ಮೈಸೂರು : ಸೋಮವಾರ ರಾತ್ರಿ ಸುರಿದ ಮಳೆಯೊಂದಿಗೆ ಭಾರಿ ಗಾತ್ರದ ಆಲಿಕಲ್ಲು ಬಿದ್ದಿರುವ ಘಟನೆ ಹುಣಸೂರು ತಾಲೂಕಿನ ಹಿರಿಕ್ಯಾತನಹಳ್ಳಿಯಲ್ಲಿ ನಡೆದಿದೆ.
ಗುಡುಗು ಸಹಿತ ಮಳೆ: ಹುಣಸೂರಿನಲ್ಲಿ ಬಿತ್ತು ಭಾರಿ ಗಾತ್ರದ ಆಲಿಕಲ್ಲು - hailstorm at Hunasuru
ಹುಣಸೂರಿನ ಹಿರಿಕ್ಯಾತನಹಳ್ಳಿಯಲ್ಲಿ ಸೋಮವಾರ ರಾತ್ರಿ ಸುರಿದ ಮಳೆಯೊಂದಿಗೆ ಬೃಹತ್ ಗಾತ್ರದ ಆಲಿಕಲ್ಲು ಬಿದ್ದಿದೆ.
ಹುಣಸೂರಿನಲ್ಲಿ ಭಾರಿ ಗಾತ್ರದಲ್ಲಿ ಬಿದ್ದ ಆಲಿಕಲ್ಲು
ಕಳೆದ 2 ದಿನಗಳಿಂದ ಜಿಲ್ಲೆಯ ಪಿರಿಯಾಪಟ್ಟಣ, ಹುಣಸೂರು, ಎಚ್.ಡಿ ಕೋಟೆಯ ಕಾಡಂಚಿನ ಗ್ರಾಮಗಳಲ್ಲಿ ಭಾರಿ ಮಳೆಯಾಗುತ್ತಿದ್ದು, ಮಳೆಯೊಂದಿಗೆ ಆಲಿಕಲ್ಲು ಬೀಳುತ್ತಿದೆ.
ಆಲಿ ಕಲ್ಲು ಮಳೆಯಾಗುವುದು ಸಾಮಾನ್ಯ, ಆದರೆ, ಹಿರಿಕ್ಯಾತನಹಳ್ಳಿ ಗ್ರಾಮದಲ್ಲಿ ಬಿದ್ದ ದೊಡ್ಡ ಗಾತ್ರದ ಆಲಿಕಲ್ಲು ನೋಡಿ ಜನ ಆಶ್ಚರ್ಯಗೊಂಡಿದ್ದಾರೆ.