ಕರ್ನಾಟಕ

karnataka

ETV Bharat / state

ಕುರುಬ ಮಠ ಕಟ್ಟುವಾಗ ಯಾರೂ ಬಂದಿರಲಿಲ್ಲ, ನಾನೇ ಹೋರಾಡಿ ಮಠ ಕಟ್ಟಿಸಿದ್ದೆ: ಹೆಚ್.ವಿಶ್ವನಾಥ್

ಆರ್​​ಎಸ್​​​ಎಸ್ ಕುರುಬರನ್ನು ಒಡೆಯುತ್ತಿಲ್ಲ, ಬದಲಾಗಿ ನೀವೇ ಸಮುದಾಯವನ್ನು ಒಡೆಯುತ್ತಿದ್ದೀರಿ. ಸಮುದಾಯದಿಂದ ಬಂದ ನೀವು ಸಮುದಾಯವನ್ನು ತುಚ್ಚವಾಗಿ ಕಾಣಬೇಡಿ ಎಂದು ಸಿದ್ದರಾಮಯ್ಯ ವಿರುದ್ಧ ಹೆಚ್.ವಿಶ್ವನಾಥ್ ಕಿಡಿಕಾರಿದರು.

By

Published : Jan 20, 2021, 7:10 PM IST

vishwanath
vishwanath

ಮೈಸೂರು: ಕುರುಬ ಮಠ ಕಟ್ಟುವಾಗ ಯಾರೂ ಬಂದಿರಲಿಲ್ಲ, ಸಿದ್ದರಾಮಯ್ಯನೂ ಇಲ್ಲ, ಈಶ್ವರಪ್ಪನೂ ಇಲ್ಲ. ಹೋರಾಟ ಮಾಡಿ ಮಠ ಮಾಡಿದ್ದು ನಾನು‌. ವಿಶ್ವನಾಥ್​ನೇ ಕಾವಿ ಹಾಕಿಕೊಳ್ಳುತ್ತಾನೆ ಅಂತ ಸಿದ್ದರಾಮಯ್ಯ ಬೈತಿದ್ರು. ಅಂದು ಬೈತಿದ್ರಿ, ಆದರೀಗ ಹೋರಾಟಕ್ಕೆ ಬನ್ನಿ, ಇಲ್ಲವಾದರೆ ಮನೆಯಲ್ಲಿರಿ. ಸಮುದಾಯ ಹಾಗೂ ಮಠದ ಶಕ್ತಿಯನ್ನು ತೋರಿಸುತ್ತೇನೆ ಎಂದು ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಸವಾಲು ಹಾಕಿದರು.

ಮೈಸೂರಿನ ವಿದ್ಯಾರಣ್ಯಪುರದಲ್ಲಿರುವ ಕಲ್ಯಾಣ ಮಂಟಪದಲ್ಲಿ ಕುರುಬರ ಎಸ್​​ಟಿ ಹೋರಾಟ ಬೃಹತ್ ಸಮಾವೇಶ ಕುರಿತು ಏರ್ಪಡಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ನಿಮ್ಮನ್ನು ಮುಖ್ಯಮಂತ್ರಿ ಮಾಡಲು ಮಠದ ಹಾಗೂ ಸಮುದಾಯದ ಹೋರಾಟವೂ ಇದೆ. ಇದನ್ನು ಮರೆತ ಸಿದ್ದರಾಮಯ್ಯನವರು ಸಮುದಾಯದ ಹೋರಾಟದಿಂದ ಹಿಂದೆ ಸರಿದಿದ್ದಾರೆ. ಗುರುಗಳ ಬಗ್ಗೆ ತುಚ್ಚವಾಗಿ ಮಾತನಾಡಿದರೆ ಜಾತಿಯಿಂದ ಬಹಿಷ್ಕಾರ ಮಾಡುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪೂರ್ವಭಾವಿ ಸಭೆಯಲ್ಲಿ ಹೆಚ್.ವಿಶ್ವನಾಥ್

ಆರ್​​ಎಸ್​​​ಎಸ್ ಕುರುಬರನ್ನು ಒಡೆಯುತ್ತಿಲ್ಲ, ಬದಲಾಗಿ ನೀವೇ ಸಮುದಾಯವನ್ನು ಒಡೆಯುತ್ತಿದ್ದೀರಿ. ಸಮುದಾಯದಿಂದ ಬಂದ ನೀವು ಸಮುದಾಯವನ್ನು ತುಚ್ಚವಾಗಿ ಕಾಣಬೇಡಿ ಎಂದು ಕಿಡಿಕಾರಿದರು.

ಗೋಹತ್ಯೆ ನಿಷೇಧ ಸುಗ್ರೀವಾಜ್ಞೆ.. ನಿಯಮಗಳನ್ನು ರೂಪಿಸುವವರೆಗೆ ಕಠಿಣ ಕ್ರಮವಿಲ್ಲವೆಂದ ಸರ್ಕಾರ

ನಿಮಗಾಗಿ ತನು ಮನ ಧನ ಅರ್ಪಿಸಿದ ಸಮುದಾಯಕ್ಕೆ ಅನ್ಯಾಯ ಮಾಡುತ್ತಿದ್ದೀರಿ. ಸಮುದಾಯಕ್ಕೆ ಒಳ್ಳೆಯದನ್ನು ಮಾಡಬೇಕು ಎಂಬ ಮನಸ್ಸಿದ್ದರೆ ಬನ್ನಿ. ತುಚ್ಚವಾಗಿ ಮಾತನಾಡಿ ಸಮುದಾಯವನ್ನು ನೋಯಿಸಬೇಡಿ. ಜೆಡಿಎಸ್​ನಿಂದ ಉಚ್ಛಾಟನೆಗೊಂಡು ಮನೆಯಲ್ಲಿದ್ದಾಗ ನಿಮ್ಮನ್ನು ಕಾಂಗ್ರೆಸ್ ಪಕ್ಷಕ್ಕೆ ಕರೆದುಕೊಂಡು ಹೋಗಿ ಮುಖ್ಯಮಂತ್ರಿ ಮಾಡಿದೆ ಎಂದರು.

ಫೆಬ್ರವರಿ 7ರಂದು ನಡೆಯುವ ಬೃಹತ್ ಸಮಾವೇಶಕ್ಕೆ ಸುಮಾರು 10 ಲಕ್ಷ ಜನ ಸೇರಿಸಬೇಕು. ಎಲ್ಲರೂ ಒಟ್ಟಾಗಿ ಬಂದು ಮೀಸಲಾತಿಗಾಗಿ ಹೋರಾಟ ಮಾಡಬೇಕು ಎಂದರು.

ABOUT THE AUTHOR

...view details