ಕೊಪ್ಪಳ: ನಗರದ ಅಗ್ನಿಶಾಮಕ ಠಾಣೆಯ ಠಾಣಾಧಿಕಾರಿ ಜಿ. ಕೃಷ್ಣೋಜಿರಾವ್ ಭೋಸ್ಲೆ ಅವರಿಗೆ ರಾಷ್ಟ್ರಪತಿ ಪದಕ ಲಭಿಸಿದೆ.
ರಾಷ್ಟ್ರಪತಿ ಪದಕಕ್ಕೆ ಭಾಜನರಾದ ಕೊಪ್ಪಳದ ಜಿ. ಕೃಷ್ಣೋಜಿರಾವ್ ಭೋಸ್ಲೆ - president's medal
ಕೊಪ್ಪಳ ನಗರದ ಅಗ್ನಿಶಾಮಕ ಠಾಣೆಯ ಠಾಣಾಧಿಕಾರಿ ಜಿ. ಕೃಷ್ಣೋಜಿರಾವ್ ಭೋಸ್ಲೆ ಅವರು 2020-21 ನೇ ಸಾಲಿನ ರಾಷ್ಟ್ರಪತಿ ಪದಕಕ್ಕೆ ಭಾಜನರಾಗಿದ್ದಾರೆ.

ಜಿ. ಕೃಷ್ಣೋಜಿರಾವ್ ಭೋಸ್ಲೆ
ಮೂಲತಃ ಹೊಸಪೇಟೆ ತಾಲೂಕಿನ ಕಾರಿಗನೂರಿನವರಾದ ಕೃಷ್ಣೋಜಿರಾವ್ ಭೋಸ್ಲೆ ಅವರು 1992ರಲ್ಲಿ ಅಗ್ನಿಶಾಮಕ ಇಲಾಖೆಯಲ್ಲಿ ನೇಮಕಗೊಂಡು ಪ್ರಸ್ತುತ ಕೊಪ್ಪಳ ನಗರದಲ್ಲಿ ಅಗ್ನಿಶಾಮಕ ಠಾಣೆಯಲ್ಲಿ ಠಾಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಅವರು ತಮ್ಮ ಈ ಸೇವಾ ಅವಧಿಯಲ್ಲಿ ಸುಮಾರು 18ಕ್ಕೂ ಹೆಚ್ಚು ದುರಂತ ಪ್ರಕರಣಗಳಲ್ಲಿ ತಮ್ಮ ಜೀವದ ಹಂಗು ತೊರೆದು ಅನೇಕ ಜನರ ಪ್ರಾಣ ಉಳಿಸಿದ್ದಾರೆ. ಅವರ ಈ ಸೇವೆಗೆ ಸಿಎಂ ಪದಕ ಒಲಿದು ಬಂದಿತ್ತು. ಈಗ ಮತ್ತೆ ಕೃಷ್ಟೋಜಿರಾವ್ ಅವರು 2020-21 ನೇ ಸಾಲಿನ ರಾಷ್ಟ್ರಪತಿ ಪದಕಕ್ಕೆ ಭಾಜನರಾಗಿದ್ದಾರೆ.