ಕರ್ನಾಟಕ

karnataka

ETV Bharat / state

ಬೊಮ್ಮಾಯಿ ಸಮಯ ಮುಗಿದಿದೆ, ಮತ್ತೆ ಸಿಎಂ ಬದಲಾಗುವ ಸಾಧ್ಯತೆಯಿದೆ: ಸತೀಶ್​​ ಜಾರಕಿಹೊಳಿ - cm change news

ಬಿಜೆಪಿ ಅಧಿಕಾರಕ್ಕೆ ಬಂದಾಗೆಲ್ಲ ಮೂರು ಜನ ಸಿಎಂ ಆಗಿದ್ದಾರೆ. ಈ ಬಾರಿಯೂ ಮೂರು ಜನ ಸಿಎಂ ಆಗಲಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್​​ ಜಾರಕಿಹೊಳಿ ಭವಿಷ್ಯ ನುಡಿದರು.

satish jarkiholi statement on cm change issue
ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್​​ ಜಾರಕಿಹೊಳಿ

By

Published : Feb 2, 2022, 5:54 PM IST

Updated : Feb 2, 2022, 6:31 PM IST

ಕೊಪ್ಪಳ:ಬಿಜೆಪಿ ಹೈಕಮಾಂಡ್ ಬಸವರಾಜ ಬೊಮ್ಮಾಯಿ ಅವರಿಗೆ 6 ತಿಂಗಳು ಮಾತ್ರ ಸಮಯ ಕೊಟ್ಟಿತ್ತು. ಈಗ ಆ ಸಮಯ ಮುಗಿದಿದೆ. ಮತ್ತೆ ಸಿಎಂ ಬದಲಾಗುವ ಸಾಧ್ಯತೆಯಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್​​ ಜಾರಕಿಹೊಳಿ ಹೇಳಿದ್ದಾರೆ.

ನಗರದ ಪ್ರವಾಸಿ ಮಂದಿರದಲ್ಲಿಂದು ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಸ್ವತಃ ಬಿಜೆಪಿ ನಾಯಕರೇ ಸಿಎಂ ಬದಲಾವಣೆ ಬಗ್ಗೆ ಮಾತನಾಡುತ್ತಿದ್ದಾರೆ. ಬಿಜೆಪಿ ಅಧಿಕಾರಕ್ಕೆ ಬಂದಾಗೆಲ್ಲ ಮೂರು ಜನ ಸಿಎಂ ಆಗಿದ್ದಾರೆ. ಈ ಬಾರಿಯೂ ಮೂರು ಜನ ಸಿಎಂ ಆಗಲಿದ್ದಾರೆ ಎಂದು ಭವಿಷ್ಯ ನುಡಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್​​ ಜಾರಕಿಹೊಳಿ

ವಿಧಾನ ಪರಿಷತ್​ ಸದಸ್ಯ ಸಿ.ಎಂ. ‌ಇಬ್ರಾಹಿಂ ಕಾಂಗ್ರೆಸ್ ಪಕ್ಷ ಬಿಡುವ ವಿಚಾರ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸತೀಶ ಜಾರಕಿಹೊಳಿ, ಸಿ.ಎಂ ಇಬ್ರಾಹಿಂ,‌ ನಾನು ಸೇರಿ ಎಲ್ಲರೂ ಕಾಂಗ್ರೆಸ್​ನಲ್ಲೇ ಇದ್ದೇವೆ. ಅವರು ಇನ್ನೂ ಕಾಂಗ್ರೆಸ್​ನವರೇ. ಸೆಕ್ಯೂಲರ್ ಶಕ್ತಿ ಉಳಿಸಲು ದಳದಿಂದ ಕಾಂಗ್ರೆಸ್​ಗೆ ಬಂದವರು. ಅವರಿಗೆ ಒಂದಷ್ಟು ಅಸಮಾಧಾನವಿರಬಹುದು. ಹಾಗಂತ ಅವರ ರಾಜಕೀಯ ಇನ್ನೂ ಮುಗಿದಿಲ್ಲ. ಅವರು ಕಾಂಗ್ರೆಸ್​ನಲ್ಲೇ ಇರುತ್ತಾರೆ. ಚರ್ಚೆ ಅನವಶ್ಯಕ ಎಂದರು.

ಇದನ್ನೂ ಓದಿ:ಬಿಎಸ್‌ವೈ ಯುಗ ಅಂತ್ಯವಾಗಿದೆ, ಇನ್ನೂ ಮೂರ್ನಾಲ್ಕು ಜನರ ಯುಗ ಮುಗಿಯಲಿದೆ : ಶಾಸಕ ಯತ್ನಾಳ್

ಕಾಂಗ್ರೆಸ್ ಎಸ್ ಎಸ್ ಪಕ್ಷ ಎಂಬ ಸಚಿವ ಶ್ರೀರಾಮುಲು ಹೇಳಿಕೆಗೆ ಪ್ರತಿಕ್ರಿಯಿಸಿ, ಬಿಜೆಪಿಯಲ್ಲೂ ಒಂದು ಆರ್.ಎಸ್.ಎಸ್ ಮತ್ತೊಂದು ಯಡಿಯೂರಪ್ಪ ಬಣವಿದೆ. ಎಲ್ಲ ಪಕ್ಷದಲ್ಲಿಯೂ ಇರುವಂತೆ ಕಾಂಗ್ರೆಸ್​‌ನಲ್ಲೂ ಒಂದಷ್ಟು ‌ಭಿನ್ನಾಭಿಪ್ರಾಯಗಳಿವೆ. ನಗರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಜನರು ಉತ್ತರ ಕೊಟ್ಟಿದ್ದಾರೆ. ಪರಿಷತ್ ಚುನಾವಣೆಯಲ್ಲಿ ಮುಳುಗುವ ಹಡಗು ಯಾವುದು ಅಂತ ಜನ ತೋರಿಸಿದ್ದಾರೆ ಎಂದರು. ಇನ್ನೂ ಕೋವಿಡ್ ನಂತರ ಮೇಕೆದಾಟು ಪಾದಯಾತ್ರೆ ಮುಂದುವರಿಯಲಿದೆ ಎಂದು ಸತೀಶ್​ ಜಾರಕಿಹೊಳಿ ಹೇಳಿದರು.

ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

Last Updated : Feb 2, 2022, 6:31 PM IST

ABOUT THE AUTHOR

...view details