ಮಂಡ್ಯ: ಮಲಗಿದ್ದ ವೇಳೆ ವಕೀಲನ ಬರ್ಬರ ಹತ್ಯೆ ಮಾಡಿದ ಘಟನೆ ಕೆ.ಆರ್. ಪೇಟೆ ತಾಲೂಕಿನ ನಾಗರಘಟ್ಟ ಗ್ರಾಮದಲ್ಲಿ ನಡೆದಿದೆ.
ಕೆ.ಆರ್ ಪೇಟೆಯಲ್ಲಿ ವಕೀಲನ ಬರ್ಬರ ಹತ್ಯೆ... ಅಣ್ಣನೇ ಕೊಲೆಗೈದಿರುವ ಶಂಕೆ - kannada newspaper
ಕೆ ಆರ್ ಪೇಟೆಯಲ್ಲಿ ವಕೀಲನ ಬರ್ಬರ ಹತ್ಯೆ.ಆಸ್ತಿಗಾಗಿ ಅಣ್ಣನೇ ತಮ್ಮನನ್ನು ಕೊಲೆ ಮಾಡಿರುವ ಶಂಕೆ .ಕೃಷ್ಣರಾಜಪೇಟೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
Breaking News
ಗ್ರಾಮದ ಸತೀಶ್(40) ಕೊಲೆಯಾಗಿರುವ ವಕೀಲ. ಆಸ್ತಿಗಾಗಿ ಅಣ್ಣನೇ ತಮ್ಮನನ್ನು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಚನ್ನರಾಯಪಟ್ಟಣ, ಮೈಸೂರು, ಬೆಂಗಳೂರು ಮತ್ತಿತರ ಕಡೆಗಳಲ್ಲಿ ವಕೀಲ ವೃತ್ತಿ ಮಾಡುತ್ತಿದ್ದ ಸತೀಶ್ ಸೋಮವಾರ ರಾತ್ರಿ ನಾಗರಘಟ್ಟ ಗ್ರಾಮದಲ್ಲಿ ಮಲಗಿದ್ದಾಗ ಕೊಲೆಯಾಗಿದ್ದಾರೆ.
ಕೃಷ್ಣರಾಜಪೇಟೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.