ಕರ್ನಾಟಕ

karnataka

ETV Bharat / state

ಕೊಪ್ಪಳ.. ಪ್ಲಾಸ್ಟಿಕ್ ಚೀಲಗಳನ್ನು ವಶಪಡಿಸಿಕೊಂಡ ನಗರಸಭೆ ಅಧಿಕಾರಿಗಳು

ನಗರದಲ್ಲಿ ನಿಷೇಧಿತ ಪ್ಲಾಸ್ಟಿಕ್ ಮಾರಾಟ ಜೋರಾಗಿದೆ. ಆದರೆ, ನಗರಸಭೆ ಅಧಿಕಾರಿಗಳು ನೆನಪಾದಾಗೊಮ್ಮೆ, ನೆಪ ಮಾತ್ರಕ್ಕೆ ಎಂಬಂತೆ ದಾಳಿ ಮಾಡುತ್ತಾರೆ ಅಷ್ಟೇ ಎಂಬ ಮಾತುಗಳು ಸಾರ್ವಜನಿಕರಿಂದ ಕೇಳಿ ಬರುತ್ತಿವೆ..

By

Published : Feb 5, 2021, 1:32 PM IST

koppala city Municipal officials seized plastic bags
ಕೊಪ್ಪಳ: ಪ್ಲಾಸ್ಟಿಕ್ ಚೀಲಗಳನ್ನು ವಶಪಡಿಸಿಕೊಂಡ ನಗರಸಭೆ ಅಧಿಕಾರಿಗಳು

ಕೊಪ್ಪಳ: ಪ್ಲಾಸ್ಟಿಕ್ ಮಾರಾಟ ನಿಷೇಧವಿದ್ದರೂ ಸಹ ಕೊಪ್ಪಳದಲ್ಲಿ ಪ್ಲಾಸ್ಟಿಕ್ ಮಾರಾಟ ಅವ್ಯಾಹತವಾಗಿ ಮುಂದುವರೆದಿದೆ. ನಗರಸಭೆ ಅಧಿಕಾರಿಗಳು ದಾಳಿ ನಡೆಸಿ ಪ್ಲಾಸ್ಟಿಕ್ ಚೀಲಗಳನ್ನು ವಶಪಡಿಸಿಕೊಂಡಿದ್ದಾರೆ.

ಪ್ಲಾಸ್ಟಿಕ್ ಚೀಲಗಳನ್ನು ವಶಪಡಿಸಿಕೊಂಡ ನಗರಸಭೆ ಅಧಿಕಾರಿಗಳು

ನಗರದ ಟಾಂಗಾಕೂಟದ ಬಳಿ ಅಂಗಡಿಯ ಹೆಸರು ಗೊತ್ತಾಗದ ರೀತಿ ವಿಳಾಸ ಬರೆದಿದ್ದ ಪ್ಲಾಸ್ಟಿಕ್ ತುಂಬಿದ ಒಟ್ಟು 9 ಬ್ಯಾಗ್​ಗಳನ್ನು ನಗರಸಭೆ ಆಯುಕ್ತ ಮಂಜುನಾಥ ನೇತೃತ್ವದಲ್ಲಿ ಅಧಿಕಾರಿಗಳು ದಾಳಿ ನಡೆಸಿ ವಶಪಡಿಸಿಕೊಂಡಿದ್ದಾರೆ. ಪ್ಲಾಸ್ಟಿಕ್ ಬ್ಯಾಗ್​ಗಳ ವಾರಸುದಾರರು ಯಾರು ಎಂಬುದು ತಿಳಿಯದ ಕಾರಣ ಯಾರ ಮೇಲೆ ಪ್ರಕರಣ ದಾಖಲಿಸಬೇಕು ಎಂಬುದು ಈಗ ನಗರಸಭೆಗೆ ತಲೆ ನೋವಾಗಿ ಪರಿಣಮಿಸಿದೆ.

ಈ ಸುದ್ದಿಯನ್ನೂ ಓದಿ:ಕಟ್ಟಿಗೆ ಬಳಸಿ ಒಲೆಯಲ್ಲಿ ಅಡುಗೆ ಮಾಡುವ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ

ನಗರದಲ್ಲಿ ನಿಷೇಧಿತ ಪ್ಲಾಸ್ಟಿಕ್ ಮಾರಾಟ ಜೋರಾಗಿದೆ. ಆದರೆ, ನಗರಸಭೆ ಅಧಿಕಾರಿಗಳು ನೆನಪಾದಾಗೊಮ್ಮೆ, ನೆಪ ಮಾತ್ರಕ್ಕೆ ಎಂಬಂತೆ ದಾಳಿ ಮಾಡುತ್ತಾರೆ ಅಷ್ಟೇ ಎಂಬ ಮಾತುಗಳು ಸಾರ್ವಜನಿಕರಿಂದ ಕೇಳಿ ಬರುತ್ತಿವೆ.

ABOUT THE AUTHOR

...view details