ಕರ್ನಾಟಕ

karnataka

ಏಂಟು ವರ್ಷ ಹಿಂದಿನ ಕೊಲೆ ಯತ್ನ ಪ್ರಕರಣ: ಮೂವರ ಬಂಧನ

ಕ್ಷುಲಕ ಕಾರಣಕ್ಕಾಗಿ ಕಳೆದ ಏಂಟು ವರ್ಷದ ಹಿಂದೆ ಟಿಬೆಟಿಯನ್ ವ್ಯಕ್ತಿಯ ಮೇಲೆ​​ ಕೊಲೆ ಯತ್ನ ನಡೆಸಿ, ಪರಾರಿಯಾಗಿದ್ದ ಮೂವರು ಆರೋಪಿಗಳನ್ನು ಡಿಸಿಪಿ ಪ್ರಕಾಶ್ ಗೌಡ ನೇತೃತ್ವದ ತಂಡ ಬಂಧಿಸಿದೆ.

By

Published : Sep 2, 2020, 5:06 PM IST

Published : Sep 2, 2020, 5:06 PM IST

Updated : Sep 2, 2020, 6:51 PM IST

ಕೊಲೆ ಯತ್ನದ ಮೂವರು ಆರೋಪಿಗಳ ಬಂಧನ
ಕೊಲೆ ಯತ್ನದ ಮೂವರು ಆರೋಪಿಗಳ ಬಂಧನ

ಮೈಸೂರು: ಕಳೆದ 8 ವರ್ಷದ ಹಿಂದೆ ಕ್ಷುಲಕ ಕಾರಣಕ್ಕಾಗಿ ಟಿಬೆಟಿಯನ್​​ ವ್ಯಕ್ತಿಯ ಮೇಲೆ ಕೊಲೆ ಯತ್ನ ನಡೆಸಿ ಪರಾರಿಯಾಗಿದ್ದ, ಮೂವರು ಆರೋಪಿಗಳನ್ನು ದೇವರಾಜ ಠಾಣೆ ಪೊಲೀಸರು ಬಂಧಿಸಿದ್ದಾರೆ.

ದೇವರಾಜ ಠಾಣಾ ವ್ಯಾಪ್ತಿಯ ದುರ್ಗಮ್ಮನಗುಡಿ ಕ್ರಾಸ್​​ನಲ್ಲಿ ಆ. 8,2012 ರಂದು, ಟಿಬೆಟಿಯನ್ ವ್ಯಕ್ತಿ ತನ್ ಜಿನ್ ದರ್ ಗ್ಯಾಲ್ ಎಂಬ 23 ವರ್ಷದ ಹುಡುಗನ ಮೇಲೆ ಬೈಕ್​​ನಲ್ಲಿ ಬಂದ ಅಪರಿಚಿತರು ಡ್ರ್ಯಾಗರ್​​ನಿಂದ ಬೆನ್ನಿಗೆ ಚುಚ್ಚಿ ಕೊಲೆ ಯತ್ನ ನಡೆಸಿ ಪರಾರಿಯಾಗಿದ್ದರು. ಸೂಕ್ಷ್ಮ ಘಟನೆಯಾಗಿದ್ದರಿಂದ ಈ ಪ್ರಕರಣವನ್ನು ಸಿಸಿಬಿಗೆ ವಹಿಸಲಾಗಿತ್ತು. ಆದರೆ ಆರೋಪಿಗಳು ಸಿಕ್ಕದ ಕಾರಣ ಪ್ರಕರಣವನ್ನು ಮುಕ್ತಾಯ ಮಾಡಲಾಗಿತ್ತು.

ಡಿಸಿಪಿ ಪ್ರಕಾಶ್ ಗೌಡ ನೇತೃತ್ವದ ತಂಡದಿಂದ ಆರೋಪಿಗಳ ಬಂಧನ

ಈ ಪ್ರಕರಣವನ್ನು ಪುನಃ ತನಿಖೆಗೆ ಕೈಗೆತ್ತಿಕೊಂಡ ಡಿಸಿಪಿ ಪ್ರಕಾಶ್ ಗೌಡ ನೇತೃತ್ವದ ತಂಡ ಈ ಪ್ರಕರಣದ ಪ್ರಮುಖ ಆರೋಪಿ ಸಲೀಂ ಪಾಷ ಮತ್ತಿಬ್ಬರು ಆರೋಪಿಗಳಾದ ಸಲ್ಮಾನ್ ಪಾಷ ಹಾಗೂ ಇಸ್ಮಾಯಿಲ್ ಖಾನ್ ಎಂಬುವವರನ್ನು ಬಂಧಿಸಿದ್ದಾರೆ. ಈ ಕೃತ್ಯದಲ್ಲಿ ಭಾಗಿಯಾಗಿರುವುದಾಗಿ ಒಪ್ಪಿಕೊಂಡಿದ್ದು, ಕೃತ್ಯಕ್ಕೆ ಬಳಸಿದ ಒಂದು ಬೈಕ್​​ನನ್ನು ವಶಪಡಿಸಿಕೊಳ್ಳಲಾಗಿದೆ.

ಬರ್ಮಾ ಮತ್ತು ಟಿಬೆಟಿಯನ್​​ರ ನಡುವೆ ನಡೆಯುತ್ತಿದ್ದ ಗಲಾಟೆಗೆ ವೈಷಮ್ಯಕ್ಕಾಗಿ ಈ ರೀತಿ ಮಾಡಿದ್ದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ. ಪ್ರಕರಣದ ಪ್ರಮುಖ ಆರೋಪಿ ಸಲೀಂ ಮೇಲೆ 5 ಪ್ರಕರಣಗಳು ಇದ್ದು, ಆತ ನರಸಿಂಹರಾಜ ಠಾಣಾ ವ್ಯಾಪ್ತಿಯಲ್ಲಿ ರೌಡಿ ಶೀಟರ್ ಸಹ ಎಂದು ಇದೆ ಸಂದರ್ಭದಲ್ಲಿ ಡಿಸಿಪಿ ಪ್ರಕಾಶ್ ಗೌಡ ಅವರು ತಿಳಿಸಿದರು.

Last Updated : Sep 2, 2020, 6:51 PM IST

ABOUT THE AUTHOR

...view details