ಕರ್ನಾಟಕ

karnataka

ETV Bharat / state

ಖರ್ಗೆ ಪ್ರಧಾನಿಯಾದರೆ ನನ್ನ ಸಹಮತವಿದೆ; ಪರಿಷತ್ ಸದಸ್ಯ ಹೆಚ್ ​​ವಿಶ್ವನಾಥ್ - INDIA meeting

ಮಲ್ಲಿಕಾರ್ಜುನ ಖರ್ಗೆ ಪ್ರಧಾನಿ ಅಭ್ಯರ್ಥಿಯಾದರೆ ನನ್ನ ಸಹಮತವಿದೆ ಎಂದು ಪರಿಷತ್ ಸದಸ್ಯ ಹೆಚ್ ​​ವಿಶ್ವನಾಥ್ ಹೇಳಿದರು.

ಪರಿಷತ್ ಸದಸ್ಯ ಹೆಚ್ ​​ವಿಶ್ವನಾಥ್
ಪರಿಷತ್ ಸದಸ್ಯ ಹೆಚ್ ​​ವಿಶ್ವನಾಥ್

By ETV Bharat Karnataka Team

Published : Dec 20, 2023, 1:17 PM IST

Updated : Dec 20, 2023, 1:54 PM IST

ಪರಿಷತ್ ಸದಸ್ಯ ಹೆಚ್ ​​ವಿಶ್ವನಾಥ್

ಮೈಸೂರು: ಇಂಡಿಯಾ ಒಕ್ಕೂಟದಿಂದ ಮಲ್ಲಿಕಾರ್ಜುನ ಖರ್ಗೆ ಪ್ರಧಾನಿ ಅಭ್ಯರ್ಥಿಯಾಗಿ ಆಯ್ಕೆಯಾದರೆ ಅದಕ್ಕೆ ನನ್ನ ಸಂಪೂರ್ಣ ಸಹಮತವಿದೆ ಎಂದು ವಿಧಾನ ಪರಿಷತ್ ಸದಸ್ಯ ಹೆಚ್​​ವಿಶ್ವನಾಥ್ ಹೇಳಿದರು. ಜಲದರ್ಶಿನಿ ಅತಿಥಿ ಗೃಹದಲ್ಲಿ ಇಂದು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಮಲ್ಲಿಕಾರ್ಜುನ ಖರ್ಗೆ ಸಾಮಾನ್ಯ ಕುಟುಂಬದಿಂದ ಬಂದವರು. ಎಲ್ಲ ರೀತಿಯ ಆಡಳಿತ ಅನುಭವ ಇರುವವರು. ದೇವೇಗೌಡರ ನಂತರ ರಾಜ್ಯದಿಂದ ಇನ್ನೊಬ್ಬರು ಪ್ರಧಾನಿ ಆಗಲಿ ಎಂಬುದು ನನ್ನ ಆಸೆ ಎಂದರು.

ಅಡ್ವಾಣಿ ಬಂದರೆ ಮೋದಿಗೆ ಕ್ರೆಡಿಟ್ ಸಿಗುವುದಿಲ್ಲ: ರಾಮ ಮಂದಿರ ಉದ್ಘಾಟನೆಗೆ ಲಾಲ್ ಕೃಷ್ಣ ಅಡ್ವಾಣಿ ಹಾಗೂ ಮುರಳಿ ಮನೋಹರ ಜೋಶಿ ಅವರಿಗೆ ಆಹ್ವಾನ ನೀಡದೇ ಇರುವುದು ಸರಿಯಲ್ಲ. ಲಾಲ್ ಕೃಷ್ಣ ಅಡ್ವಾಣಿ ರಾಮ ಮಂದಿರ ಹೋರಾಟದಲ್ಲಿ ಮುಂದೆ ಇದ್ದ ನಾಯಕರು. ವಯಸ್ಸಿನ ಕಾರಣಕ್ಕಾಗಿ ಅವರನ್ನು ದೂರವಿಟ್ಟು ರಾಮ ಮಂದಿರ ಉದ್ಘಾಟನೆ ಮಾಡುವುದು ತಪ್ಪು. ಮಾಜಿ ಪ್ರಧಾನಿ ದೇವೇಗೌಡರಿಗೂ ವಯಸ್ಸಾಗಿದೆ, ಅವರನ್ನು ಕರೆದಿದ್ದಾರೆ. ಅಡ್ವಾಣಿ, ಮುರಳಿ ಮನೋಹರ ಜೋಶಿ ಅವರನ್ನು ಏಕೆ ಕರೆದಿಲ್ಲ? ರಾಮ ಮಂದಿರ ಉದ್ಘಾಟನಾ ಕಾರ್ಯಕ್ರಮಕ್ಕೆ ಅಡ್ವಾಣಿ ಬಂದರೆ ಕ್ರೆಡಿಟ್ ಮೋದಿಗೆ ಸಿಗುವುದಿಲ್ಲ. ಹಾಗಾಗಿ ಈ ರೀತಿ ಮಾಡುತ್ತಿದ್ದಾರೆ ಎಂದು ವಿಶ್ವನಾಥ್ ದೂಷಿಸಿದರು.

