ಕರ್ನಾಟಕ

karnataka

ಗಂಗಾವತಿಯಲ್ಲಿ ಪಥ ಬದಲಿಸಿದ 'ವಿದ್ಯಾಗಮ': ಶಾಲೆಗಳಲ್ಲಿಯೇ ಮಕ್ಕಳಿಗೆ ಪಾಠ

ಗಂಗಾವತಿಯ ಹನುಮನಹಳ್ಳಿ, ರಾಂಪುರ, ತಿರುಮಲಾಪುರ ಸೇರಿದಂತೆ ಹತ್ತಾರು ಶಾಲೆಗಳ ಶಿಕ್ಷಕರು, ಮಕ್ಕಳನ್ನು ಶಾಲೆಗೆ ಕರೆಯಿಸಿಕೊಂಡು ಕೊಠಡಿಯಲ್ಲಿ ಅದೂ ಯಾವುದೇ ಆರೋಗ್ಯದ ಮುಂಜಾಗ್ರತಾ ಕ್ರಮಗಳಿಲ್ಲದೇ ಪಾಠ ಮಾಡುತ್ತಿರುವುದು ಬೆಳಕಿಗೆ ಬಂದಿದೆ.

By

Published : Aug 26, 2020, 12:02 AM IST

Published : Aug 26, 2020, 12:02 AM IST

ಶಾಲೆಗಳಲ್ಲಿಯೇ ಮಕ್ಕಳಿಗೆ ಪಾಠ
ಶಾಲೆಗಳಲ್ಲಿಯೇ ಮಕ್ಕಳಿಗೆ ಪಾಠ

ಗಂಗಾವತಿ: ಕೊರೊನಾ ಹಿನ್ನೆಲೆ ಶಿಕ್ಷಣ ಇಲಾಖೆ ಆರಂಭಿಸಿದ್ದ ವಠಾರ ಪಾಠ ಎಂಬ ವಿನೂತನ ಯೋಜನೆಯು ಇದೀಗ ತಾಲೂಕಿನಲ್ಲಿ ಪಥ ಬದಲಿಸಿದೆ.

ಶಾಲೆಗಳಲ್ಲಿಯೇ ಮಕ್ಕಳಿಗೆ ಪಾಠ

ಮಕ್ಕಳಿರುವ ಸ್ಥಳಕ್ಕೆ ತೆರಳಿ ನಾಲ್ಕಾರು ಮಕ್ಕಳನ್ನು ಒಂದು ಕಡೆ ಸೇರಿಸಿ ಆಯಾ ಸಂಬಂಧಿತ ಶಾಲೆಯ ಶಿಕ್ಷಕರು ಪಾಠ ಮಾಡಬೇಕು ಎಂದು ಶಿಕ್ಷಣ ಇಲಾಖೆ ವಿದ್ಯಾಗಮ ಯೋಜನೆಯನ್ನು ರಾಜ್ಯದಲ್ಲಿ ಜಾರಿಗೆ ತಂದಿದೆ. ಆದರೆ ತಾಲೂಕಿನ ಹನುಮನಹಳ್ಳಿ, ರಾಂಪುರ, ತಿರುಮಲಾಪುರ ಸೇರಿದಂತೆ ಹತ್ತಾರು ಶಾಲೆಗಳ ಶಿಕ್ಷಕರು, ಮಕ್ಕಳನ್ನು ಶಾಲೆಗೆ ಕರೆಯಿಸಿಕೊಂಡು ಕೊಠಡಿಯಲ್ಲಿ ಅದೂ ಯಾವುದೇ ಆರೋಗ್ಯದ ಮುಂಜಾಗ್ರತಾ ಕ್ರಮಗಳಿಲ್ಲದೇ ಪಾಠ ಮಾಡುತ್ತಿರುವ ಘಟನೆ ಬೆಳಕಿಗೆ ಬಂದಿದೆ.

ಜೂನ್ ತಿಂಗಳಲ್ಲಿಯೇ ಆರಂಭವಾಗಬೇಕಿದ್ದ ಶೈಕ್ಷಣಿಕ ವರ್ಷ ಕೊರೊನಾ ಲಾಕ್​ಡೌನ್ ಹಿನ್ನೆಲೆ ಇದುವರೆಗೂ ಆರಂಭವಾಗಿಲ್ಲ. ಆದರೆ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಮಕ್ಕಳು ಉದ್ದೇಶಿತ ವರ್ಗದ ಶಿಕ್ಷಣದಿಂದ ವಂಚಿತವಾಗಬಾರದು ಎಂಬ ಕಾರಣಕ್ಕೆ ಇಲಾಖೆ ವಿದ್ಯಾಗಮ ಯೋಜನೆಯನ್ನು ಜಾರಿಗೆ ತಂದಿದೆ. ಆದರೆ ಈಗ ತಾಲೂಕಿನಲ್ಲಿ ಇದರ ನಿಯಮ ಉಲ್ಲಂಘನೆಯಾಗಿದ್ದು, ಆತಂಕಕ್ಕೆ ಎಡೆಮಾಡಿದೆ.

ABOUT THE AUTHOR

...view details