ಕರ್ನಾಟಕ

karnataka

ETV Bharat / state

ಕುಷ್ಟಗಿ ಎಪಿಎಂಸಿಗೆ ನೂತನ ಅಧ್ಯಕ್ಷ, ಉಪಾಧ್ಯಕ್ಷೆ ಆಯ್ಕೆ - ಕುಷ್ಟಗಿ ಎಪಿಎಂಸಿಗೆ ನೂತನ ಅಧ್ಯಕ್ಷ, ಉಪಾಧ್ಯಕ್ಷೆ ಸುದ್ದಿ

ಮುದೇನೂರು ಕ್ಷೇತ್ರದಿಂದ ಶಂಕರಗೌಡ ಪಾಟೀಲ್​​ ಜಾಲಿಹಾಳ ಅಧ್ಯಕ್ಷ ಸ್ಥಾನಕ್ಕೆ ಹಾಗೂ ಶರಣವ್ವ ಚೂರಿ ಉಪಾಧ್ಯಕ್ಷೆ ಸ್ಥಾನಕ್ಕೆ ಪ್ರತ್ಯೇಕ ನಾಮಪತ್ರ ಸಲ್ಲಿಸಿದ್ದರು. ನಾಮಪತ್ರಗಳು ಕ್ರಮಬದ್ದವಾಗಿರುವ ಹಿನ್ನೆಲೆಯಲ್ಲಿ ತಹಶೀಲ್ದಾರ್ ಎಂ. ಸಿದ್ದೇಶ ಅವಿರೋಧ ಆಯ್ಕೆ ಎಂದು ಘೋಷಿಸಿದರು.

Kushtagi APMC elected new President and Vice President
ಕುಷ್ಟಗಿ ಎಪಿಎಂಸಿಗೆ ನೂತನ ಅಧ್ಯಕ್ಷ, ಉಪಾಧ್ಯಕ್ಷೆ ಆಯ್ಕೆ

By

Published : May 28, 2020, 6:10 PM IST

ಕುಷ್ಟಗಿ (ಕೊಪ್ಪಳ): ಎಪಿಎಂಸಿಗೆ ನೂತನ ಅಧ್ಯಕ್ಷರಾಗಿ ಶಂಕ್ರಗೌಡ ಹನಮಗೌಡ ಪಾಟೀಲ್​​​​ ಜಾಲಿಹಾಳ, ಉಪಾಧ್ಯಕ್ಷೆಯಾಗಿ ಶರಣವ್ವ ಹನಮಂತಪ್ಪ ಚೂರಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಅಧ್ಯಕ್ಷರಾಗಿದ್ದ ಶರಣಗೌಡ ಲಿಂಗದಳ್ಳಿ, ಉಪಾಧ್ಯಕ್ಷ ಸಂಗಪ್ಪ ಸೊಬರದ ಅವರ 10 ತಿಂಗಳ ಅವಧಿ ಪೂರೈಸಿದ್ದರಿಂದ ರಾಜೀನಾಮೆ ನೀಡಿದ್ದರು. ರಾಜಿನಾಮೆಯಿಂದ ತೆರವಾದ ಸ್ಥಾನಕ್ಕೆ ಗುರುವಾರ ಚುನಾವಣೆ ನಿಗದಿಯಾಗಿತ್ತು. ಇಲ್ಲಿನ ಎಪಿಎಂಸಿ ಸಭಾಂಗಣದಲ್ಲಿ ನಡೆದ ಚುನಾವಣೆಯಲ್ಲಿ ಚುನಾವಣಾಧಿಕಾರಿಯಾಗಿ ತಹಶೀಲ್ದಾರ್ ಎಂ.ಸಿದ್ದೇಶ, ಎಪಿಎಂಸಿ ಕಾರ್ಯದರ್ಶಿ ಮರಿಬಸಪ್ಪ ಸಜ್ಜನ ಸಮ್ಮುಖದಲ್ಲಿ ನಡೆದ ಚುನಾವಣೆಯಲ್ಲಿ ಒಟ್ಟು 16 ಜನ ಸದಸ್ಯರು ಭಾಗವಹಿಸಿದ್ದರು.

ಕುಷ್ಟಗಿ ಎಪಿಎಂಸಿಗೆ ನೂತನ ಅಧ್ಯಕ್ಷ, ಉಪಾಧ್ಯಕ್ಷೆ ಆಯ್ಕೆ

ಮುದೇನೂರು ಕ್ಷೇತ್ರದಿಂದ ಶಂಕರಗೌಡ ಪಾಟೀಲ ಜಾಲಿಹಾಳ ಅಧ್ಯಕ್ಷ ಸ್ಥಾನಕ್ಕೆ ಹಾಗೂ ಶರಣವ್ವ ಚೂರಿ ಉಪಾಧ್ಯಕ್ಷೆ ಸ್ಥಾನಕ್ಕೆ ಪ್ರತ್ಯೇಕ ನಾಮಪತ್ರ ಸಲ್ಲಿಸಿದ್ದರು. ನಾಮಪತ್ರಗಳು ಕ್ರಮಬದ್ದವಾಗಿರುವ ಹಿನ್ನೆಲೆಯಲ್ಲಿ ತಹಶೀಲ್ದಾರ್ ಎಂ. ಸಿದ್ದೇಶ ಅವಿರೋಧ ಆಯ್ಕೆ ಎಂದು ಘೋಷಿಸಿದರು.

ಬಿಜೆಪಿ ಬೆಂಬಲಿತ 8, ಕಾಂಗ್ರೆಸ್​ ಬೆಂಬಲಿತ 3 ಸದಸ್ಯರು ಒಟ್ಟು 11 ರೈತ ಕ್ಷೇತ್ರಗಳ ಸದಸ್ಯರು, ಬಿಜೆಪಿಯ 3 ನಾಮ ನಿರ್ದೇಶಿತ ಸದಸ್ಯರು ಹಾಗೂ ಸಹಕಾರ ಸಂಘದಿಂದ 2 ಸದಸ್ಯರು ಒಟ್ಟು 16 ಸದಸ್ಯರು ಭಾಗವಹಿದ್ದರು. ಪ್ರಸಕ್ತ ಅವಧಿಯಿಂದ 20 ತಿಂಗಳವರೆಗೂ ತಲಾ 6 ತಿಂಗಳಿನಂತೆ ಅಧ್ಯಕ್ಷರಾಗಿರುವ ಶಂಕರಗೌಡ ಜಾಲಿಹಾಳ, ನಂತರದ ಅವಧಿಯಲ್ಲಿ ಹನಮಂತಪ್ಪ ಬಿಂಗಿ, ಶರಣಪ್ಪ ಹುಲ್ಲೂರು ಅವರಿಗೆ ಅಧಿಕಾರ ನಡೆಸಲಿದ್ದಾರೆ. ಇನ್ನು ಶರಣಮ್ಮ ಚೂರಿ ಅವರಿಗೆ 20 ತಿಂಗಳ ಅವಧಿಯವರೆಗೆ ಅಧಿಕಾರ ನಿರ್ವಹಿಸುವ ಅವಕಾಶ ಸಿಕ್ಕಿದೆ.

ABOUT THE AUTHOR

...view details