ಕರ್ನಾಟಕ

karnataka

ETV Bharat / state

ಇಬ್ಬರು ಕ್ವಾರಂಟೈನ್​​ ಮುಕ್ತ: ಕುಷ್ಟಗಿಯಲ್ಲಿ ಸಾಂಸ್ಥಿಕ ನಿರ್ಬಂಧಿತರ ಸಂಖ್ಯೆ ಈಗ ಶೂನ್ಯ!

ಇಬ್ಬರು ಡಿಸ್ಚಾರ್ಜ್ ಆಗುವ ಮೂಲಕ ಕುಷ್ಟಗಿ ತಾಲೂಕಿನಲ್ಲಿ ಸಾಂಸ್ಥಿಕ ಕ್ವಾರಂಟೈನ್​ನಲ್ಲಿರುವವರ ಸಂಖ್ಯೆ ಶೂನ್ಯವಾಗಿದ್ದು, ಕುಷ್ಟಗಿ ತಾಲೂಕು ಸೇಫ್ ಝೋನ್​ನತ್ತ ತೆರಳುತ್ತಿದೆ.

By

Published : Jun 22, 2020, 10:40 AM IST

quarantine
quarantine

ಕುಷ್ಟಗಿ (ಕೊಪ್ಪಳ):ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ಕಾಟಾಪುರ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಸಾಂಸ್ಥಿಕ ಕ್ವಾರಂಟೈನ್​ನಲ್ಲಿದ್ದ ಇಬ್ಬರನ್ನು ಡಿಸ್ಚಾರ್ಜ್ ಮಾಡಲಾಗಿದೆ.

ಮಹಾರಾಷ್ಟ್ರದಿಂದ ಆಗಮಿಸಿದ್ದ ಇವರು ಕಾಟಾಪುರ ಸಾಂಸ್ಥಿಕ ಕ್ವಾರಂಟೈನ್​ನಲ್ಲಿದ್ದರು. ಮಾದರಿ ಗಂಟಲು ದ್ರವ ಪರೀಕ್ಷೆಯಲ್ಲಿ ಯಾವುದೇ ಕೊರೊನಾ ಲಕ್ಷಣ ದೃಢವಾಗಿಲ್ಲ. ಕ್ವಾರಂಟೈನ್ ಅವಧಿ ಪೂರೈಸಿದ್ದರಿಂದ ಇಬ್ಬರನ್ನು ಡಿಸ್ಚಾರ್ಜ್ ಮಾಡಲಾಗಿದೆ.

ಈ ಇಬ್ಬರು ಡಿಸ್ಚಾರ್ಜ್ ಅಗುವ ಮೂಲಕ ಕುಷ್ಟಗಿ ತಾಲೂಕಿನಲ್ಲಿ ಸಾಂಸ್ಥಿಕ ಕ್ವಾರಂಟೈನ್​ನಲ್ಲಿರುವವರ ಸಂಖ್ಯೆ ಶೂನ್ಯವಾಗಿದ್ದು, ಕುಷ್ಟಗಿ ತಾಲೂಕು ಸೇಫ್ ಝೋನ್​ನಲ್ಲಿದೆ ಎನ್ನಲಾಗುತ್ತಿದೆ.

ABOUT THE AUTHOR

...view details