ಕರ್ನಾಟಕ

karnataka

ಡಾ. ವಿಷ್ಣುವರ್ಧನ್ ಪುಣ್ಯ ಸ್ಮರಣೆ: ಸ್ಮಾರಕಕ್ಕೆ ಪೂಜೆ ಸಲ್ಲಿಸಿದ ಭಾರತಿ ವಿಷ್ಣುವರ್ಧನ್

ಸ್ಯಾಂಡಲ್​ವುಡ್​ನ ಹಿರಿಯ ನಟ ದಿವಂಗತ ಡಾ.ವಿಷ್ಣುವರ್ಧನ್ ಅವರ 10ನೇ ವರ್ಷದ ಪುಣ್ಯ ಸ್ಮರಣೆಯನ್ನು ಅಭಿಮಾನಿಗಳ ಸಮ್ಮುಖದಲ್ಲಿ ಭಾರತಿ ವಿಷ್ಣುವರ್ಧನ್ ನೆರವೇರಿಸಿದರು.

By

Published : Dec 30, 2019, 1:18 PM IST

Published : Dec 30, 2019, 1:18 PM IST

Dr. Vishnuvardhan  death Anniversary
ಡಾ.ವಿಷ್ಣುವರ್ಧನ್ ಪುಣ್ಯ ಸ್ಮರಣೆ: ಸ್ಮಾರಕಕ್ಕೆ ಪೂಜೆ ಸಲ್ಲಿಸಿದ ಭಾರತಿ ವಿಷ್ಣುವರ್ಧನ್

ಮೈಸೂರು:ಸ್ಯಾಂಡಲ್​ವುಡ್​ನ ಹಿರಿಯ ನಟ ದಿವಂಗತ ಡಾ.ವಿಷ್ಣುವರ್ಧನ್ ಅವರ 10ನೇ ವರ್ಷದ ಪುಣ್ಯ ಸ್ಮರಣೆಯನ್ನು ಅಭಿಮಾನಿಗಳ ಸಮ್ಮುಖದಲ್ಲಿ ಭಾರತಿ ವಿಷ್ಣುವರ್ಧನ್ ನೆರವೇರಿಸಿದರು.

ಭಾರತಿ ವಿಷ್ಣುವರ್ಧನ್

ಹೆಚ್‌.ಡಿ‌. ಕೋಟೆ ರಸ್ತೆಯಲ್ಲಿರುವ ಹಾಲಾಳು ಗ್ರಾಮದಲ್ಲಿರುವ ಡಾ.ವಿಷ್ಣುವರ್ಧನ್ ಸ್ಮಾರಕಕ್ಕೆ ಪತ್ನಿ ಭಾರತಿ ವಿಷ್ಣುವರ್ಧನ್ ಪೂಜೆ ಸಲ್ಲಿಸಿ, ನಮಿಸಿದರು. ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಡಾ.ವಿಷ್ಣುವರ್ಧನ್ ಅಗಲಿ ಹತ್ತು ವರ್ಷ ಕಳೆದರು ಅವರ ನೆನಪು ಇನ್ನೂ ಹಸಿರಾಗಿದೆ. ಸ್ಮಾರಕ ನಿರ್ಮಾಣ ಕಾರ್ಯ ಹತ್ತು ವರ್ಷ ವಿಳಂಬವಾದರೂ ಬೇಸರವಾಗಿಲ್ಲ. ಎಲ್ಲದಕ್ಕೂ ತಾಳ್ಮೆಯಿರಬೇಕು ಎಂದರು‌.

ವಿಷ್ಣುವರ್ಧನ್ ಇಲ್ಲದೇ ಶೂನ್ಯ ಆವರಿಸಿದೆ. ಆದರೆ, ಶೂನ್ಯಕ್ಕೆ ಹೆಚ್ಚಿನ ಬೆಲೆ. ಅವರು ಇಲ್ಲದೇ ಹೋದರೆ ಅಭಿಮಾನಿಗಳ ಹೃದಯದಲ್ಲಿ ಇರುತ್ತಾರೆ ಎಂದರು. ವಿಷ್ಣುವರ್ಧನ್ ಅವರ ಅಭಿಮಾನಿಗಳು ಕೂಡ ಸ್ಮಾರಕಕ್ಕೆ ನಮಸ್ಕರಿಸಿ ಜಯಕಾರ ಕೂಗಿದರು.

ABOUT THE AUTHOR

...view details