ಮೈಸೂರು:ನಗರದ ಕುಂಬಾರಕೊಪ್ಪಲಿನಲ್ಲಿ ಹಕ್ಕಿಜ್ವರದ ಎರಡು ಪ್ರಕರಣಗಳು ಕಂಡು ಬಂದ ಹಿನ್ನೆಲೆಯಲ್ಲಿ 4500 ಕೋಳಿಗಳ ಸಾಮೂಹಿಕವಾಗಿ ಕೊಲ್ಲಲು ಸಿದ್ಧತೆ ನಡೆಸಲಾಗುತ್ತಿದೆ.
ಮೈಸೂರಲ್ಲಿ ಹಕ್ಕಿಜ್ವರ... ಕೋಳಿಗಳ ಮಾರಣಹೋಮ, ಮಾಂಸದಂಗಡಿಗಳು ಬಂದ್
ಮೈಸೂರಿನ ಹಲವೆಡೆ ಹಕ್ಕಿಜ್ವರ ಕಂಡು ಬಂದ ಹಿನ್ನೆಲೆ ಕೋಳಿಫಾರಂ ಮಾಲೀಕರು ಕೋಳಿಗಳ ಮಾರಣಹೋಮಕ್ಕೆ ಮುಂದಾಗಿದ್ದಾರೆ.
ಮೆಟಗಳ್ಳಿ ರಿಂಗ್ ರೋಡ್ ಸಮೀಪ ಇರುವ ಅಶ್ವಿನಿ ಪೌಲ್ಟ್ರಿ ಫಾರಂನಲ್ಲಿರುವ 4500 ಕೋಳಿಗಳನ್ನು ಜೀವಂತವಾಗಿ ಹೂತು ಹಾಕುವ ಕಾರ್ಯ ನಡೆಯುತ್ತಿದೆ. ಜೆಸಿಬಿ ಮೂಲಕ ಗುಂಡಿ ತೆಗೆದು ಕೋಳಿಗಳನ್ನು ಜೀವಂತ ಸಮಾಧಿ ಮಾಡಲಾಗ್ತಿದೆ.
ಜಿಲ್ಲೆಯಲ್ಲಿ ಹಕ್ಕಿಜ್ವರ ಇರುವುದು ದೃಢವಾಗಿರುವ ಹಿನ್ನೆಲೆಯಲ್ಲಿ ಇಂದಿನಿಂದ ಎಲ್ಲಾ ಕೋಳಿ ಮತ್ತು ಮಾಂಸದ ಅಂಗಡಿಗಳನ್ನು ಬಂದ್ ಮಾಡುವಂತೆ ಆದೇಶ ಹೊರಡಿಸಲಾಗಿದೆ. ನಗರದ ಪ್ರಮುಖ ಕೋಳಿ ಮತ್ತು ಮಾಂಸದ ಅಂಗಡಿಗಳಿರುವ ದೇವರಾಜ ಮಾರುಕಟ್ಟೆಯ ಚಿಕನ್ ಮಾರುಕಟ್ಟೆ ಸೇರಿದಂತೆ ಎಲ್ಲಿಲ್ಲಿ ಚಿಕನ್ ಅಂಗಡಿಗಳು ಇವೆಯೋ ಆ ಎಲ್ಲಾ ಅಂಗಡಿಗಳನ್ನು ಮುಚ್ಚುವಂತೆ ಆದೇಶ ನೀಡಲಾಗಿದೆ. ಒಟ್ಟಾರೆ ಹಕ್ಕಿಜ್ವರದ ಎಫೆಕ್ಟ್ ನಿಂದ ಕೋಳಿ ಮತ್ತು ಮಾಂಸದ ಮಾರಾಟ ನಗರದಲ್ಲಿ ಸಂಪೂರ್ಣ ಸ್ಥಗಿತಗೊಳ್ಳುತ್ತಿದೆ. ನಿನ್ನೆ ಸಂಜೆಯಷ್ಟೇ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಮಾಧ್ಯಮಗೋಷ್ಟಿ ನಡೆಸಿ ಹಕ್ಕಿಜ್ವರದ ಮಾಹಿತಿ ನೀಡಿದ್ದರು.