ಕರ್ನಾಟಕ

karnataka

By

Published : Jan 25, 2021, 2:12 PM IST

ETV Bharat / state

ರಾಜಕೀಯ ಜೀವನದಲ್ಲಿ ನಾನು ಅಕ್ರಮ ಗಣಿಗಾರಿಕೆಗೆ ಅವಕಾಶ ಕೊಟ್ಟವನಲ್ಲ: ಹೆಚ್​ಡಿಕೆ

ರಾಜ್ಯದಲ್ಲಿ ಅತೀ ಹೆಚ್ಚು ಅಕ್ರಮ ಗಣಿಗಾರಿಕೆ ನಡೆಯುತ್ತಿರುವ ಜಿಲ್ಲೆ ಎಂದರೆ ಅದು ಮಂಡ್ಯ. ಎನ್‌ಒಸಿ ಕೊಡಲು ಇಲ್ಲಿ 10 ಲಕ್ಷ ಫಿಕ್ಸ್ ಮಾಡಿಕೊಂಡಿದ್ದಾರೆ. 10 ಲಕ್ಷ ರೂಪಾಯಿ ದುಡ್ಡು ಎಲ್ಲಿ ಹೋಗುತ್ತಿದೆ ಎಂಬುದರ ಬಗ್ಗೆ ಸತ್ಯ ಹೇಳಬೇಕು. ಮಂತ್ರಿಯಾಗಿ ಜಿಲ್ಲೆಯ ಆಸ್ತಿಯನ್ನು ಉಳಿಸಬೇಕು. ಈಗ ಬಂದು ಹೇಳಿಕೆ ಕೊಟ್ಟು ರೇಟ್ ಜಾಸ್ತಿ ಮಾಡಿಕೊಳ್ಳುತ್ತಿದ್ದಾರೆ ಎಂದು ಸಚಿವ ನಾರಾಯಣ ಗೌಡ ವಿರುದ್ಧ ಮಾಜಿ ಸಿಎಂ ಕುಮಾರಸ್ವಾಮಿ ಕಿಡಿಕಾರಿದ್ದಾರೆ.

ex cm kumarswamy outrage against minister narayanagowda
ಮಾಜಿ ಸಿಎಂ ಕುಮಾರಸ್ವಾಮಿ ವಾಗ್ದಾಳಿ

ಮಂಡ್ಯ:ನನ್ನ ರಾಜಕೀಯ ಜೀವನದಲ್ಲೇ ನಾನು ಅಕ್ರಮ ಗಣಿಗಾರಿಕೆಗೆ ಅವಕಾಶ ಕೊಟ್ಟವನಲ್ಲ. ಈಗ ಸಚಿವ ನಾರಾಯಣ ಗೌಡ ಅವರು ಅಕ್ರಮ ಗಣಿಗಾರಿಕೆ ಬಗ್ಗೆ ಮಾತಾನಾಡುತ್ತಾರೆ ಎಂದು ಸಚಿವ ನಾರಾಯಣ ಗೌಡ ವಿರುದ್ಧ ಮಾಜಿ ಸಿಎಂ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

ಸಚಿವ ನಾರಾಯಣ ಗೌಡ ಮಾಜಿ ಸಿಎಂ ಕುಮಾರಸ್ವಾಮಿ ವಾಗ್ದಾಳಿ
ಜಿಲ್ಲೆಯ ನಾಗಮಂಗಲದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 14 ತಿಂಗಳಿನಿಂದ ಅವರು ಎಲ್ಲಿ ಹೋಗಿದ್ದರು. ಮಂಡ್ಯದಲ್ಲಿ ಶೇ.87 ರಷ್ಟು ಅಕ್ರಮ ಗಣಿಗಾರಿಕೆ ನಡೆಯುತ್ತಿದೆ ಎಂದು ಹರಿಹಾಯ್ದರು.
ರಾಜ್ಯದಲ್ಲಿ ಅತೀ ಹೆಚ್ಚು ಅಕ್ರಮ ಗಣಿಗಾರಿಕೆ ನಡೆಯುತ್ತಿರುವ ಜಿಲ್ಲೆ ಎಂದರೆ ಅದು ಮಂಡ್ಯ, ಎನ್‌ಒಸಿ ಕೊಡಲು ಇಲ್ಲಿ 10 ಲಕ್ಷ ಫಿಕ್ಸ್ ಮಾಡಿಕೊಂಡಿದ್ದಾರೆ. 10 ಲಕ್ಷ ರೂಪಾಯಿ ದುಡ್ಡು ಎಲ್ಲಿ ಹೋಗುತ್ತಿದೆ ಎಂಬುದರ ಬಗ್ಗೆ ಸತ್ಯ ಹೇಳಬೇಕು ಎಂದು ಆಗ್ರಹಿಸಿದ್ರು. ಮಂತ್ರಿಯಾಗಿ ಜಿಲ್ಲೆಯ ಆಸ್ತಿಯನ್ನು ಉಳಿಸಬೇಕು. ಈಗ ಬಂದು ಹೇಳಿಕೆ ಕೊಟ್ಟು ರೇಟ್ ಜಾಸ್ತಿ ಮಾಡಿಕೊಳ್ಳುತ್ತಿದ್ದಾರೆ ಎಂದು ಹೆಚ್​ಡಿಕೆ ವ್ಯಂಗ್ಯವಾಡಿದರು.
ಬೆಳಗಾವಿಯಲ್ಲಿ ಮರಾಠರ ಉದ್ಧಟತನ ವಿಚಾರ‌ ಕುರಿತು ಪ್ರತಿಕ್ರಿಯಿಸಿದ ಅವರು, ಬೆಳಗಾವಿಗೆ ಸಂಬಂಧಿಸಿದಂತೆ ಗಡಸು ನಿರ್ಧಾರ ತೆಗೆದುಕೊಳ್ಳಿ ಅಂತಾ ರಾಜ್ಯ ಸರ್ಕಾರಕ್ಕೆ ಹೇಳಿದ್ದೇನೆ. ಆದರೆ ಮರಾಠಿಗರನ್ನು ಮೆಚ್ಚಿಸಿಕೊಳ್ಳುವ ಸಲುವಾಗಿ ಸರ್ಕಾರ ಗಡಸು ನಿರ್ಧಾರ ಮಾಡುತ್ತಿಲ್ಲ ಎಂದು ಕಿಡಿಕಾರಿದರು.

For All Latest Updates

ABOUT THE AUTHOR

...view details