ಮೈಸೂರು: ಕಬಿನಿ ಜಲಾಶಯದಿಂದ ಬಿಡುಗಡೆ ಮಾಡುತ್ತಿರುವ ಕುಡಿಯುವ ನೀರು ಕಲುಷಿತವಾಗಿದ್ದು, ಕೂಡಲೇ ಅಧಿಕಾರಿಗಳು ಗಮನ ಹರಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಹೆಚ್.ಡಿ.ಕೋಟೆ ತಾಲೂಕಿನಲ್ಲಿರುವ ಕಬಿನಿ ಜಲಾಶಯದಿಂದ ಬೆಂಗಳೂರಿಗೆ 500 ಕ್ಯೂಸೆಕ್ನಷ್ಟು ಕುಡಿಯುವ ನೀರನ್ನು ಬಿಡುತ್ತಿದ್ದು, ಈ ನೀರನ್ನು ಖಾಸಗಿ ವಿದ್ಯುತ್ ಉತ್ಪಾದನಾ ಘಟಕವಾದ ಸುಭಾಷ್ ಪವಾರ್ ಮುಖಾಂತರ ಬಿಡುಗಡೆ ಮಾಡಲಾಗುತ್ತಿದೆ. ಇಲ್ಲಿ ವಿದ್ಯುತ್ ಉತ್ಪಾದನೆಯಾದ ನಂತರ ಅದೇ ನೀರನ್ನು ನದಿ ಪಾತ್ರಕ್ಕೆ ಬಿಡಲಾಗುತ್ತಿದೆ ಎನ್ನಲಾಗಿದೆ.
ಕಬಿನಿಯಿಂದ ಹರಿಸಲಾಗುತ್ತಿರುವ ಕುಡಿಯುವ ನೀರಿಗೆ ಕಲುಷಿತ ನೀರು ಮಿಶ್ರಣ ಆರೋಪ ಬಳಿಕ ಬೆಂಗಳೂರಿನ ಕುಡಿಯುವ ನೀರಿಗೂ ಸರಬರಾಜಾಗುತ್ತಿದ್ದು, ಇದರ ಜೊತೆಗೆ ಸ್ಥಳೀಯವಾಗಿ ನದಿಯಲ್ಲಿ ಆಯಿಲ್ ಮಿಶ್ರಿತವಾಗುತ್ತಿದೆ. ಈ ಕಲುಷಿತ ನೀರನ್ನು ದನ-ಕರುಗಳು ಕುಡಿದು ರೋಗಕ್ಕೆ ತುತ್ತಾಗುತ್ತಿವೆ.
ಕೂಡಲೇ ಅಧಿಕಾರಿಗಳು ಖಾಸಗಿ ವಿದ್ಯುತ್ ಉತ್ಪಾದನಾ ಕಂಪನಿಯ ಕಾರ್ಯದ ವಿರುದ್ಧ ಕ್ರಮಕ್ಕೆ ಮುಂದಾಗಿ ಇನ್ನು ಮುಂದೆ ಕ್ರಸ್ಟ್ ಗೇಟ್ ಮೂಲಕವೇ ನೀರನ್ನು ಹರಿಸಬೇಕೆಂದು ಸ್ಥಳೀಯ ರೈತ ಜವರನಾಯಕ ಮನವಿ ಮಾಡಿದ್ದಾರೆ.
ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಈಗಾಗಲೇ ದೂರು ನೀಡಿದ್ದರು ಯಾರೂ ಗಮನ ಹರಿಸುತ್ತಿಲ್ಲ ಎಂದು ತಮ್ಮ ಆಕ್ರೋಶ ಹೊರ ಹಾಕಿದ್ದಾರೆ.