ಕರ್ನಾಟಕ

karnataka

ETV Bharat / state

ಆರೋಗ್ಯ ಇಲಾಖೆಯಿಂದ ಕೋವಿಡ್ ರ‍್ಯಾಪಿಡ್ ಆ್ಯಂಟಿಜೆನ್ ಟೆಸ್ಟ್ - ಕೋವಿಡ್ ರ‍್ಯಾಪಿಡ್ ಆ್ಯಂಟಿಜೆನ್ ಟೆಸ್ಟ್

ಆರೋಗ್ಯ ಇಲಾಖೆ ಹಾಗೂ ಪುರಸಭೆ ಸಹಯೋಗದೊಂದಿಗೆ ಕುಷ್ಟಗಿ ಪಟ್ಟಣದ 2ನೇ ವಾರ್ಡ್‌ನಲ್ಲಿ ಕೋವಿಡ್ ರ‍್ಯಾಪಿಡ್ ಆ್ಯಂಟಿಜೆನ್ ಟೆಸ್ಟ್ ನಡೆಸಲಾಯಿತು.

Kustagi
Kustagi

By

Published : Jul 31, 2020, 3:54 PM IST

ಕುಷ್ಟಗಿ /ಕೊಪ್ಪಳ: ಕುಷ್ಟಗಿ ಪಟ್ಟಣದ 2ನೇ ವಾರ್ಡ್‌ನ ಶ್ರೀ ಬುತ್ತಿ ಬಸವೇಶ್ವರ ಸಭಾಂಗಣದಲ್ಲಿ ಆರೋಗ್ಯ ಇಲಾಖೆ ಹಾಗೂ ಪುರಸಭೆ ಸಹಯೋಗದೊಂದಿಗೆ ಕೋವಿಡ್ ರ‍್ಯಾಪಿಡ್ ಆ್ಯಂಟಿಜೆನ್ ಟೆಸ್ಟ್ ನಡೆಸಲಾಯಿತು.

ವಾರ್ಡ್‌ನಲ್ಲಿ ಕೆಮ್ಮು, ಗಂಟಲು ನೋವು, ಜ್ವರ, ಉಸಿರಾಟದ ಲಕ್ಷಣಗಳು ಕಂಡುಬಂದವರು ತಮ್ಮ ಗಂಟಲು ದ್ರವ ಮಾದರಿಯನ್ನು ಪರೀಕ್ಷೆಗೆ ನೀಡಿದರು. 5 ಜನ ಗರ್ಭಿಣಿಯರು, 13 ಜನ ವೃದ್ಧರು ಸೇರಿದಂತೆ ಒಟ್ಟು 26 ಮಂದಿಗೆ ಟೆಸ್ಟ್​ ನಡೆಸಲಾಯಿತು.

ಈ ವೇಳೆ ಲ್ಯಾಬ್ ಟೆಕ್ನಿಷಿಯನ್ ಕೊಂಡಪ್ಪ, ಪಾಲಜ್ಜ, ಸುಭಾನಿ, ಶಿಕ್ಷಕ ದೇವಪ್ಪ ಗಡಾದ್, ಅಂಗನವಾಡಿ ಕಾರ್ಯಕರ್ತೆ ಶಿವಲಿಂಗಮ್ಮ ಹಿರೇಮಠ, ನೈರ್ಮಲ್ಯ ಅಧಿಕಾರಿ ಮಹೇಶ ಅಂಗಡಿ, ಆರೋಗ್ಯ ಸಹಾಯಕಿ ಶಿಲ್ಪಾ ಸೇರಿ ಮತ್ತಿತರರು ಉಪಸ್ಥಿತರಿದ್ದರು.

ABOUT THE AUTHOR

...view details