ಕರ್ನಾಟಕ

karnataka

ಕಸಾಪ ಚುನಾವಣೆಯಲ್ಲಿ ಈ ಬಾರಿ ಶೇಖರಗೌಡ ಮಾಲಿಪಾಟೀಲ್​ಗೆ ಗೆಲುವು: ಸಾಹಿತಿ ಆರ್.ಜಿ.ಹಳ್ಳಿ ನಾಗರಾಜ್

By

Published : Jan 20, 2021, 7:14 AM IST

Updated : Jan 20, 2021, 7:40 AM IST

ಕಸಾಪ ಚುನಾವಣೆಯಲ್ಲಿ ಬೆಂಗಳೂರಿನಲ್ಲಿ ಹೆಚ್ಚು ಮತಗಳನ್ನು ಪಡೆಯಬೇಕಿದೆ. ಅಲ್ಲಿ 36 ಸಾವಿರ ಮತಗಳಿದ್ದು, 25 ಸಾವಿರ ಮತದಾನವಾಗುವ ಸಾಧ್ಯತೆಯಿದೆ. ಬೆಂಗಳೂರಿನಲ್ಲಿ 5 ಜನರು ಸ್ಪರ್ಧಿಸಿದ್ದು, ಅವರೆಲ್ಲರೂ ಪಡೆಯುವ ಒಟ್ಟು ಮತಗಳು ಶೇಖರಗೌಡ ಮಾಲಿಪಾಟೀಲ ಅವರಿಗೆ ಸಿಗಲಿವೆ ಎಂದು ಸಾಹಿತಿ ಆರ್.ಜಿ.ಹಳ್ಳಿ ನಾಗರಾಜ್ ಹೇಳಿದರು.

literature-rghalli-nagaraj-statement-about-kannada-sahitya-parishad-election
ಕಸಾಪ ಚುನಾವಣೆಯಲ್ಲಿ ಈ ಬಾರಿ ಶೇಖರಗೌಡ ಮಾಲಿಪಾಟೀಲ ಗೆಲುವು: ಸಾಹಿತಿ ಆರ್.ಜಿ.ಹಳ್ಳಿ ನಾಗರಾಜ್

ಕುಷ್ಟಗಿ(ಕೊಪ್ಪಳ):ಕಳೆದ ಕಸಾಪ ಚುನಾವಣೆಯಲ್ಲಿ ಅತಿಹೆಚ್ಚು ಮತಗಳಿಂದ ಗೆದ್ದು ಬೀಗುತ್ತಿರುವ ಡಾ.ಮನು ಬಳಿಗಾರ ಅವರಿಗಿಂತಲೂ ಹೆಚ್ಚು ಮತಗಳಿಂದ ಶೇಖರಗೌಡ ಮಾಲಿಪಾಟೀಲ ಗೆಲುವು ಸಾಧಿಸಲಿದ್ದಾರೆಂದು ಬೆಂಗಳೂರಿನ ಸಾಹಿತಿ ಆರ್.ಜಿ.ಹಳ್ಳಿ ನಾಗರಾಜ್ ಹೇಳಿದರು.

ಕುಷ್ಟಗಿಯ ಶ್ರೀ ಚನ್ನಮಲ್ಲಿಕಾರ್ಜುನ ಕನ್ವೇಷನ್ ಹಾಲ್​​ನಲ್ಲಿ ಕನ್ನಡ ಸಾಹಿತ್ಯ ಪರಿಷತ್ ಚುನಾವಣೆ 2021ರ ಚುನಾವಣೆ ಸ್ಪರ್ಧಾಕಾಂಕ್ಷಿ ಶೇಖರಗೌಡ ಮಾಲಿಪಾಟೀಲ ಅಭಿಮಾನಿ ಬಳಗ ಆಯೋಜಿಸಿದ್ದ ಸಮಾಲೋಚನಾ ಸಭೆ ಉದ್ಘಾಟಿಸಿ ಮಾತನಾಡಿದರು. ಕಸಾಪ ಚುನಾವಣೆಯಲ್ಲಿ ಬೆಂಗಳೂರಿನಲ್ಲಿ ಹೆಚ್ಚು ಮತಗಳನ್ನು ಪಡೆಯಬೇಕಿದೆ. ಅಲ್ಲಿ 36 ಸಾವಿರ ಮತಗಳಿದ್ದು, 25 ಸಾವಿರ ಮತದಾನವಾಗುವ ಸಾಧ್ಯತೆಯಿದೆ. ಬೆಂಗಳೂರಿನಲ್ಲಿ 5 ಜನರು ಸ್ಪರ್ಧಿಸಿದ್ದು, ಅವರೆಲ್ಲರೂ ಪಡೆಯುವ ಒಟ್ಟು ಮತಗಳು ಶೇಖರಗೌಡ ಮಾಲಿಪಾಟೀಲ ಅವರಿಗೆ ಸಿಗಲಿವೆ. ಈ ಹಿನ್ನೆಲೆಯಲ್ಲಿ ಸಂಘಟಿತ ಪ್ರಯತ್ನ ಕ್ರಿಯಾಶೀಲವಾಗಿದೆ ಎಂದರು.

ಕಸಾಪ ರಾಜ್ಯಾಧ್ಯಕ್ಷ ಸ್ಥಾನ ಅಭ್ಯರ್ಥಿ ಶೇಖರಗೌಡ ಮಾಲಿ ಪಾಟೀಲ ಮಾತನಾಡಿ, ಈ ಸ್ಪರ್ಧೆಗೆ ಕಲ್ಯಾಣ ಕರ್ನಾಟಕ ಪ್ರತಿನಿಧಿಸುತ್ತಿದ್ದರೂ, ಅಖಂಡ ಕರ್ನಾಟಕ ಕಲ್ಪನೆಯ ಹಿನ್ನೆಲೆಯಲ್ಲಿ ಸ್ಪರ್ಧಿಸಿದ್ದೇನೆ. ಪ್ರಾದೇಶಿಕ ಅಸಮಾನತೆ ಹೋಗಲಾಡಿಸಲು ಈ ಭಾಗಕ್ಕೆ ಮಾನ್ಯತೆ ಸಿಗಬೇಕಿದೆ. ರಾಜ್ಯ ಎಲ್ಲ ಜಿಲ್ಲೆಗಳಲ್ಲಿಯೂ ಒಂದು ಸುತ್ತಿನ ಪ್ರಚಾರ ಕೈಗೊಂಡಿದ್ದೇವೆ. ಇದೀಗ ಮತ್ತೊಂದು ಸುತ್ತಿನ ಪ್ರಚಾರ ಆರಂಭಿಸಿದ್ದು, ಎಲ್ಲೆಡೆ ಗೆಲ್ಲುವ ವಾತಾವರಣ ಸೃಷ್ಟಿಯಾಗಿದೆ. ಜಯಶಾಲಿಯಾಗುವ ಸ್ಪಷ್ಟ ಸೂಚನೆಗಳು ಸಿಕ್ಕಿದೆ ಎಂದರು.

Last Updated : Jan 20, 2021, 7:40 AM IST

ABOUT THE AUTHOR

...view details