ಸಂಸದರ ಅಮಾನತು ವಾಪಸ್ ಪಡೆಯಿರಿ:ಪ್ರಶ್ನೆ ಕೇಳಲು ಬಂದ ಸಂಸತ್ ಸದಸ್ಯರನ್ನು ಅಮಾನತು ಮಾಡುತ್ತಿರುವುದು ಸರಿಯಲ್ಲ. ದಾಳಿಕೋರರು ಮೂರು ಸುತ್ತಿನ ಬೇಹುಗಾರಿಕೆ ಭೇದಿಸಿ ಒಳಗೆ ಬಂದಿದ್ದಾರೆ ಎಂದರೆ ಏನರ್ಥ! ಇದರ ಹಿಂದೆ ಯಾರಿದ್ದಾರೆಂದು ಕೇಳಲು ಹೋದ ಸಂಸದರನ್ನೇ ಅಮಾನತು ಮಾಡಿದರೆ ಹೇಗೆ? ಸಂಸತ್ ಇರುವುದು ಏಕೆ? ಸಂಸತ್ ಚರ್ಚೆ ಮಾಡಲು ಇರುವ ವೇದಿಕೆ ಆಗಿದೆ. ಪ್ರತಿಪಕ್ಷಗಳು ಇರುವುದು ಪ್ರಶ್ನೆ ಮಾಡುವುದಕ್ಕೆ. ಆಡಳಿತ ಪಕ್ಷದವರು ಸಮಾಧಾನದಿಂದ ಉತ್ತರ ನೀಡಬೇಕು. ಪ್ರಶ್ನೆ ಕೇಳಲು ಬಂದ ಸಂಸದರನ್ನು ಅಮಾನತು ಮಾಡಿದರೇ ಹೇಗೆ? 141 ಸಂಸದರನ್ನು ಅಮಾನತು ಮಾಡಿರುವುದು ಸಂಸತ್​ಗೆ ಮಾಡಿದ ದೊಡ್ಡ ದ್ರೋಹ ಎಂದು ಟೀಕಿಸಿದರು.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಮಾಧ್ಯಮಗಳ ಎದುರು ಬಂದು ನಿಲ್ಲುವ ತಾಕತ್ತಿಲ್ಲ. ಇಡೀ ಜಗತ್ತಿನ ಮುಂದೆ ಭಾರತದ ಮಾನ ಬೆತ್ತಲಾಗಿದೆ. ಸಂಸತ್​ನಲ್ಲಿ ಪ್ರಶ್ನೋತ್ತರಗಳನ್ನೇ ದುರ್ಬಲಗೊಳಿಸುವುದು ಪ್ರಜಾಪ್ರಭುತ್ವಕ್ಕೆ ಮಾಡಿದ ದ್ರೋಹ ಮತ್ತು ದೇಶದ ಸಂವಿಧಾನ ವ್ಯವಸ್ಥೆಗೆ ಮಾರಕ. ಕೂಡಲೇ ಅಮಾನತು ಮಾಡಿರುವ 141 ಜನ ಸಂಸದರ ಅಮಾನತನ್ನು ವಾಪಸ್ ಪಡೆಯಬೇಕು ಅವರು ಆಗ್ರಹಿಸಿದರು.

ಇದನ್ನೂ ಓದಿ: ರಾಮಮಂದಿರ ಉದ್ಘಾಟನೆ : ಎಲ್​ ಕೆ ಅಡ್ವಾಣಿ. ಮುರಳಿ ಮನೋಹರ್​ ಜೋಶಿಗೆ ಆಹ್ವಾನ ನೀಡಿದ ವಿಹೆಚ್​​​ಪಿ

Last Updated : Dec 20, 2023, 1:54 PM IST

ABOUT THE AUTHOR

...view details