ಮೈಸೂರು:ಕೋವಿಡ್ ಪರಿಣಾಮ ವೃತ್ತಿಪರ ಕೋರ್ಸ್ಗಳ ಪ್ರವೇಶಾತಿ ಗಣನೀಯವಾಗಿ ಇಳಿಮುಖವಾಗಿದೆ. ಅನ್ಲಾಕ್ ಬಳಿಕ ಕೋರ್ಸ್ಗಳ ದಾಖಲಾತಿಗೆ ಅನುಮತಿ ನೀಡಿದ್ದರೂ ಸರ್ಕಾರ ಹಾಗೂ ಮ್ಯಾನೇಜ್ಮೆಂಟ್ ಕೋಟಾದ ಸೀಟುಗಳು ಖಾಲಿಯಾಗಿಯೇ ಉಳಿದಿವೆ.
ಇದನ್ನೂ ಓದಿ...ಮೈಸೂರು - ಹೈದರಾಬಾದ್ ನಡುವೆ ಮತ್ತೊಂದು ವಿಮಾನ ಹಾರಾಟ ಆರಂಭ
ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಮುಖ್ಯಸ್ಥ ಎಂ.ಲಕ್ಷ್ಮಣ್ ಮಾತನಾಡಿ, ದೇಶದಲ್ಲಿ ಸುಮಾರು 4,000 ಇಂಜಿನಿಯರಿಂಗ್ ಕಾಲೇಜುಗಳಿವೆ. ವರ್ಷಕ್ಕೆ 15 ಲಕ್ಷ ಇಂಜಿನಿಯರಿಂಗ್ ಪದವೀಧರರು ಹೊರಬರುತ್ತಾರೆ. ಜೊತೆಗೆ ಪಾಲಿಟೆಕ್ನಿಕ್, ಐಟಿಐ ಹಾಗೂ ಸಾಫ್ಟ್‌ವೇರ್ ಅಭಿವೃದ್ಧಿಪಡಿಸುವ ಸಂಸ್ಥೆಗಳು 10 ಲಕ್ಷ ಇವೆ. ಒಟ್ಟು 25 ಲಕ್ಷ ವಿದ್ಯಾರ್ಥಿಗಳು ವೃತ್ತಿಪರ ಕೋರ್ಸ್ನಿಂದ ಹೊರ ಬರುತ್ತಾರೆ ಎಂದು ಮಾಹಿತಿ ನೀಡಿದರು.
ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಮುಖ್ಯಸ್ಥ ಎಂ.ಲಕ್ಷ್ಮಣ್ ಈಗ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಶೇ. 30 ಕೋರ್ಸ್ಗೆ ಪರೀಕ್ಷೆ ನಡೆಸಿದರೆ, ಭವಿಷ್ಯದಲ್ಲಿ ಅವರು ತೊಂದರೆ ಎದುರಿಸಲಿದ್ದಾರೆ. ಶೇ. 50ರಷ್ಟು ಪ್ರಾಯೋಗಿಕ ಹಾಗೂ ಶೇ. 50 ಕಲಿಕೆ ಇರಬೇಕು. ಆದರೆ, ಲಾಕ್ಡೌನ್ ಅದೆಲ್ಲವನ್ನೂ ಕಿತ್ತುಕೊಂಡಿದೆ. ದೇಶದಲ್ಲಿ ಅಭಿವೃದ್ಧಿ, ತಂತ್ರಜ್ಞಾನ ಅಭಿವೃದ್ಧಿ ಮೇಲೆ ಪರಿಣಾಮ ಬೀರುತ್ತಿದೆ ಎಂದರು.
2019-20 ಹಾಗೂ 2020-21ನೇ ಸಾಲಿನಿಂದ ಹೊರ ಬರುವ ವಿದ್ಯಾರ್ಥಿಗಳು ಫೀಲ್ಡ್ನಲ್ಲೇ ಕಲಿಯಬೇಕು. ಸರಿಯಾದ ತರಬೇತಿ ದೊರೆಯದಿದ್ದರೆ ಉತ್ಪಾದನೆಗೆ ತೊಂದರೆಯಾಗುತ್ತದೆ. 8-10 ವರ್ಷಗಳ ಹಿಂದೆ ಹೋಗುವ ಪರಿಸ್ಥಿತಿ ಬರುತ್ತದೆ ಎಂದರು.