ಕರ್ನಾಟಕ

karnataka

ETV Bharat / state

ಅತೃಪ್ತ ಶಾಸಕರ ನೇತೃತ್ವ ವಹಿಸಿದ್ದ ಹೆಚ್​ ವಿಶ್ವನಾಥ್​​ ರಾಜ್ಯಕ್ಕೆ ವಾಪಸ್​​ - karnataka today news

ಅಜ್ಞಾತ ವಾಸದಲ್ಲಿದ್ದ ಅತೃಪ್ತ ಶಾಸಕ ಹೆಚ್.ವಿಶ್ವನಾಥ ಮೈಸೂರಿನ ಶ್ರೀರಾಮಪುರದಲ್ಲಿರುವ ಪುತ್ರನ ಮನೆಯಲ್ಲಿ ಕಾಣಿಸಿಕೊಂಡಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮುಂದಿನ ರಾಜಕೀಯ ನಡೆಯನ್ನು ತಿಳಿಸಲಿದ್ದಾರೆ ಎಂದು ತಿಳಿದು ಬಂದಿದೆ.

ಅತೃಪ್ತ ಶಾಸಕರ ನೇತೃತ್ವ ವಹಿಸಿದ್ದ ಹೆಚ್​.ವಿಶ್ವನಾಥ ಪುತ್ರನ ಮನೆಗೆ ಮರಳಿದ್ದಾರೆ

By

Published : Aug 3, 2019, 2:27 PM IST

ಮೈಸೂರು: ಸಮಿಶ್ರ ಸರ್ಕಾರದ ಪತನ ಕಾರಣವಾದ ಅತೃಪ್ತ ಶಾಸಕರ ನೇತೃತ್ವ ವಹಿಸಿದ್ದ ಅನರ್ಹ ಶಾಸಕ ಹೆಚ್.ವಿಶ್ವನಾಥ ತವರಿಗೆ ವಾಪಾಸ್​ ಆಗಿದ್ದಾರೆ.

ಮುಂಬೈ ರೆಸಾರ್ಟ್​ ರಾಜಕಾರಣ ಮುಗಿದ ಬಳಿಕ ಹೆಚ್.ವಿಶ್ವನಾಥ್ ಶ್ರೀರಾಂಪುರದ ಪುತ್ರನ ಮನೆಗೆ ಆಗಮಿಸಿ,
ಕೆಲ ಸಮಯ ವಿಶ್ರಾಂತಿ ಪಡೆದಿದ್ದಾರೆ. ನಂತರ ಹೆಚ್.ವಿಶ್ವನಾಥ್ ಅವರ ಕಾರಿನಲ್ಲೇ ರಾಜ್ಯ ಬಿಜೆಪಿ ವಕ್ತಾರ ಕೌಟಿಲ್ಯ ರಘು ಅವರ ಜತೆ ತೆರಳಿದರು.

ಅತೃಪ್ತ ಶಾಸಕರ ನೇತೃತ್ವ ವಹಿಸಿದ್ದ ಹೆಚ್​.ವಿಶ್ವನಾಥ ಪುತ್ರನ ಮನೆಗೆ ಮರಳಿದ್ದಾರೆ

ಈ ವೇಳೆಬಿಜೆಪಿ ವಕ್ತಾರ ಕೌಟಿಲ್ಯ ರಘು, ನಮ್ಮ ವಿಡಿಯೋ ಯಾಕೆ ಮಾಡ್ತಾ ಇದ್ದಿರಾ ಎಂದು ಮಾಧ್ಯಮದವರನ್ನು ಪ್ರಶ್ನಿಸಿ, ನಂತರ ಪರವಾಗಿಲ್ಲ ಮಾಡಿಕೊಳ್ಳಿ ಎಂದರು.

ರಾಜ್ಯದಲ್ಲಿ ನಡೆದ ರಾಜಕೀಯ ಬೆಳವಣಿಗೆಗಳ ಪ್ರತಿಕ್ರಿಯೆ ನೀಡಲು ಅನರ್ಹ ಶಾಸಕ ವಿಶ್ವನಾಥ್ ಮೊದಲು ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಲು ತೀರ್ಮಾನಿಸಿದ್ದು, ನಂತರ ತವರು ಕ್ಷೇತ್ರದಲ್ಲಿ ಸುದ್ದಿಗೋಷ್ಠಿ ನಡೆಸಿ, ರಾಜಕೀಯ ತೀರ್ಮಾನಗಳ ಬಗ್ಗೆ ಸ್ಪಷ್ಟತೆ ನೀಡಲಿದ್ದಾರೆ ಎನ್ನಲಾಗುತ್ತಿದೆ.

ABOUT THE AUTHOR

...view details