ಕರ್ನಾಟಕ

karnataka

ಗಂಗಾವತಿಯ ಗ್ರಾಮೀಣ ಭಾಗದಲ್ಲಿ ಕಾರ ಹುಣ್ಣಿಮೆಯ ಕರಿ ಹರಿಯುವ ಸ್ಪರ್ಧೆ

By

Published : Jun 5, 2020, 11:32 PM IST

ಕೃಷಿ ಚಟುವಟಿಕೆಯಲ್ಲಿ ರೈತನ ಒಡನಾಡಿಗಳಾಗಿ ಹೊಲವನ್ನು ಉಳುವ, ಬಿತ್ತುವ ಮತ್ತು ಹೊಲ ಸ್ವಚ್ಛ ಮಾಡುವ ಕಾರ್ಯದಲ್ಲಿ ಪ್ರಮುಖ ಪಾತ್ರ ವಹಿಸುವ ಎತ್ತುಗಳಿಗೆ ಗ್ರಾಮೀಣ ಭಾಗದಲ್ಲಿ ಕಾರಹುಣ್ಣಿಮೆಯ ಅಂಗವಾಗಿ ಕರಿ ಹರಿಯುವ ಸ್ಪರ್ಧೆ ಏರ್ಪಡಿಸಲಾಗಿತ್ತು.

ಕರಿ ಹರಿಯುವ ಸ್ಪರ್ಧೆ
ಕರಿ ಹರಿಯುವ ಸ್ಪರ್ಧೆ

ಗಂಗಾವತಿ: ಕಾರು ಹುಣ್ಣಿಮಯ ಪ್ರಯುಕ್ತ ತಾಲೂಕಿನ ಹೇರೂರು ಗ್ರಾಮದಲ್ಲಿ ನಡೆದ 30 ಮೀಟರ್ ಕರಿ ಹರಿಯುವ ಸ್ಪರ್ಧೆಯಲ್ಲಿ 20 ಜೋಡಿ ಎತ್ತುಗಳನ್ನು ಹಿಂದಿಕ್ಕಿ ಕರಿಯಪ್ಪ ತೇಜಪ್ಪ ಬಂಡ್ರಾಳ್ ಎಂಬವರ ಎತ್ತುಗಳು ಮೊದಲ ಸ್ಥಾನ ಪಡೆದವು.

ಕರಿ ಹರಿಯುವ ಸ್ಪರ್ಧೆ

ಬಹುತೇಕ ಗ್ರಾಮಗಳ ಪ್ರವೇಶ ದ್ವಾರದಲ್ಲಿರುವ ಗುಡ್ಡೆಕಲ್ಲು ಸ್ಥಳದಲ್ಲಿ ಕೊಬ್ಬರಿ ಬಟ್ಟಲು, ಬೆಲ್ಲದ ಗಂಟು ಕಟ್ಟಲಾಗುತ್ತದೆ. ದೂರದಿಂದ ಓಡಿ ಬರುವ ಎತ್ತುಗಳ ಪೈಕಿ ಯಾವ ಜೋಡಿ ಎತ್ತುಗಳು ಗಂಟನ್ನು ಕಚ್ಚಿ ಹರಿಯುತ್ತವೆಯೋ ಅವು ಸ್ಪರ್ಧೆಯ ವಿಜೇತ ಎಂದು ಪರಿಗಣಿಸಲಾಗುತ್ತದೆ.

ಗೆದ್ದ ಎತ್ತುಗಳಿಗೆ ನಾನಾ ಬಣ್ಣಗಳಿಂದ ಅಲಂಕಾರ ಮಾಡಿ, ಕೊಂಬುಗಳನ್ನು ಸಿಂಗರಿಸಿ ಗ್ರಾಮದ ದೇಗುಲಗಳಿಗೆ ಕರೆದೊಯ್ದು ಪೂಜೆ ಸಲ್ಲಿಸಲಾಗುತ್ತದೆ. ಬಳಿಕ ಗ್ರಾಮಸ್ಥರು ಗೆದ್ದ ಎತ್ತಿನ ಜೋಡಿಗೆ ಪೂಜೆ ಸಲ್ಲಿಸಿದರು.

ABOUT THE AUTHOR

...view details