ಮೈಸೂರು: ಮೈಸೂರಿನ ಅಶೋಕಪುರಂನಲ್ಲಿರುವ ಅರಣ್ಯ ಭವನದ ಆವರಣಕ್ಕೆ ಅಭಿಮನ್ಯು ಮತ್ತು ಆತನ ತಂಡ ಎಂಟ್ರಿ ಕೊಟ್ಟಿದೆ.
ಹುಣಸೂರು ತಾಲೂಕಿನ ವೀರನಹೊಸಳ್ಳಿಯಲ್ಲಿ ಕ್ಯಾಪ್ಟನ್ ಅಭಿಮನ್ಯು ನೇತೃತ್ವದಲ್ಲಿ ಧನಂಜಯ,ವಿಕ್ರಮ ಗೋಪಾಲಸ್ವಾಮಿ, ಚೈತ್ರ,ಲಕ್ಷ್ಮಿ, ಕಾವೇರಿ, ಅಶ್ವತ್ಥಾಮ ಆನೆ ಗಜಪಯಣ ಪೂಜೆ ಮುಗಿಸಿಕೊಂಡು, ಲಾರಿ ಮೂಲಕ ಅರಣ್ಯ ಭವನಕ್ಕೆ ತಲುಪಿವೆ.
ನಾಡಿಗೆ ಬಂದ ಅಭಿಮನ್ಯು ಆ್ಯಂಡ್ ಟೀಮ್ ಅರಣ್ಯ ಸಿಬ್ಬಂದಿ ಹಾಗೂ ಮಾವುತರು ಹಾಗೂ ಕಾವಡಿಗಳು ದಸರಾ ಆನೆಗಳನ್ನು ಜೋಪಾನವಾಗಿ ಲಾರಿಯಿಂದ ಇಳಿಸಿಕೊಂಡರು. ನಂತರ ದಸರಾ ಗಜಪಡೆ ಕ್ಯಾಪ್ಟನ್ ಅಭಿಮನ್ಯು, ಅಶ್ವತ್ಥಾಮ, ಗೋಪಾಲಸ್ವಾಮಿ ಆನೆಗಳನ್ನು ಬೇರೆ ಸ್ಥಳದಲ್ಲಿ ಕಟ್ಟಿ ಹಾಕಿದ್ದುದ, ಚೈತ್ರ ,ಲಕ್ಷ್ಮಿ ,ಕಾವೇರಿ, ಧನಂಜಯ ವಿಕ್ರಮ ಆನೆಗಳನ್ನು ಮತ್ತೊಂದು ಸ್ಥಳದಲ್ಲಿ ಕಟ್ಟಿಹಾಕಲಾಗಿದೆ.
ಸೆಪ್ಟಂಬರ್ 16ರಂದು ಅರಣ್ಯದಿಂದ ಕಾಲ್ನಡಿಗೆಯಲ್ಲಿಯೇ ಗಜಪಡೆಯನ್ನು ಅರಮನೆಗೆ ಕಳುಹಿಸಲಾಗುವುದು.