ಕರ್ನಾಟಕ

karnataka

ETV Bharat / state

ಹಸಿರು ಪಟಾಕಿ ಬಗ್ಗೆ ಪರಿಸರವಾದಿ ಹೇಳಿದ್ದೇನು?: ರಮೇಶ್ ಕಿಕ್ಕೇರಿ ಜೊತೆ ಈಟಿವಿ ಭಾರತ ಸಂದರ್ಶನ - environmental experts

ಕಾರ್ಖಾನೆಗಳಲ್ಲಿ ಹೆಚ್ಚು ಡೆಸಿಬಲ್​ ಶಬ್ದ ಉಂಟುಮಾಡುವ ಪಟಾಕಿಗಳನ್ನು ಉತ್ಪಾದನೆ ಮಾಡಬಾರದು ಎಂದು ನಿಯಮ ತರಬೇಕು ಎಂದು ಪರಿಸರವಾದಿ ರಮೇಶ್ ಕಿಕ್ಕೇರಿ ಒತ್ತಾಯಿಸಿದರು.

etv-india-interview-with-environmental-experts-in-mysuru
ಹಸಿರು ಪಟಾಕಿ ಬಗ್ಗೆ ಪರಿಸರ ತಜ್ಞ ಹೇಳಿದ್ದೇನು?: ರಮೇಶ್ ಕಿಕ್ಕೇರಿ ಜೊತೆ ಈಟಿವಿ ಭಾರತ ಸಂದರ್ಶನ

By ETV Bharat Karnataka Team

Published : Nov 11, 2023, 8:18 PM IST

Updated : Nov 11, 2023, 8:46 PM IST

ಪರಿಸರವಾದಿ ರಮೇಶ್ ಕಿಕ್ಕೇರಿ ಜೊತೆ ಈಟಿವಿ ಭಾರತ ಸಂದರ್ಶನ

ಮೈಸೂರು: ಪರಿಸರಕ್ಕೆ ಯಾವುದೆಲ್ಲ ಒಳ್ಳೆಯದಾಗುತ್ತದೆ ಅದಕ್ಕೆಲ್ಲಾ ಹಸಿರು ಎಂದು ಕರೆಯುತ್ತೇವೆ. ಹಾಗಾಗಿ ಪರಿಸರ ಸ್ನೇಹಿಯಾದ ಪಟಾಕಿಗೆ ಹಸಿರು ಪಟಾಕಿ ಎನ್ನುತ್ತೇವೆ ಎಂದು ಪರಿಸರವಾದಿ ರಮೇಶ್ ಕಿಕ್ಕೇರಿ ಎಂದು ಹೇಳಿದರು. ಮೈಸೂರಿನಲ್ಲಿ ಹಸಿರು ಪಟಾಕಿ ಕುರಿತು ಈಟಿವಿ ಭಾರತದೊಂದಿಗೆ ಮಾತನಾಡಿದ ಅವರು, ಹಸಿರು ಪಟಾಕಿಯಲ್ಲಿ ಹೆಚ್ಚು ಶಬ್ಧ, ಹೊಗೆ ಬರುವುದಿಲ್ಲ, ಹೆಚ್ಚು ಪ್ರಕಾಶಮಾನವಾಗಿರುವುದಿಲ್ಲ ಎಂದು ವಿವರಿಸಿದರು.

ಸಾಮಾನ್ಯ ಪಟಾಕಿಗಳು ಹಾಗೂ ಬಾಂಬ್​ಗಳು 120ಕ್ಕೂ ಡೆಸಿಬಲ್​ಗಳಿಗಿಂತಲೂ ಹೆಚ್ಚು ಶಬ್ದವನ್ನು ಉಂಟುಮಾಡುತ್ತವೆ. ಇದರಿಂದ ನಮಗೆ ಶ್ರವಣ ದೋಷ ಉಂಟಾಗುತ್ತದೆ. ಹಾಗೆ ಹೆಚ್ಚು ಪ್ರಕಾಶಮಾನವಾಗಿರುವುದನ್ನು ನೋಡಿದರೆ ಕಣ್ಣಿಗೆ ತೊಂದರೆಯಾಗುತ್ತದೆ. ಹಾಗಾಗಿ ಪರಿಸರ ಮತ್ತು ಆರೋಗ್ಯಕ್ಕೆ ಅನುಕೂಲವಾಗಲಿದೆ ಎಂದು ಹಸಿರು ಪಟಾಕಿ ಎಂಬ ಪರಿಕಲ್ಪನೆ ಹುಟ್ಟಿಕೊಂಡಿತು. ಆದರೆ, ಹಸಿರು ಪಟಾಕಿ ಬಳಸುವ ವಿಷಯದಲ್ಲಿ ದ್ವಂದ್ವ ಇದೆ ಎಂದರು.

