ಕರ್ನಾಟಕ

karnataka

ETV Bharat / state

ಸಹಕಾರ ಸಂಘದ ಸಭೆಗೆ ಗೈರು ಹಿನ್ನೆಲೆ: ಮತದಾನದಿಂದ ವಂಚಿತರಾದ 1,750 ಷೇರುದಾರರು

ಜಿಲ್ಲೆಯ ಮಳವಳ್ಳಿ ತಾಲೂಕಿನ ತಳಗವಾದಿ ಗ್ರಾಮದಲ್ಲಿ ಸಾಮಾನ್ಯ ಸಭೆಗೆ ಹಾಜರಾಗದ ಹಿನ್ನೆಲೆ, ಸಹಕಾರ ಸಂಘದ 2,161 ಷೇರುದಾರರಲ್ಲಿ 1,750 ಷೇರುದಾರರು ಮತದಾನದಿಂದ ವಂಚಿತರಾಗಿದ್ದಾರೆ.

By

Published : Jan 10, 2020, 7:21 PM IST

Absent  for Co-operative Meeting ... 1,750 shareholders deprived of voting
ಸಹಕಾರ ಸಂಘದ ಸಭೆಗೆ ಗೈರು ಹಿನ್ನೆಲೆ...ಮತದಾನದಿಂದ ವಂಚಿತರಾದ 1,750 ಷೇರುದಾರರು

ಮಂಡ್ಯ:ಜಿಲ್ಲೆಯ ಮಳವಳ್ಳಿ ತಾಲೂಕಿನ ತಳಗವಾದಿ ಗ್ರಾಮದಲ್ಲಿ ಸeಮಾನ್ಯ ಸಭೆಗೆ ಹಾಜರಾಗದ ಹಿನ್ನೆಲೆ, ಸಹಕಾರ ಸಂಘದ 2,161 ಷೇರುದಾರರಲ್ಲಿ 1,750 ಷೇರುದಾರರು ಮತದಾನದಿಂದ ವಂಚಿತರಾಗಿದ್ದಾರೆ.

ಸಹಕಾರ ಸಂಘದ ಸಭೆಗೆ ಗೈರು ಹಿನ್ನೆಲೆ: ಮತದಾನದಿಂದ ವಂಚಿತರಾದ 1,750 ಷೇರುದಾರರು

ಸಹಕಾರ ಸಂಘದ ಕಾನೂನಿನ ಅನ್ವಯ ಐದು ವರ್ಷಗಳಲ್ಲಿ 3 ಸಾಮಾನ್ಯ ಸಭೆಗೆ ಷೇರುದಾರರು ಹಾಜರಾಗಬೇಕು. ಆದರೆ ಈ ಮೂರು ಸಭೆಗೆ ಹಾಜರಾಗದ ಹಿನ್ನೆಲೆ, 1,750 ಷೇರುದಾರರು ಮತದಾನದಿಂದ ಅನರ್ಹಗೊಂಡಿದ್ದು, ಇದನ್ನು ಖಂಡಿಸಿ ಗ್ರಾಮದ ಕೆಲ ಮುಖಂಡರು ಸಹಕಾರ ಸಂಘದ ಬ್ಯಾಂಕ್ ಮುಂದೆ ಪ್ರತಿಭಟನೆ ನಡೆಸಿದರು.

ಕೇವಲ 411 ಷೇರುದಾರರಿಗೆ ಮಾತ್ರ ಮತದಾನದ ಹಕ್ಕು ನೀಡಲಾಗಿದೆ. ಹೀಗಾಗಿ ಎಲ್ಲರಿಗೂ ಮತದಾನದ ಹಕ್ಕನ್ನು ನೀಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ರು.

ABOUT THE AUTHOR

...view details