ಕರ್ನಾಟಕ

karnataka

ETV Bharat / state

KRS​ಗೆ ಹೆಚ್ಚು ಬಾರಿ ಬಾಗಿನ ಅರ್ಪಿಸಿದ ಮುಖ್ಯಮಂತ್ರಿ ಯಾರು ಗೊತ್ತಾ?

ರಾಜ್ಯದ ರಾಜಾಹುಲಿ ಎನಿಸಿಕೊಂಡಿರುವ ಬಿ.ಎಸ್.ಯಡಿಯೂರಪ್ಪ ಕೆಆರ್‌ಎಸ್‌ ಅಣೆಕಟ್ಟೆಗೆ ಅತಿ ಹೆಚ್ಚು ಬಾರಿ ಬಾಗಿನ ಅರ್ಪಿಸಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಬಿ.ಎಸ್.ಯಡಿಯೂರಪ್ಪ
Yediyurappa

By

Published : Jul 30, 2021, 11:33 AM IST

ಮಂಡ್ಯ: ವಿಶ್ವವಿಖ್ಯಾತ ಕೆಆರ್‌ಎಸ್‌ ಅಣೆಕಟ್ಟೆಗೆ ಅತಿ ಹೆಚ್ಚು ಬಾರಿ ಬಾಗಿನ ಅರ್ಪಿಸಿದ ಹೆಗ್ಗಳಿಕೆ ಜಿಲ್ಲೆಯ ಮಣ್ಣಿನ ಮಗ ಬಿ.ಎಸ್. ಯಡಿಯೂರಪ್ಪಗೆ ಸಲ್ಲುತ್ತದೆ. ಅಂತೆಯೇ ಈ ಬಾರಿ ಅವರೇ ಬಾಗಿನ ಅರ್ಪಿಸಬಹುದೆಂಬ ನಿರೀಕ್ಷೆ ಇತ್ತು. ಆದರೆ, ರಾಜಕೀಯ ಬದಲಾವಣೆಯಿಂದ ಸಾಧ್ಯವಾಗದಿರುವುದು ಅವರ ಅಭಿಮಾನಿಗಳಲ್ಲಿ ಹಾಗೂ ಪಕ್ಷದ ಕಾರ್ಯಕರ್ತರಲ್ಲಿ ಬೇಸರ ಮೂಡಿಸಿದೆ.

ಕಾವೇರಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗಿ ಕೆಆರ್‌ಎಸ್ ಡ್ಯಾಂನಲ್ಲಿ 112.40 ಅಡಿ ನೀರು ಸಂಗ್ರಹವಾಗಿದೆ. ಸದ್ಯಕ್ಕೆ ಮಳೆ ಬೀಳುವುದು ಇಳಿಮುಖವಾಗಿದ್ದು, ಮುಂದಿನ ದಿನಗಳಲ್ಲಿ ಮತ್ತೆ ಮಳೆಯಾಗುವ ಸಾಧ್ಯತೆ ಇದೆ. ಡ್ಯಾಂ ಭರ್ತಿಯಾದರೆ ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿರುವ ಬಸವರಾಜ್ ಬೊಮ್ಮಾಯಿ ಬಾಗಿನ ಅರ್ಪಿಸಲ್ಲಿದ್ದಾರೆ.

ಕೆಆರ್‌ಎಸ್​ಗೆ ಹೆಚ್ಚು ಬಾರಿ ಬಾಗಿನ ಅರ್ಪಿಸಿದ ಬಿ.ಎಸ್.ಯಡಿಯೂರಪ್ಪ

ಈ ಹಿಂದೆ ಕನ್ನಂಬಾಡಿ ಅಣೆಕಟ್ಟೆಗೆ ಐದು ಬಾರಿ ಬಾಗಿನ ಅರ್ಪಿಸುವ ಮೂಲಕ ಬಿ.ಎಸ್.ಯಡಿಯೂರಪ್ಪ ದಾಖಲೆ ಬರೆದಿದ್ದಾರೆ. 2020ರಲ್ಲಿ ಗೌರಿಹಬ್ಬದ ದಿನದಂದು ಕೋವಿಡ್ ಹಿನ್ನೆಲೆ ಆಡಂಬರವಿಲ್ಲದೇ ಸರಳ ಕಾರ್ಯಕ್ರಮದ ಮೂಲಕ ಬಿಎಸ್‌ವೈ ಬಾಗಿನ ಅರ್ಪಿಸಿದ್ದರು. 2008, 2009, 2010, 2019 ಹಾಗೂ 2020ರಲ್ಲಿ ಸಹ ಬಿಎಸ್​ವೈ ಅವರೇ ಬಾಗಿನ ಸಲ್ಲಿಸಿದ್ದಾರೆ.