ಪಟಾಕಿಗಳನ್ನು ತಯಾರಿಸುವ ಕಾರ್ಖಾನೆಗಳಲ್ಲಿ ಹೆಚ್ಚು ಡೆಸಿಬಲ್​ ಶಬ್ದ ಉಂಟುಮಾಡುವ ಪಟಾಕಿಗಳನ್ನು ಉತ್ಪಾದನೆ ಮಾಡಬಾರದು ಎಂದು ನಿಯಮ ತರಬೇಕು. ಆಗ ಎಲ್ಲರೂ ಇಂತಹ ಪಟಾಕಿಗಳನ್ನೇ ಉಪಯೋಗ ಮಾಡುತ್ತಾರೆ. ಪಟಾಕಿ ಸಿಡಿಸುವ ಪದ್ಧತಿ ಸಾವಿರಾರೂ ವರ್ಷಗಳಿಂದ ನಡೆದುಕೊಂಡು ಬಂದಿದೆ. ಪರಿಸರ ಸ್ನೇಹಿಯಾದ ಹಸಿರು ಪಟಾಕಿಗಳನ್ನ ಮಾತ್ರ ಸಿಡಿಸಲು ಅವಕಾಶ ಮಾಡಿಕೊಡಬೇಕು. ಪಟಾಕಿಗಳಿಂದ ಯಾರಿಗೂ ತೊಂದೆಯಾಗದಂತೆ ದೀಪವಾಳಿ ಹಬ್ಬ ಆಚರಿಸೋಣ ಎಂದು ಹೇಳಿದರು.

ಮೈಸೂರಿನ ಪಟಾಕಿ ಮಾರಾಟ ಮಳಿಗೆಗಳು

ಮೈಸೂರು ನಗರದಲ್ಲಿ ಹಸಿರು ಪಟಾಕಿ ವ್ಯಾಪಾರ ಜೋರು:ಮೈಸೂರು ನಗರದಲ್ಲಿ ದೀಪಾವಳಿ ಸಂಭ್ರಮ ಕಳೆಗಟ್ಟಿದ್ದು, ಮಾರುಕಟ್ಟೆಯಲ್ಲಿ ಹೂವು, ಹಣ್ಣು, ಹೊಸ ಬಟ್ಟೆಗಳ ಖರೀದಿ ಜೋರಾಗಿದೆ. ಅದೇ ರೀತಿ ಹಸಿರು ಪಟಾಕಿಗಳ ಖರೀದಿಗೆ ಜನರು ಹೆಚ್ಚು ಒಲವು ತೋರಿಸುತ್ತಿದ್ದು, ಹಸಿರು ಪಟಾಕಿ ವ್ಯಾಪಾರ ಜೋರಾಗಿದೆ. ಈ ಮೂಲಕ ನರಕ ಚತುರ್ದಶಿ, ಲಕ್ಷ್ಮಿ ಪೂಜೆ, ಬಲಿಪಾಡ್ಯಮಿಯ ದಿನ ಹಸಿರು ಪಟಾಕಿ ಸಿಡಿಸಲು ಜನರು ಸಜ್ಜಾಗಿದ್ದಾರೆ.

ಇದನ್ನೂ ಓದಿ:ಕುಂದಾನಗರಿಯಲ್ಲಿ ದೀಪಾವಳಿ ವಿಶೇಷ ಆಚರಣೆ: ಕೋಟೆ ಕಟ್ಟಿ ಬೆಳಕಿನ ಹಬ್ಬ ಸಂಭ್ರಮಿಸುವ ಮಕ್ಕಳು

ಕಲರ್ ಕಲರ್ ಆಕಾಶ ಬುಟ್ಟಿಗಳು:ಮತ್ತೊಂದೆಡೆ, ದೀಪಾವಳಿ ಆಚರಣೆಗೆ ಬೆಂಗಳೂರು ನಗರ ಸಜ್ಜಾಗಿದೆ. ನಗರದ ಮಲ್ಲೇಶ್ವರ, ಜಯನಗರ, ಬಸವನಗುಡಿ ಸೇರಿದಂತೆ ಪ್ರಮುಖ ಮಾರುಕಟ್ಟೆಗಳಲ್ಲಿ ಕಣ್ಣು ಹಾಯಿಸಿದಷ್ಟು ಕಡೆ ಕಲರ್ ಕಲರ್ ಆಕಾಶ ಬುಟ್ಟಿಗಳು ಕಾಣಸಿಗುತ್ತಿವೆ. ಕಣ್ಮನ ಸೆಳೆಯುತ್ತಿರುವ ಆಕಾಶ ಬುಟ್ಟಿಗಳ ಖರೀದಿಯಲ್ಲಿ ಗ್ರಾಹಕರು ಬ್ಯುಸಿಯಾಗಿದ್ದಾರೆ. ದೀಪಾವಳಿ ಹಬ್ಬದಲ್ಲಿ ಮನೆಯ ಮುಂಬಾಗಿಲು ಆಕರ್ಷಕವಾಗಿ ಕಾಣಲು ಆಕಾಶ ಬುಟ್ಟಿಯಿಂದ ಅಲಂಕಾರ ಮಾಡಲಾಗುತ್ತದೆ. ಇದಕ್ಕಾಗಿ ಹಲವು ಬಣ್ಣದ ಬೇರೆ ಬೇರೆ ಗಾತ್ರದ ಆಕಾಶ ಬುಟ್ಟಿಗಳನ್ನು ತಯಾರಿಸಲಾಗಿದೆ. ಬಣ್ಣ ಬಣ್ಣದ ಚೌಕಾಕಾರದ ಆಕಾಶಬುಟ್ಟಿ, ಲೋಟಸ್, ಪಕ್ಷಿಗೂಡು, ಡ್ರಮ್ ಸೇರಿದಂತೆ ಅನೇಕ ಮಾದರಿಯ ಆಕಾಶಬುಟ್ಟಿಗಳು ಮಾರುಕಟ್ಟೆಗಳಲ್ಲಿ ಲಭ್ಯವಿದ್ದು, ಗ್ರಾಹಕರನ್ನು ಆಕರ್ಷಿಸುತ್ತಿವೆ.

Last Updated : Nov 11, 2023, 8:46 PM IST

ABOUT THE AUTHOR

...view details