ಕರ್ನಾಟಕ

karnataka

ETV Bharat / state

ಮಹಾತ್ಮ ಗಾಂಧಿ 150ನೇ ಜನ್ಮದಿನದ ಅಂಗವಾಗಿ ಪಾಪು-ಬಾಪು ನಾಟಕ ಪ್ರದರ್ಶನ

ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ 150ನೇ ಜನ್ಮದಿನದ ಅಂಗವಾಗಿ ಆಯೋಜಿಸಿದ್ದ ಮಹಾತ್ಮ ಗಾಂಧಿ ಅವರ ಜೀವನ ದರ್ಶನ ಕುರಿತು ರಂಗಕರ್ಮಿ ಶ್ರೀಪಾದಭಟ್ ಅವರ ನಿರ್ದೇಶನದಲ್ಲಿ ಪಾಪು-ಬಾಪು ನಾಟಕ ಪ್ರದರ್ಶನವು ಅರ್ಥಪೂರ್ಣವಾಗಿ ನಡೆಯಿತು.

By

Published : Feb 9, 2019, 11:50 AM IST

ನಾಟಕ ಪ್ರದರ್ಶನ

ಮಂಡ್ಯ: ಕೆ.ಆರ್.ಪೇಟೆ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಶ್ರಯದಲ್ಲಿ ಪಾಪು-ಬಾಪು ನಾಟಕದ ಪ್ರದರ್ಶನ ಮಾಡಲಾಯಿತು. ರಾಷ್ಟ್ರಪಿತ ಮಹಾತ್ಮ ಗಾಂಧಿ ಜೀವನದ ಘಟನಾವಳಿಗಳ ಅನಾವರಣ ಕುರಿತ ನಾಟಕ ಯಶಸ್ವಿ ಪ್ರದರ್ಶನವಾಯಿತು‌.

ನಾಟಕ ಪ್ರದರ್ಶನ

ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ 150ನೇ ಜನ್ಮದಿನದ ಅಂಗವಾಗಿ ಆಯೋಜಿಸಿದ್ದ ಮಹಾತ್ಮ ಗಾಂಧಿ ಅವರ ಜೀವನ ದರ್ಶನ ಕುರಿತು ರಂಗಕರ್ಮಿ ಶ್ರೀಪಾದಭಟ್ ಅವರ ನಿರ್ದೇಶನದಲ್ಲಿ ಪಾಪು-ಬಾಪು ನಾಟಕ ಪ್ರದರ್ಶನವು ಅರ್ಥಪೂರ್ಣವಾಗಿ ನಡೆಯಿತು.

ಮಹಾತ್ಮ ಗಾಂಧಿ ಅವರ ಬಗ್ಗೆ ಯುವಜನರು ಹಾಗೂ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ವಿವಿಧ ಸಂಗತಿಗಳನ್ನು ಒಳಗೊಂಡ ನಾಟಕ ಪ್ರದರ್ಶನವನ್ನು ಕಲಾವಿದರು ಗಾಂಧಿ ಜೀವನದ ವಿವಿಧ ಪಾತ್ರಧಾರಿಗಳಾಗಿ ಅಭಿನಯಿಸಿ ವಿದ್ಯಾರ್ಥಿಗಳ ಮನಗೆದ್ದರು. ಸಾಹಿತಿ ಮಹಮದ್ ಕುಂಇ ಅವರ ಮಹಾತ್ಮ ಬಾಪು ಕೃತಿ ಆಧರಿಸಿ ನಾಟಕವನ್ನು ರೂಪಿಸಲಾಗಿದೆ.

ABOUT THE AUTHOR

...view details