1979 ರಿಂದ ಕೆಆರ್‌ಎಸ್‌ನಲ್ಲಿ ಬಾಗಿನ ಅರ್ಪಿಸುವ ಪದ್ಧತಿಗೆ ಅಂದಿನ ಮುಖ್ಯಮಂತ್ರಿ ದೇವರಾಜ ಅರಸು ಚಾಲನೆ ನೀಡಿದ್ದರು. ಅಂದಿನಿಂದ ಕಟ್ಟೆ ತುಂಬಿದ ಎಲ್ಲಾ ವರ್ಷಗಳಲ್ಲೂ ಬಾಗಿನ ಅರ್ಪಿಸಿಕೊಂಡು ಬರಲಾಗುತ್ತಿದೆ. ಎಸ್.ಬಂಗಾರಪ್ಪ ಸಿಎಂ ಆಗಿದ್ದಾಗ 1990, 1991 ಹಾಗೂ 1992ರಲ್ಲಿ ಬಾಗಿನ ಅರ್ಪಿಸಿದ್ದಾರೆ. ಹೆಚ್.ಡಿ ಕುಮಾರಸ್ವಾಮಿ 2006, 2007 ಹಾಗೂ 2018 ರಲ್ಲಿ ಬಾಗಿನ ಅರ್ಪಿಸಿದ್ದಾರೆ.

ಇನ್ನು ನಾಲ್ಕೂವರೆ ವರ್ಷ ಅಧಿಕಾರ ನಡೆಸಿದ ಎಸ್.ಎಂ.ಕೃಷ್ಣ, 5 ವರ್ಷ ಪೂರೈಸಿದ ಸಿದ್ದರಾಮಯ್ಯ ಅವರಿಗೆ ಬಾಗಿನ ಬಿಡಲು ಅವಕಾಶ ಸಿಕ್ಕಿದ್ದು, ತಲಾ 2 ಬಾರಿ ಅಂದ್ರೆ 1999, 2000 ರಲ್ಲಿ ಎಸ್.ಎಂ.ಕೃಷ್ಣ ಹಾಗೂ 2013, 2014ರಲ್ಲಿ ಸಿದ್ದರಾಮಯ್ಯ ಬಾಗಿನ ಅರ್ಪಿಸಿದ್ದಾರೆ.

1983, 1984ರಲ್ಲಿ ರಾಮಕೃಷ್ಣ ಹೆಗಡೆ, 1993, 1994ರಲ್ಲಿ ಎಂ. ವೀರಪ್ಪ ಮೊಯ್ಲಿ, 2004, 2005ರಲ್ಲಿ ಎನ್.ಧರ್ಮಸಿಂಗ್ ಬಾಗಿನ ಅರ್ಪಿಸಿದ್ದಾರೆ. 1980ರಲ್ಲಿ ಗುಂಡೂರಾವ್, 1988 ರಲ್ಲಿ ಸರ್ಕಾರದ ಪ್ರತಿನಿಧಿಯಾಗಿ ರಾಜ್ಯಪಾಲರಾಗಿದ್ದ ಪಿ.ವೆಂಕಟಸುಬ್ಬಯ್ಯ, 1989ರಲ್ಲಿ ವೀರೇಂದ್ರ ಪಾಟೀಲ್, 1995ರಲ್ಲಿ ಹೆಚ್. ಡಿ.ದೇವೇಗೌಡ, 1996 ರಲ್ಲಿ ಜೆ.ಹೆಚ್. ಪಟೇಲ್, 2011ರಲ್ಲಿ ಡಿ.ವಿ.ಸದಾನಂದಗೌಡ ಬಾಗಿನ ಬಿಟ್ಟಿದ್ದಾರೆ. 1979 ರಿಂದ ಈವರೆಗೆ 14 ವರ್ಷ ಬಾಗಿನ ಸಲ್ಲಿಕೆಯಾಗಿಲ್ಲ.

ABOUT THE AUTHOR

...view details