ಮೈಸೂರು :ಎನ್‌ಟಿಎಂಎಸ್ ಶಾಲೆ ಸ್ಥಳಾಂತರ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ಕಾಂಗ್ರೆಸ್‌ನ ಮಾಜಿ ಶಾಸಕ ಎಂ ಕೆ ಸೋಮಶೇಖರ್ ಸೇರಿದಂತೆ ಇತರ ಕಾರ್ಯಕರ್ತರನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ನ್ಯಾಯಾಲಯದ ಆದೇಶದ ಹಿನ್ನೆಲೆ ಎನ್‌ಟಿಎಂಎಸ್ ಶಾಲೆಯನ್ನ ನಿನ್ನೆ ಸಂಜೆ ಸ್ಥಳಾಂತರಿಸಿ ಇಂದು ಗೇಟ್ಗೆ ಸೀಲ್ ಹಾಕಿ ಮುಚ್ಚಲಾಗಿದೆ. ನೂರು ವರ್ಷ ತುಂಬಿದ ಈ ಕನ್ನಡ ಶಾಲೆಯನ್ನ ಸ್ಥಳಾಂತರ ಮಾಡಿರುವ ಸರ್ಕಾರದ ನಡೆಯನ್ನ ಕಾಂಗ್ರೆಸ್‌ನ ಮಾಜಿ ಶಾಸಕ ಎಂ ಕೆ ಸೋಮಶೇಖರ್ ವಿರೋಧಿಸಿದ್ದಾರೆ. ಮಾಜಿ ಶಾಸಕರು, ಅವರಬೆಂಬಲಿಗರು ಮತ್ತು ರೈತ ಸಂಘದ ಮುಖಂಡರು ಇಂದು ಶಾಲೆಯ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.