ಹರಿವು ಜಾಸ್ತಿಯಾದ ನಂತರ ನೀರು ಬಿಡುವಂತೆ ಸೂಚಿಸಿತ್ತು. ಕೇಂದ್ರದ ತಾಂತ್ರಿಕ ಸಮಿತಿ ಜಲಾಶಯ ಪರಿಶೀಲಿಸಿ, ವರದಿ ಸಲ್ಲಿಸಿದ್ದರಿಂದ ಇವತ್ತು ಸಭೆ ಮಾಡಿ ಮಳೆ ಬಂದಾಗ ನೀರು ಬಿಡುವಂತೆಯೂ ಹಾಗೂ ಮುಂಗಾರು ತಡವಾದ್ದರಿಂದ ಜುಲೈ ಮೊದಲ ವಾರದಲ್ಲಿ ಮತ್ತೊಮ್ಮೆ ಸಭೆ ನಡೆಸಲು ನಿರ್ಧರಿಸಲಾಗಿದೆ.