ಮಂಡ್ಯ:ಜೆಡಿಎಸ್ ಭದ್ರಕೋಟೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅಬ್ಬರದ ಪ್ರಚಾರ ನಡೆಸಿದರು. ಬಿಜೆಪಿ ಅಭ್ಯರ್ಥಿ ಅಶೋಕ್ ಜಯರಾಂ ಪರ ಪ್ರಚಾರ ನಡೆಸಿ ಮತಯಾಚಿಸಿದರು. ಮಂಡ್ಯ ನಗರದ ನೂರಡಿ ರಸ್ತೆಯಿಂದ ಮಹಾವೀರ ವೃತ್ತದ ವರೆಗೆ ಬೃಹತ್ ರೋಡ್ ಶೋ ನಡೆಸಿದರು.
ರಸ್ತೆಯುದ್ದಕ್ಕೂ ಪುಷ್ಪವೃಷ್ಟಿ ಸಲ್ಲಿಸಿ ಜನರು ಜೈಕಾರ ಕೂಗಿ ಬೃಹತ್ ಹಾರಗಳನ್ನ ಹಾಕಿ ಸಿಎಂ ಬಸವರಾಜ ಬೊಮ್ಮಾಯಿಗೆ ಸ್ವಾಗತಿಸಿದ್ರು. ಸಿಎಂ ರೋಡ್ ಶೋ ನಲ್ಲಿ ನಟಿ ತಾರಾ, ಬಿಜೆಪಿ ಜಿಲ್ಲಾಧ್ಯಕ್ಷ ಸಿಪಿ ಉಮೇಶ್ ಸಾಥ್ ನೀಡಿದರು.
ಬಳಿಕ ಮಾತನಾಡಿದ ಅವರು, ಉತ್ಸವವನ್ನ ಮೇ 10ಕ್ಕೆ ತೋರಿಸಿ ಎಂದು ಜೈಕಾರ ಕೂಗಿದ ಯುವಕರಿಗೆ ಸಿಎಂ ಬೊಮ್ಮಾಯಿ ಕರೆ ಕೊಟ್ಟರು. ಮಂಡ್ಯ ಇಸ್ ಇಂಡಿಯಾ. ನರೇಂದ್ರ ಮೋದಿ ಬಂದ ಮೇಲೆ ಇಂಡಿಯಾ ಇಸ್ ಮಂಡ್ಯ ಹಾಗಿದೆ. ಮಂಡ್ಯದಲ್ಲಿ ಹೊಸ ಗಾಳಿ ಬೀಸುತ್ತಿದೆ. ಶ್ರಮಪಟ್ಟರೆ ಈ ಗಾಳಿ ಸುನಾಮಿ ಆಗುತ್ತೆ ಎಂದರು.
ಎಸ್ಡಿ ಜಯರಾಂ ಅವರನ್ನ ನೆನಪು ಮಾಡಿಕೊಂಡ ಸಿಎಂ: ಮಂಡ್ಯ ಅಭಿವೃದ್ಧಿಗೆ ಎಸ್ಡಿ ಜಯರಾಂ ಶ್ರಮ ಇದೆ. ಹೃದಯವಂತ ಎಸ್ಡಿ ಜಯರಾಂ, ಅವರ ಮಗ ಬಿಜೆಪಿ ಅಭ್ಯರ್ಥಿ ಆಗಿದ್ದಾರೆ. ಎಸ್. ಡಿ ಜಯರಾಂ ಅವರ ಎಲ್ಲಾ ಅಭಿಮಾನಿಗಳು ಯಾವುದೇ ಪಕ್ಷದಲ್ಲಿ ಇದ್ದರೂ ಸಹ. ಪಕ್ಷಾತೀತವಾಗಿ ಅಶೋಕ್ ಜಯರಾಂ ಅವರಿಗೆ ಆಶೀರ್ವಾದ ಮಾಡಿ. ಮಂಡ್ಯದ ಮಣ್ಣು ಮಣ್ಣಲ್ಲ ಬಂಗಾರ ಚಿನ್ನ. ರೈತರ ಬೆವರು ಸುರಿಸಿದರೆ ಬಂಗಾರದ ಬೆಳೆ ಕೊಡ್ತಾಳೆ ಎಮದು ಹೇಳಿದರು.
ಮಾದೇಗೌಡರ ಜೊತೆ ಸಂಪರ್ಕ ಇತ್ತು. ಈ ನಾಡು ಅತ್ಯಂತ ಶ್ರೀಮಂತವಾಗಬೇಕಾದ ನಾಡು. ಅಂಬರೀಶ್ ಅಣ್ಣ ಮಂಡ್ಯದಲ್ಲಿ ಇದ್ದರು. ಅತ್ಯಂತ ಆತ್ಮೀಯ ಸ್ನೇಹಿತರು 40 ವರ್ಷದ ಸ್ನೇಹಿತರು. ಆ ಪ್ರೀತಿಗಾಗಿ ಮಂಡ್ಯದ ಜನರು ಅಷ್ಟೆ ಹತ್ತಿರ ಇದ್ದಾರೆ. ಸುಮಲತಾ ಅಕ್ಕ ಪಾರ್ಲಿಮೆಂಟ್ನಲ್ಲಿ ಕನ್ನಡದ ಧ್ವನಿ ಎತ್ತಿದ್ದಾರೆ. ಮೈಸೂರು ಸಕ್ಕರೆ ಕಾರ್ಖಾನೆ ಪ್ರಾರಂಭಕ್ಕೆ ರೈತರ ಜೊತೆ ಸುಮಲತಾ ಅಕ್ಕ ಶ್ರಮಿಸಿದ್ದಾರೆ ಎಂದು ಅಂಬರೀಶ್ ಹಾಗೂ ಸುಮಲತಾರನ್ನ ಹಾಡಿ ಹೊಗಳಿದ್ರು.