ಮೈಸೂರು:ನಗರದ ಖಾಸಗಿ ಹೋಟೆಲ್ನಲ್ಲಿ ಬಿಲ್ ವಿಚಾರಕ್ಕೆ ಸಂಬಂಧಿಸಿದಂತೆ ಎರಡು ಗುಂಪುಗಳ ನಡುವೆ ಗಲಾಟೆ ನಡೆದಿದೆ. ಈ ವೇಳೆ ಮಾಲೀಕನ ಮೇಲೆಯೂ ಪುಂಡರು ಹಲ್ಲೆ ಮಾಡಿದ್ದಾರೆ. ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ನಗರದ ಜಗನ್ಮೋಹನ ಅರಮನೆ ಸಮೀಪ ಇರುವ ನ್ಯೂ ಹೋಟೆಲ್ ಮೈಸೂರ್ನಲ್ಲಿ ಗ್ರಾಹಕರೊಬ್ಬರು ಬಿಲ್ ಕೊಡುವಾಗ ವ್ಯಕ್ತಿಯೋರ್ವ ಅವರ ಜೇಬಿಗೆ ಕೈ ಹಾಕಿದ್ದಾನೆ. ಆಗ ಎರಡು ಪ್ರತ್ಯೇಕ ಗುಂಪುಗಳ ನಡುವೆ ಜಗಳ ಆರಂಭವಾಗಿ ಲಾಂಗು-ಮಚ್ಚುಗಳಿಂದ ಹೊಡೆದಾಡಿಕೊಂಡಿದ್ದಾರೆ.