ಮಂಡ್ಯ:ದೇಶದಲ್ಲಿ ಕೊರೊನಾಗೆ ಲಸಿಕೆ ಸಿಗುವ ಹಿನ್ನೆಲೆಯಲ್ಲಿ ಕೊರೊನಾ ಲಸಿಕೆ ಸಂಗ್ರಹಕ್ಕೆ ಮಂಡ್ಯ ಜಿಲ್ಲೆಯಲ್ಲೂ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಮಂಚೇಗೌಡ ತಿಳಿಸಿದರು.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೊದಲ ಹಂತದ ಲಸಿಕೆಯ ಫಲಾನುಭವಿಗಳ ಪಟ್ಟಿ ಸಿದ್ಧತೆ ಮಾಡಿಟ್ಟುಕೊಳ್ಳಲಾಗಿದೆ. ಫಲಾನುಭವಿಗಳಲ್ಲಿ ಮುಖ್ಯವಾಗಿ ಹೆಲ್ತ್ ಕೇರ್ ವರ್ಕರ್ಸ್ ಸೇರಿದಂತೆ ಆರೋಗ್ಯ ಇಲಾಖೆಯ ಕೊರೊನಾ ವಾರಿಯರ್ಸ್ ಹಾಗೂ ಅಂಗನವಾಡಿ ಕಾರ್ಯಕರ್ತರು ಸೇರಿ ಸುಮಾರು 13 ಸಾವಿರ ಜನರನ್ನು ಗುರುತಿಸಲಾಗಿದೆ ಎಂದು ಮಾಹಿತಿ ನೀಡಿದರು.
ಸರ್ಕಾರಕ್ಕೆ ಗುರುತಿಸಿರುವ ಈ ಪಟ್ಟಿಯನ್ನು ಕಳುಹಿಸಿಕೊಡಲಾಗಿದೆ. ಲಸಿಕೆ ಸಂಗ್ರಹ ವಿಚಾರದಲ್ಲಿ ನಮ್ಮ ಜಿಲ್ಲಾ ಮಟ್ಟದಲ್ಲಿ 4 ILR, 1ಡೀ ಫ್ರೀಜರ್ ಇದ್ದು, ಇದರಲ್ಲಿ ನಾವು 1.60 ಲಕ್ಷ ಡೋಸ್ ವ್ಯಾಕ್ಸಿನ್ ಸಂಗ್ರಹಿಸಬಹುದು ಎಂದರು.