ಮಂಡ್ಯ: 'ಗಿಡ ನೆಡು, ಮರ ಮಾಡು'. ಈ ಚಾಲೆಂಜ್ ಅನ್ನು ಸ್ವೀಕರಿಸಿದ ನವ ಜೋಡಿಯೊಂದು ಮದುವೆ ಮನೆಯಲ್ಲಿಯೇ ಐದು ಗಿಡ ನೆಟ್ಟು ದಾಂಪತ್ಯ ಜೀವನಕ್ಕೆ ಕಾಲಿರಿಸಿದೆ.
ಮದ್ದೂರು ತಾಲೂಕಿನ ಎಸ್.ಐ ಹೊನ್ನಲಗೆರೆಯ ವೀರಭದ್ರೇಶ್ವರಸ್ವಾಮಿ ದೇವಾಲಯದ ಬಳಿ ನವ ದಂಪತಿ ಅಮೃತೇಶ್ವರನ ಹಳ್ಳಿಯ ವರ ಮನು ಹಾಗೂ ವಧು ನಿಸರ್ಗ ನವಜೀವನಕ್ಕೆ ಕಾಲಿಟ್ಟವರು.
ಚಾಲೆಂಜ್ ಸ್ವೀಕರಿಸಿದ ನವಜೋಡಿ ವಿವಾಹಕ್ಕೂ ಮುನ್ನವೇ ಚಾಲೆಂಜ್ ಸ್ವೀಕರಿಸಿ ಗಿಡ ನೆಟ್ಟು ಸಂತಸ ವ್ಯಕ್ತಪಡಿಸಿದರು. ಸರಳ ವಿವಾಹದ ಜೊತೆಗೆ ಪರಿಸರ ಪ್ರೇಮ ಮೆರೆದ ಈ ದಂಪತಿಗೆ ಸ್ನೇಹಿತರು, ಸಂಬಂಧಿಕರು ಶುಭ ಹಾರೈಸಿದರು.
ಮಳವಳ್ಳಿ ತಾಲೂಕಿನ ಬೆಳಕವಾಡಿಯಲ್ಲಿ ಆರಂಭವಾದ ಈ ಚಾಲೆಂಜ್ ಈಗ ರಾಜ್ಯಾದ್ಯಂತ ಸದ್ದು ಮಾಡುತ್ತಿದೆ. ಪರಿಸರ ಸಂರಕ್ಷಣೆಗೆ ಆದ್ಯತೆ ನೀಡುವ ಮೂಲಕ ಪರಿಸರ ಪ್ರೇಮ ಮೆರೆಯುತ್ತಿದ್ದಾರೆ.