ಕರ್ನಾಟಕ

karnataka

ETV Bharat / state

ಗೃಹ ಸಚಿವರ ಕಾರು ತಪಾಸಣೆ ಮಾಡದ ಆರೋಪ: ಮಂಡ್ಯದಲ್ಲಿ ಇಬ್ಬರು ಪೊಲೀಸ್​ ಸಿಬ್ಬಂದಿ ಅಮಾನತು ​ - Home minister's car checked police officer

ಮದ್ದೂರು ತಾಲೂಕಿನ ಚೆಕ್​ಪೋಸ್ಟ್​ನಲ್ಲಿ ನ.20 ರಂದು ಗೃಹ ಸಚಿವರ ಕಾರನ್ನು ತಪಾಸಣೆ ಮಾಡದ ಆರೋಪದ ಹಿನ್ನೆಲೆ ಇಬ್ಬರು ಪೊಲೀಸ್​ ಸಿಬ್ಬಂದಿಯನ್ನು ಅಮಾನತುಗೊಳಿಸಿದ್ದಲ್ಲದೆ, ಇಬ್ಬರು ಚೆಕ್​ಪೋಸ್ಟ್ ಅಧಿಕಾರಿಗಳನ್ನು ಜಿಲ್ಲಾ ಚುನಾವಣಾಧಿಕಾರಿ ಇಲಾಖಾ ವಿಚಾರಣೆಗೆ ಒಳಪಡಿಸಿದ್ದಾರೆ.

Police persons suspended
ಪೊಲೀಸ್ ಸಿಬ್ಬಂದಿ ಅಮಾನತು

By

Published : Nov 27, 2019, 12:27 PM IST

ಮಂಡ್ಯ:ಗೃಹ ಸಚಿವರ ಕಾರನ್ನು ತಪಾಸಣೆ ಮಾಡದ ಹಿನ್ನೆಲೆ ಮದ್ದೂರು ತಾಲೂಕಿನ ಚೆಕ್​ಪೋಸ್ಟ್​ನಲ್ಲಿ ಕರ್ತವ್ಯಕ್ಕೆ ನಿಯೋಜಿಸಲಾಗಿದ್ದ ಇಬ್ಬರು ಪೊಲೀಸ್​ ಸಿಬ್ಬಂದಿಯನ್ನು ಅಮಾನತುಗೊಳಿಸಿರುವ ಜಿಲ್ಲಾ ಚುನಾವಣಾಧಿಕಾರಿ ಅವರು ಚೆಕ್​ ಪೋಸ್ಟ್​ ಅಧಿಕಾರಿಗಳನ್ನು ಇಲಾಖಾ ವಿಚಾರಣೆಗೆ ಒಳಪಡಿಸಿದ್ದಾರೆ.

ನವೆಂಬರ್ 20 ರಂದು ಗೃಹ ಸಚಿವ ಬಸವರಾಜ್​ ಬೊಮ್ಮಾಯಿ ಬೆಂಗಳೂರಿನಿಂದ ಮೈಸೂರು ಕಡೆಗೆ ತೆರಳುತ್ತಿದ್ದರು. ಈ ಸಂದರ್ಭ ಪೊಲೀಸ್ ಸಿಬ್ಬಂದಿವೋರ್ವರು ಕಾರನ್ನು ತಡೆಯಲು ಮುಂದಾದರೂ ಚಾಲಕ ಕಾರನ್ನು ನಿಲ್ಲಿಸದೇ ತೆರಳಿದ್ದರು ಎನ್ನಲಾಗ್ತಿದೆ.

ಗೃಹ ಸಚಿವ ಬೊಮ್ಮಾಯಿ ಕಾರು ಚಾಲಕನ ವಿರುದ್ಧ ಎಫ್​ಐಆರ್​... ಕಾರಣ?

ಈ ಪ್ರಕರಣ ಕುರಿತು ಈಟಿವಿ ಭಾರತ ವರದಿ ಮಾಡಿತ್ತು. ವರದಿ ಹಿನ್ನೆಲೆಯಲ್ಲಿ ಕರ್ತವ್ಯವನ್ನು ಸರಿಯಾಗಿ ನಿಭಾಯಿಸಿಲ್ಲ ಎಂಬ ಆರೋಪದಡಿ ಇಬ್ಬರು ಪೊಲೀಸ್ ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ. ಅಲ್ಲದೆ, ಚೆಕ್ ಪೋಸ್ಟ್​ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಇಬ್ಬರು ಅಧಿಕಾರಿಗಳನ್ನು ಇಲಾಖಾ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.

ABOUT THE AUTHOR

...view details