ಕರ್ನಾಟಕ

karnataka

ETV Bharat / state

ಮಂಡ್ಯ: ನೂರಾರು ಕೇಸರಿ ಶಾಲು ತೊಟ್ಟ ವಿದ್ಯಾರ್ಥಿಗಳ ವಿರುದ್ಧ ಮುಸ್ಲಿಂ ವಿದ್ಯಾರ್ಥಿನಿ ಏಕಾಂಗಿ ಹೋರಾಟ! - ಮಂಡ್ಯ ಸುದ್ದಿ

ನೂರಾರು ಕೇಸರಿ ಶಾಲು ತೊಟ್ಟು ಪ್ರತಿಭಟಿಸುತ್ತಿರುವ ವಿದ್ಯಾರ್ಥಿಗಳ ಎದುರು ಮುಸ್ಲಿಂ ವಿದ್ಯಾರ್ಥಿನಿಯೊಬ್ಬಳು ಅಲ್ಲಾಹು ಅಕ್ಬರ್ ಎಂದು ಘೋಷಣೆ ಕೂಗಿ ಕಾಲೇಜೊಳಗೆ ಪ್ರವೇಶಿಸಿದ ಘಟನೆ ಮಂಡ್ಯ ಜಿಲ್ಲೆಯಲ್ಲಿ ನಡೆದಿದೆ.

Mandya hijab row, Muslim lady student shouted Allahu Akbar in Mandya, Mandya news, Mandya hijab news, ಮಂಡ್ಯ ಹಿಜಾಬ್​ ವಿವಾದ, ಮಂಡ್ಯದಲ್ಲಿ ಮುಸ್ಲಿಂ ವಿದ್ಯಾರ್ಥಿನಿಯಿಂದ ಅಲ್ಲಾಹು ಅಕ್ಬರ್​ ಘೋಷಣೆ, ಮಂಡ್ಯ ಸುದ್ದಿ, ಮಂಡ್ಯ ಹಿಜಾಬ್​ ಸುದ್ದಿ,
ಮುಸ್ಲಿಂ ವಿದ್ಯಾರ್ಥಿನಿ ಏಕಾಂಗಿ ಹೋರಾಟ

By

Published : Feb 8, 2022, 1:27 PM IST

ಮಂಡ್ಯ:ಮಂಡ್ಯದಲ್ಲಿ ಕೇಸರಿ ಮತ್ತು ಹಿಜಬ್ ಹೋರಾಟ ಮುಂದುವರೆದಿದೆ. ಪಿಇಎಸ್ ಕಾಲೇಜಿನ ವಿದ್ಯಾರ್ಥಿಗಳು ಕೇಸರಿ‌ ಶಾಲು ಹಾಕಿಕೊಂಡು ಹಿಜಾಬ್​ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ ಮುಸ್ಲಿಂ ವಿದ್ಯಾರ್ಥಿ ನೂರಾರು ಯುವಕರ ಎದುರೇ ಧೈರ್ಯವಾಗಿಯೇ ಹೋರಾಟ ನಡೆಸಿದ್ದಾರೆ.

ಮುಸ್ಲಿಂ ವಿದ್ಯಾರ್ಥಿನಿ ಏಕಾಂಗಿ ಹೋರಾಟ

ವಿದ್ಯಾರ್ಥಿಗಳು ಕಾಲೇಜಿನ‌ ಮುಂದೆ ಕೇಸರಿ ಶಾಲು ಹಾಕಿಕೊಂಡು ಜೈ ಶ್ರೀರಾಮ್ ಘೋಷಣೆ ಕೂಗುತ್ತಾ ಹಿಜಾಬ್​ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದರು. ಇದೇ ವೇಳೆ ಕಾಲೇಜ್​ಗೆ ಆಗಮಿಸಿದ ಮುಸ್ಲಿಂ ವಿದ್ಯಾರ್ಥಿನಿಯೊಬ್ಬಳು ಅಲ್ಲಾಹು ಅಕ್ಬರ್ ಎಂದು ಘೋಷಣೆ ಕೂಗಿದರು. ಇದು ಯುವಕರ ಆಕ್ರೋಶಕ್ಕೆ ಕಾರಣವಾಗಿದ್ದು, ವಿದ್ಯಾರ್ಥಿಗಳು ಶಾಲಾ ಮಂಡಳಿ ಸಿಬ್ಬಂದಿ ಜೊತೆ ವಾಗ್ವಾದಕ್ಕಿಳಿದರು.

ಓದಿ:ಶಿವಮೊಗ್ಗದಲ್ಲಿ ಕೇಸರಿ ಶಾಲು, ಹಿಜಾಬ್ ಬೆಂಬಲಿಗ ವಿದ್ಯಾರ್ಥಿಗಳ ನಡುವೆ ಕಲ್ಲು ತೂರಾಟ!

ಕೇಸರಿ ಶಾಲು ಹಾಕಿಕೊಂಡ ಬಂದಿದ್ದೇವೆ ನಮಗೆ ಒಳಗೆ ಹೋಗಲು ಅವಕಾಶ ಕೊಡುತ್ತಿಲ್ಲ. ಆದರೆ, ಬುರ್ಕಾ ಹಾಕಿಕೊಂಡು ಬಂದವರಿಗೆ ಅವಕಾಶ ಕೊಟ್ಟಿದ್ದೀರಿ. ಅವರನ್ನು ಕಾಲೇಜ್​ನಿಂದ ಹೊರಗೆ ಕಳುಹಿಸಿ ಅಂತ ಎಂದು ನಾವು ಹೇಳುತ್ತಿಲ್ಲ. ಅವರ ಹಿಜಾಬ್​, ಬುರ್ಕಾ ತೆಗೆಸಿ. ನಾವು ಕೇಸರಿ ಶಾಲನ್ನು ತೆಗೆದು ಬರುತ್ತೇವೆ ಎಂದು ವಿದ್ಯಾರ್ಥಿಗಳು ಕಾಲೇಜಿನ ಮುಖ್ಯ ಶಿಕ್ಷಕರ ಜೊತೆ ವಾಗ್ವಾದ ನಡೆಸಿದರು.

ಸದ್ಯ ಕಾಲೇಜು ಮುಂಭಾಗ ಜಮಾಯಿಸಿರುವ ಕೇಸರಿ ಶಾಲು ತೊಟ್ಟ ವಿದ್ಯಾರ್ಥಿಗಳು ತಮ್ಮ ಪ್ರತಿಭಟನೆ ಮುಂದುವರಿಸಿದ್ದಾರೆ. ಪೊಲೀಸರು ಸ್ಥಳಕ್ಕಾಗಮಿಸಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರ ವಹಿಸಿದ್ದಾರೆ.

ಓದಿ:ಹಿಜಾಬ್ ವಿವಾದದ ನಾಲ್ಕೂ ಅರ್ಜಿಗಳ ವಿಚಾರಣೆ ಕೈಗೆತ್ತಿಕೊಂಡ ಹೈಕೋರ್ಟ್

ABOUT THE AUTHOR

...view details