ಕರ್ನಾಟಕ

karnataka

By

Published : Apr 7, 2022, 8:17 PM IST

ETV Bharat / state

ನವ ವೃಂದಾವನ ಗಡ್ಡೆಯ ವಾರಸತ್ವ ವಿವಾದ: ಹೈಕೋರ್ಟ್ ಮಹತ್ವದ​ ಆದೇಶ

ನವವೃಂದಾವನ ಗಡ್ಡೆಯ ಪೂಜೆ ಮತ್ತು ಧಾರ್ಮಿಕ ವಾರಸತ್ವಕ್ಕೆ ಸಂಬಂಧಿಸಿದಂತೆ ಮಂತ್ರಾಲಯದ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮೀಜಿಮಠ ಮತ್ತು ಬೆಂಗಳೂರಿನ ಉತ್ತರಾಧಿ ಮಠದ ನಡುವೆ ವ್ಯಾಜ್ಯವಿತ್ತು. ಈ ಸಂಬಂಧ ವ್ಯಾಜ್ಯ ಇನ್ನೂ ಇತ್ಯರ್ಥವಾಗದ ಹಿನ್ನೆಲೆ ಇದೀಗ ಹೈಕೋರ್ಟ್​ ಮಧ್ಯಂತರ ಆದೇಶ ನೀಡಿದೆ.

ನವವೃಂದಾವನ ಗಡ್ಡೆಯ ಪೂಜೆ
ನವವೃಂದಾವನ ಗಡ್ಡೆಯ ಪೂಜೆ

ಗಂಗಾವತಿ:ತಾಲೂಕಿನ ತುಂಗಭದ್ರಾ ನದಿ ತಟದಲ್ಲಿರುವ ಆನೆಗೊಂದಿಯ ನವವೃಂದಾವನದಲ್ಲಿರುವ ಒಂಬತ್ತು ಯತಿಗಳ ಪೈಕಿ, ಇದೇ ಏಪ್ರಿಲ್ 9ರಿಂದ ಕವೀಂದ್ರ ತೀರ್ಥರ ಮತ್ತು 18ರಿಂದ ವಾಗೀಶ ತೀರ್ಥರ ಮೂರು ದಿನಗಳ ಆರಾಧನಾ ಮಹೋತ್ಸವ ನಡೆಯಲಿದೆ. ಕಳೆದ ಹಲವು ದಶಕಗಳಿಂದ ನವವೃಂದಾವನ ಗಡ್ಡೆಯ ಪೂಜೆ ಮತ್ತು ಧಾರ್ಮಿಕ ವಾರಸತ್ವಕ್ಕೆ ಸಂಬಂಧಿಸಿದಂತೆ ಮಂತ್ರಾಲಯದ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮೀಜಿಮಠ ಮತ್ತು ಬೆಂಗಳೂರಿನ ಉತ್ತರಾಧಿ ಮಠದ ನಡುವೆ ವ್ಯಾಜ್ಯವಿದ್ದು, ಇದು ಹೈಕೋಟ್​​ವರೆಗೂ ಹೋಗಿದೆ. ವ್ಯಾಜ್ಯ ಇನ್ನೂ ಇತ್ಯರ್ಥವಾಗದ ಹಿನ್ನೆಲೆ ಇದೀಗ ಹೈಕೋರ್ಟ್​ ಮಧ್ಯಂತರ ಆದೇಶ ನೀಡಿದೆ.

ಹೈಕೋರ್ಟ್​ ಆದೇಶ

ಹೈಕೋರ್ಟ್​ ಏ. 9ರಿಂದ 10ರ ಮಧ್ಯಾಹ್ನದವರೆಗೆ ಮಂತ್ರಾಲಯದ ಮಠಕ್ಕೆ ಮತ್ತು ಏ.10ರ ಮಧ್ಯಾಹ್ನದಿಂದ ಏ.11ರ ಸಂಜೆವರೆಗೂ ಉತ್ತರಾಧಿ ಮಠ ಪೂಜೆ ಸಲ್ಲಿಸಲು ಅವಕಾಶ ನೀಡಿದೆ. ಅಲ್ಲದೇ ಏ.18ರಿಂದ ನಡೆಯುವ ವಾಗೀಶ ತೀರ್ಥರ ಆರಾಧನೆಗೆ ಸಂಬಂಧಿಸಿದಂತೆ 18ರಂದು ಇಡೀ ದಿನ ಮತ್ತು ಏ.19ರ ಮಧ್ಯಾಹ್ನದವರೆಗೆ ಮಂತ್ರಾಲಯದ ಮಠಕ್ಕೆ ಅವಕಾಶ ನೀಡಿದೆ. ಬಳಿಕ ಏ.19ರ ಮಧ್ಯಾಹ್ನದಿಂದ ಏ.20ರ ಸಂಜೆವರೆಗೂ ತಲಾ ಒಂದುವರೆ ದಿನ ಆರಾಧನೆ ನಡೆಸುವಂತೆ ಹೈಕೋರ್ಟ್​ ಉಭಯ ಮಠಗಳಿಗೆ ಸೂಚನೆ ನೀಡಿದೆ.

ಏ.18ರಿಂದ ನಡೆಯುವ ವಾಗೀಶ ತೀರ್ಥರ ಆರಾಧನೆಗೆ ಸಂಬಂಧಿಸಿದಂತೆ ಆ ಇಡೀ ದಿನ ಮತ್ತು ಏ.19ರ ಮಧ್ಯಾಹ್ನದವರೆಗೆ ಮಂತ್ರಾಲಯದ ಮಠಕ್ಕೆ ಅವಕಾಶ ನೀಡಲಾಗಿದೆ. ಬಳಿಕ ಏ.19ರ ಮಧ್ಯಾಹ್ನದಿಂದ ಏ. 20ರ ಸಂಜೆವರೆಗೂ ತಲಾ ಒಂದುವರೆ ದಿನ ಆರಾಧನೆ ನಡೆಸುವಂತೆ ಹೈಕೋರ್ಟ್​ ಉಬಯ ಮಠಗಳಿಗೆ ಸೂಚನೆ ನೀಡಿದೆ.

ಇದನ್ನೂ ಓದಿ:ವಿದೇಶಿ ಪ್ರಜೆಯ ಹೇಬಿಯಸ್ ಕಾರ್ಪಸ್ ಅರ್ಜಿ: ಸರ್ಕಾರದ ಬಂಧನ ಆದೇಶ ಎತ್ತಿಹಿಡಿದ ಹೈಕೋರ್ಟ್

ABOUT THE AUTHOR

...view details