ಕರ್ನಾಟಕ

karnataka

ETV Bharat / state

ವಿದ್ಯುತ್ ಕಂಬಕ್ಕೆ ಗುದ್ದಿದ ಕಾರು: ಪವಾಡ ಸದೃಶ ರೀತಿಯಲ್ಲಿ ಪಾರಾದ ಚಾಲಕ - ಪಾರಾದ ಚಾಲಕ

ಬಾಡಿಗೆ ಕಾರೊಂದು ನಗರದ ಜೆ.ಪಿ ನಗರ ಬಳಿಯ ನಾಚರಪಾಳ್ಯ ರಸ್ತೆಯ ಪೆಟ್ರೋಲ್ ಬಂಕ್ ಬಳಿ ಇರುವ ವಿದ್ಯುತ್ ಕಂಬಕ್ಕೆ ಗುದ್ದಿದು, ಕಾರಿನ ವೇಗಕ್ಕೆ ವಿದ್ಯುತ್ ಕಂಬವೇ ಮುರಿದು ಬಿದ್ದಿದೆ.

ಕಾರು

By

Published : Sep 23, 2019, 6:32 PM IST

ಮೈಸೂರು:ಚಾಲಕನ ಅಜಾಗರೂಕತೆಯಿಂದ ವಿದ್ಯುತ್ ಕಂಬಕ್ಕೆ ಕಾರು ಗುದ್ದಿದ ಪರಿಣಾಮ ವಿದ್ಯುತ್ ಕಂಬವೇ ಮುರಿದು ಬಿದ್ದಿದ್ದು, ಚಾಲಕ ಆಶ್ಚರ್ಯಕರ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಜೆ.ಪಿ ನಗರದ ನಾಚರಪಾಳ್ಯ ಬಳಿ ನಡೆದಿದೆ.

ವಿದ್ಯುತ್​ ಕಂಬಕ್ಕೆ ಗುದ್ದಿರುವ ಕಾರು

ಮಹಾರಾಷ್ಟ್ರದ ನೋಂದಣಿ ಸಂಖ್ಯೆ ಹೊಂದಿರುವ ಬಾಡಿಗೆ ಕಾರೊಂದು ನಗರದ ಜೆ.ಪಿ ನಗರ ಬಳಿಯ ನಾಚರಪಾಳ್ಯ ರಸ್ತೆಯ ಪೆಟ್ರೋಲ್ ಬಂಕ್ ಬಳಿ ಇರುವ ವಿದ್ಯುತ್ ಕಂಬಕ್ಕೆ ಗುದ್ದಿದು, ಕಾರಿನ ವೇಗಕ್ಕೆ ವಿದ್ಯುತ್ ಕಂಬವೇ ಮುರಿದಿದೆ. ಈ ಸಂದರ್ಭದಲ್ಲಿ ಚಾಲಕ ಕಾರಿನಿಂದ ಹೊರಗೆ ಜಂಪ್‌ ಮಾಡಿದ್ದಾನೆ. ಈ ಘಟನೆಯಿಂದ ಅದೃಷ್ಟವಶಾತ್ ಯಾವುದೇ ಅವಘಡ ಸಂಭವಿಸಿಲ್ಲ. ಚಾಲಕ ಪವಾಡ ರೀತಿಯಲ್ಲಿ ಪಾರಾಗಿದ್ದಾನೆ.

ಸ್ಥಳಕ್ಕೆ ಕೆಇಬಿ ಅಧಿಕಾರಿಗಳು ಆಗಮಿಸಿ ಪವರ್ ಕಟ್ ಮಾಡಿದ್ದು. ವಿದ್ಯಾರಣ್ಯಪುರಂ ಪೊಲೀಸರು ಭೇಟಿ ನೀಡಿ ಕಾರಿನ ಬಗ್ಗೆ ವಿಚಾರಣೆ ನಡೆಸುತ್ತಿದ್ದಾರೆ.

ABOUT THE AUTHOR

...view details