ಗಂಗಾವತಿ :ಕೊರೊನಾ ಸೋಂಕಿನಿಂದ ತಾಲೂಕನ್ನ ಕಾಪಾಡಮ್ಮ ಎಂದು ಶಾಸಕ ಪರಣ್ಣ ಮುನವಳ್ಳಿ ದೈವದ ಮೊರೆ ಹೋಗಿದ್ದಾರೆ.
ಶಾರದಾಮ್ಮ, ಕೊರೊನಾದಿಂದ ಕಾಪಾಡಮ್ಮ ಎಂದು ಶಾಸಕ ಮುನವಳ್ಳಿ ಪ್ರಾರ್ಥನೆ
ಜಿಲ್ಲೆಯಲ್ಲಿ ಪತ್ತೆಯಾದ ಸುಮಾರು 200 ಪ್ರಕರಣಗಳ ಪೈಕಿ ಅರ್ಧಕ್ಕೂ ಹೆಚ್ಚು ಪ್ರಕರಣ ಗಂಗಾವತಿ (ಕಾರಟಗಿ, ಕನಕಗಿರಿ ಒಳಗೊಂಡು) ತಾಲೂಕಿನಲ್ಲಿ ಪತ್ತೆಯಾಗಿವೆ..
ದೇವರ ಮೊರೆ ಹೋದ ಶಾಸಕ ಮುನವಳ್ಳಿ
ಇಲ್ಲಿನ ಜಯನಗರದ ಶಾರದಾಂಬಾ ನಗರದಲ್ಲಿರುವ ಶೃಂಗೇರಿ ಶಾರದಾಂಬಾ ದೇಗುಲಕ್ಕೆ ಭೇಟಿ ನೀಡಿದ ಶಾಸಕರು, ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಕೊರೊನಾ ಸಂಕಷ್ಟದಿಂದ ಮುಕ್ತಿ ನೀಡುವಂತೆ ಪ್ರಾರ್ಥಿಸಿದ್ದಾರೆ. ಜಿಲ್ಲೆಯಲ್ಲಿ ಪತ್ತೆಯಾದ ಸುಮಾರು 200 ಪ್ರಕರಣಗಳ ಪೈಕಿ ಅರ್ಧಕ್ಕೂ ಹೆಚ್ಚು ಪ್ರಕರಣ ಗಂಗಾವತಿ (ಕಾರಟಗಿ, ಕನಕಗಿರಿ ಒಳಗೊಂಡು) ತಾಲೂಕಿನಲ್ಲಿ ಪತ್ತೆಯಾಗಿವೆ.
ಈ ಹಿನ್ನೆಲೆ ಸೋಂಕು ಉಲ್ಬಣವಾಗದಂತೆ ಜನರನ್ನು ಸಂಕಷ್ಟದಿಂದ ಪಾರು ಮಾಡುವಂತೆ ಶಾಸಕರು ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು.