ಕರ್ನಾಟಕ

karnataka

ETV Bharat / state

ಬರೆ ಎಳೆದ ಕೊರೊನಾ: ಸಹಾಯಕ್ಕೆ ಮನವಿ ಮಾಡಿದ ಅಲೆಮಾರಿಗಳು

ಕೆ.ಆರ್.ನಗರ ತಾಲೂಕಿನ ಚುಂಚನಕಟ್ಟೆ ಬಳಿ ಇರುವ 40 ಅಲೆಮಾರಿ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿದ್ದು, ಸಹಾಯಕ್ಕಾಗಿ ಜನರಲ್ಲಿ ಮನವಿ ಮಾಡಿದ್ದಾರೆ.

Alemari community Who Requested for Help
ಸಹಾಯಕ್ಕೆ ಮನವಿ ಮಾಡಿದ ಅಲೆಮಾರಿಗಳು

By

Published : May 12, 2020, 3:19 PM IST

ಮೈಸೂರು: ಲಾಕ್​ಡೌನ್ ಹಿನ್ನೆಲೆಯಲ್ಲಿ ಕೆಲಸವಿಲ್ಲದೇ ಕಂಗಾಲಾಗಿರುವ ಅಲೆಮಾರಿಗಳು, ನೆರವು ನೀಡುವಂತೆ ದಾನಿಗಳಲ್ಲಿ ಮನವಿ ಮಾಡಿದ್ದಾರೆ.

ಕೆ.ಆರ್.ನಗರ ತಾಲೂಕಿನ ಚುಂಚನಕಟ್ಟೆ ಬಳಿ ಇರುವ 40 ಅಲೆಮಾರಿ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿದ್ದು, ಹಣೆಬೊಟ್ಟು,ಹೇರ್​ಪಿನ್ ಗಳನ್ನು ಮಾರಿಕೊಂಡು ಜೀವನ ಸಾಗಿಸುತ್ತಿದ್ದ ಕುಟುಂಬಗಳಿಗೆ ಕೊರೊನಾ ಬರೆ ಎಳೆದಿದೆ.

ತಿನ್ನಲು ಊಟವಿಲ್ಲದೇ ಈ ಕುಟುಂಬಗಳು ಪರದಾಡುತ್ತಿದ್ದು,ಸದ್ಯ ಯಾವುದೇ ಕೆಲಸವಿಲ್ಲದೇ ಎಲ್ಲಿಯೂ ಹೋಗಲಾರದೇ ಇರುವುದರಿಂದ ದಾನಿಗಳು ನೆರವು ನೀಡಬೇಕು ಎಂದು ಮನವಿ ಮಾಡಿದ್ದಾರೆ.

ABOUT THE AUTHOR

...view details