ಗಂಗಾವತಿ:ಕನಕಗಿರಿ ವಿಧಾನಸಭಾ ಕ್ಷೇತ್ರದ ಶಾಸಕ ಬಸವರಾಜ ಧಡೆಸ್ಗೂರು ಅವರಿಗೆ ರಾಖಿ ಕಟ್ಟಿದ ಪಕ್ಷದ ಕಾರ್ಯಕರ್ತೆಯರು ಹಾಗೂ ನಾನಾ ಸಂಘಟನೆಗಳ ಮಹಿಳಾ ಪದಾಧಿಕಾರಿಗಳು, ಭಾತೃತ್ವ ಬೆಸೆಯುವುದರ ಜೊತೆಗೆ ಕೆಲ ಬೇಡಿಕೆಗಳನ್ನು ಶಾಸಕರ ಮುಂದಿಟ್ಟರು.
ಗಂಗಾವತಿ: ಶಾಸಕರಿಗೆ ರಾಖಿಕಟ್ಟಿದ ಮಹಿಳೆಯರು: ಸಮಸ್ಯೆಗಳಿಗೆ ಸ್ಪಂದಿಸುವಂತೆ ಬೇಡಿಕೆ - MLA Basavaraj dhadesguru
ರಕ್ಷಾಬಂಧನ ಹಬ್ಬದ ಅಂಗವಾಗಿ ಕಾರಟಗಿ ಪಟ್ಟಣದಲ್ಲಿ ಶಾಸಕ ಬಸವರಾಜ ಅವರಿಗೆ ಮಹಿಳೆಯರು ರಾಖಿ ಕಟ್ಟಿ, ಕೆಲ ಬೇಡಿಕೆಗಳನ್ನು ಶಾಸಕರ ಮುಂದಿಟ್ಟರು.

ಶಾಸಕ ಬಸವರಾಜ ಅವರಿಗೆ ರಾಖಿ ಕಟ್ಟಿದ ಮಹಿಳೆಯರು
ಶಾಸಕರಿಗೆ ರಾಖಿಕಟ್ಟಿದ ಮಹಿಳೆಯರು
ರಕ್ಷಾಬಂಧನ ಹಬ್ಬದ ಅಂಗವಾಗಿ ಕಾರಟಗಿ ಪಟ್ಟಣದಲ್ಲಿ ಶಾಸಕ ಬಸವರಾಜ ಅವರಿಗೆ ರಾಖಿ ಕಟ್ಟಿದ ಮಹಿಳೆಯರು, ಕ್ಷೇತ್ರದಲ್ಲಿನ ಮಹಿಳೆಯರ ಸಮಸ್ಯೆ, ಮಹಿಳೆಯರ ಶೈಕ್ಷಣಿಕ, ಆರೋಗ್ಯ ಕ್ಷೇತ್ರದ ಪ್ರಗತಿಗೆ ಹೆಚ್ಚಿನ ಆದ್ಯತೆ ನೀಡುವಂತೆ ಮನವಿ ಮಾಡಿಕೊಂಡರು.
ಪಕ್ಷದಲ್ಲಿನ ಆಯಾಕಟ್ಟಿನ ಜಾಗಕ್ಕೆ ಮಹಿಳೆಯರನ್ನು ನೇಮಕಾತಿ ಮಾಡಬೇಕು. ಪಕ್ಷದ ಸಂಘಟನೆ, ಚಟುವಟಿಕೆಯಲ್ಲಿ ಮೊದಲ ಆದ್ಯತೆ ನೀಡಬೇಕು ಎಂದು ಪಕ್ಷದ ಮಹಿಳಾ ಮೋರ್ಚಾದ ಪದಾಧಿಕಾರಿಗಳು ಶಾಸಕ ಬಸವರಾಜ ಅವರಿಗೆ ಬೇಡಿಕೆ ಇಟ್ಟಿದ್ದಾರೆ ಎಂದು ತಿಳಿದು ಬಂದಿದೆ.
Last Updated : Aug 4, 2020, 4:59 PM IST